ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಏ. 14 : ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಡಾ.ಬಿ.ಆರ್. ಅಂಬೇಡ್ಕರ್‍ರವರ 134ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಿಸಿಸಿ ಅಧ್ಯಕ್ಷರಾದ ತಾಜ್‍ಪೀರ್ ಮಾತನಾಡಿ, ಅಂಬೇಡ್ಕರ್‍ರವರು ತಮ್ಮ ಜೀವಿತಾವಧಿಯಲ್ಲಿ ಅನುಭವಿಸಿದ ಕಷ್ಠಗಳನ್ನು ಬೇರೆ ಯಾವ ಜನಾಂಗದವರು ಅನುಭವಿಸಬಾರದೆಂದು ಅವರು ರಚನೆ ಮಾಡಿದ ಸಂವಿಧಾನದಲ್ಲಿ ಎಲ್ಲರಿಗೂ ಸಹಾ ಉತ್ತಮವಾದ ಸೌಲಭ್ಯ ಸಿಗುವಂತೆ ಮಾಡಿದರು. ಪ್ರಪಂಚದಲ್ಲಿಯೇ ನಮ್ಮ ದೇಶ ಉತ್ತಮವಾದ ಪ್ರಜಾಪ್ರಭುತ್ವವನ್ನು ಹೊಂದಿದ ದೇಶವಾಗಿದೆ. ಅಂಬೇಡ್ಕರ್ ಕೇವಲ ಆರ್ಥಿಕ ತಜ್ಞರಾಗಿರದೆ, ತತ್ವಜ್ಞಾನಿ, ರಾಜಕೀಯ ಮುತ್ಸದ್ದಿ, ನ್ಯಾಯವಾದಿ ,ಪ್ರಗತಿಪರ ಚಿಂತಕ ಹೀಗೆ ವಿಶೇಷ ಗುಣಗಳ ಗಣಿ ಆಗಿದ್ದವರು. ಸಮಾನತೆ ಅನ್ನುವುದು ಕೇವಲ ಒಂದು ಜನಾಂಗಕ್ಕೆ ಅಲ್ಲ, ಯಾರು ಹಿಂದುಳಿದಿದ್ದಾರೆ ಅವರೆಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂದು ಪ್ರತಿಪಾದಿಸಿದವರು ಅಂಬೇಡ್ಕರ್ ರವರಾಗಿದ್ದರು ಎಂದರು.
ಸರ್ಕಾರದ ಗ್ಯಾರೆಂಟಿ ಯೋಜನೆಯ ಜಿಲ್ಲಾಧ್ಯಕ್ಷರಾದ ಶಿವಣ್ಣ ಮಾತನಾಡಿ, ಅಂಬೇಡ್ಕರ್ ಅವರು ಚಿಂತನೆಗಳು ಒಂದು ವರ್ಗ, ಜಾತಿ ,ಧರ್ಮಕ್ಕೆ ಸೀಮಿತವಾದದಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುವ ಎಲ್ಲರಿಗೂ ಅನ್ವಯವಾಗುತ್ತವೆ ಅಂಬೇಡ್ಕರ್ ಅವರು ಶಾಲಾ ,ಕಾಲೇಜುಗಳಲ್ಲಿ ಓದುವಾಗ ಜಾತಿ ಪದ್ಧತಿಯಿಂದ ಆಗುತ್ತಿದ್ದ ನೋವುಗಳನ್ನು ಸಹಿಸಿಕೊಂಡು ಮುಂದೆ ಅವು ಮರುಕಳಿಸದಂತೆ ಬೇರೆಯವರಿಗೆ ಇದರಿಂದ ನೋವಾಗಬಾರದೆಂದು ತೀರ್ಮಾನಿಸಿ ಒಂದು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಮಾಡಿದ ಕೀರ್ತಿ ಸಂವಿಧಾನ ಶಿಲ್ಪಿಗೆ ಸಲ್ಲುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಉಮಾಪತಿ, ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ, ಸಂಪತ್ ಕುಮಾರ್ ನಗರಸಭಾ ಸದಸ್ಯರಾದ ಮೀನಾಕ್ಷಿ, ಮುಖಂಡರುಗಳಾದ ಎನ್.ಡಿ.ಕುಮಾರ್, ಖುದ್ದುಸ್, ಮುದಾಸಿರ್ ಪ್ರಕಾಶ್ ರಾಮ ನಾಯ್ಕ್, ಖಾಸಿಂ ಆಲಿ, ಗ್ಯಾರೆಂಟಿ ತಾಲ್ಲೂಕು ಅಧ್ಯಕ್ಷ ಪ್ರಕಾಶ್, ರಹಮತ್ತುಲ್ಲಾ, ನರಸಿಂಹ ಸೇರಿದಂತೆ ಇತರರು ಭಾಗವಹಿಸಿದ್ದರು.

