ಬೆಂಗಳೂರು: ಬಿಜೆಪಿಯ ಜತೋತ್ಸವ ಕಾರ್ಯಕ್ರಮ ಇದೀಗ ಮೂರನೇ ಬಾರಿಗೆ ಮುಂದೂಡಿಕೆಯಾಗಿದೆ. ಉಮೇಶ್ ಕತ್ತಿ ನಿಧನದ ಹಿನ್ನೆಲೆ ಈ ಬಾರಿ ಮುಂದೂಡಿಕೆಯಾಗಿದೆ. ಈ ಸಂಬಂಧ ಮಾತನಾಡಿದ ಸಚಿವ ಡಾ ಸುಧಾಕರ್, ಶೋಕ ಇರುವ ಕಾರಣ ಮುಂದೂಡಿಕೆಯಾಗಿದೆ ಎಂದಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದು,ಕಾಂಗ್ರೆಸ್ ಗೆ ಜನಸ್ನೇಹಿ ಎಂಬ ಪದವೇ ಗೊತ್ತಿಲ್ಲ. ಸಾವು ಸಂಭವಿಸಿದಂತ ಸಂದರ್ಭದಲ್ಲಿ ಸೂತಕದ ಮನೆಯಲ್ಲಿ ಅವರೇನು ಮಾಡಿಕೊಂಡರು ಎಂಬುದು ಎಲ್ಲರು ನೋಡಿದ್ದಾರೆ. ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಜನಪರವಾಗಿ ಯಾರಿದ್ದಾರೆ ಎಂಬುದನ್ನು ಜನ ನೋಡುತ್ತಾರೆ. ಯಾವುದೇ ಸೂಕ್ಷ್ಮವಾದ ಘಟನೆ ನಡೆದಾಗ ನಾವೂ ಅದಕ್ಕೆ ಸ್ಪಂದಿಸುತ್ತೀವಿ. ಆದರೆ ಅವರಿಗೆ ಅವರ ಕಾರ್ಯಕ್ರಮವೇ ಮುಖ್ಯವಾಗಿತ್ತು. ಅದಕ್ಕೆ ಆಚರಸಿದ್ದಾರೆ ಎಂದಿದ್ದಾರೆ.
ಇನ್ನು ಕಾರ್ಯಕ್ರಮ ಮುಂದೂಡಿಕೆ ಮಾಡಿದ್ದರ ಬಗ್ಗೆ ಮಾತನಾಡಿದ್ದು, ಎರಡೇ ಕಾರಣದಿಂದ ಇದನ್ನು ಮುಂದೂಡಿದ್ದೀವಿ. ಅಂದು ನಮ್ಮ ಕಾರ್ಯಕರ್ತ ಪ್ರವೀಣ್ ಹತ್ಯೆಯಾಗಿತ್ತು. ಹೀಗಾಗಿ ಅಂದು ಮುಂದೂಡಿದ್ದೀವಿ. ಇಂದು ಸಚಿವರ ಹಠಾತ್ ನಿಧನದಿಂದ ಮುಂದೂಡಿದ್ದೀವಿ. ಆದರೆ ಶನಿವಾರ ಯಾವುದೇ ಕಾರಣಕ್ಕೂ ಮುಂದೂಡಿಕೆಯಾಗಲ್ಲ. ಕಾಂಗ್ರೆಸ್ ನಾಯಕರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಅನಿವಾರ್ಯ ಕಾರಣದಿಂದ ಜನೋತ್ಸವ ಕಾರ್ಯಕ್ರಮ ಮುಂದೂಡಲಾಯಿತು. ಶೋಕದ ಸಮಯದಲ್ಲಿ ಕಾರ್ಯಕ್ರಮ ಮಾಡುವುದು ಸರಿಯಲ್ಲ ಎಂದಿದ್ದಾರೆ.