Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಡಾ.ಬಿ.ಆರ್. ಅಂಬೇಡ್ಕರ್ ಅವರು ಸಮಾಜ ಸುಧಾರಣೆಗಾಗಿ ಅನುಭವಿಸಿದ ನೋವನ್ನು ಎಲ್ಲೂ ಬಹಿರಂಗಪಡಿಸಲಿಲ್ಲ : ಸಿ.ಎನ್ ಮೋಹನ್ 

---Advertisement---

ಸುದ್ದಿಒನ್, ಚಿತ್ರದುರ್ಗ, ಏ,14 :  ಚಿಕ್ಕ ಕೆಲಸ ಮಾಡಿ ದೊಡ್ಡ ಪ್ರಶಂಸೆ ಪಡೆಯುವ ಈ ಹೊತ್ತಿನಲ್ಲಿ, ಅಗಾಧವಾಗಿ ಕೆಲಸ ಮಾಡಿ,ಅಪರಿಮಿತ ನೋವನ್ನು ಅನುಭವಿಸಿದರೂ ಅದನ್ನೆಂದು ಬಹಿರಂಗವಾಗಿ ಹೇಳಿಕೊಳ್ಳದ ಘನ ವ್ಯಕ್ತಿತ್ವ ಡಾ.ಅಂಬೇಡ್ಕರ್ ಅವರದಾಗಿತ್ತು ಎಂದು ಎಸ್ ಜೆ ಎಂ ಪಾಲಿಟೆಕ್ನಿಕ್ ನ ಅಧೀಕ್ಷಕ ಸಿ.ಎನ್.ಮೋಹನ್ ಅವರು ಸ್ಮರಿಸಿದರು.

ನಗರದ ಎಸ್ ಜೆ ಎಂ ಪಾಲಿಟೆಕ್ನಿಕ್ ನಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 133ನೇ ಜನ್ಮ ದಿನದ ಅಂಗವಾಗಿ ಅವರ  ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತಾಡಿದ ಅವರು ಮಹಿಳೆಯರ ಹೆರಿಗೆ ರಜಾವನ್ನು ಆರು ತಿಂಗಳ ನಿಗದಿ, ಕಾರ್ಮಿಕರಿಗಿದ್ದ ಹನ್ನೆರಡು ಗಂಟೆಗಳ ಕೆಲಸವನ್ನು ಎಂಟು ತಾಸಿಗೆ ಕಡಿತಗೊಳಿಸಿದ್ದು ಸೇರಿದಂತೆ ಅನೇಕ ಜನಕಲ್ಯಾಣ ಕಾರ್ಯಕ್ರಮ ಮಾಡಿದ ಶ್ರೇಯಸ್ಸು ಅವರದಾಗಿತ್ತು ಎಂದು ಹೇಳಿದರು.

ಕೆಳ ವರ್ಗದಲ್ಲಿ ಹುಟ್ಟಿ ಮೇಲ್ ಸ್ಥರದ ಕೆಲಸಗಳನ್ನು ಮಾಡಿದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಕುಡಿಯುವ ನೀರಿಗಾಗಿ ಸತ್ಯಾಗ್ರಹ ಮಾಡಿದ ಮೊಟ್ಟಮೊದಲಿಗರು ಎಂಬಿತ್ಯಾದಿ ವಿವರ ಜತೆಗೆ ಕುಟುಂಬದ ಹಿನ್ನೆಲೆಯನ್ನು ಗ್ರಂಥಪಾಲಕ ವೀರಯ್ಯ.ಎಂ ಅವರು ಹಂಚಿಕೊಂಡರು.

ಜಾತಿ ಮತ ಪಂಥ ಭೇದವಿಲ್ಲದ,ಲಿಂಗ ತಾರತಮ್ಯವಿರದ ಅವರ ಕನಸಿನ ಕಲ್ಯಾಣ ರಾಜ್ಯ ಸ್ಥಾಪನೆಗೆ ಶ್ರಮಿಸಿದ ಅವರ ಕಾಳಜಿ, ಹಾಗೆ ಅವರು ಮಹಿಳೆಯರು ಶಿಕ್ಷಣ ಹೊಂದಿ ಸ್ವಾವಲಂಬನೆಯಾಗಬೇಕೆಂಬ ಹಂಬಲ ಪ್ರಶ್ನಾತೀತ. ಹೀಗಾಗಿ ಅವರು ಎಲ್ಲ ಕಾಲಕ್ಕೂ ಸ್ಮರಣೆಗೆ ಭಾಜನರು ಎಂದು ಕಾಲೇಜಿನ ಎನ್. ಟಿ.ಲಿಂಗರಾಜುಅಭಿಪ್ರಾಯ ಪಟ್ಟರು.

ಪೂಜೆ ಎಂಬ ಯಾಂತ್ರಿಕ  ಶಿಷ್ಟಾಚಾರವನ್ನ ಪಕ್ಕಕ್ಕಿರಿಸಿ ಅವರು ಪ್ರತಿಪಾದಿಸಿದ  ಸರ್ವ ಸಮಾನತೆಯ ಪ್ರಜಾಪ್ರಭುತ್ವವಾದಿ ಸಂವಿಧಾನ ಅನುಸರಿಸಿದರೆ ಅದು ಎಲ್ಲಕ್ಕಿಂತ ದೊಡ್ಡದು ಎಂದು ರುದ್ರಮೂರ್ತಿ ಎಂ. ಜೆ ಅವರು ಹೇಳಿದರು.

ಜೆಎಂಐಟಿ ಕಛೇರಿ ಸಿಬ್ಬಂದಿ ನಿಟುವಳ್ಳಿಮಾಂತೇಶ್ ಅವರು ಶಸ್ತ್ರಾಸ್ರ್ತಕ್ಕಿಂತ ನಾವು ಅರಿವು ಮತ್ತು ಜ್ಞಾನ ನೀಡಬೇಕು ಎಂದು ಹೇಳಿದವರು ನಮ್ಮ ಬಾಬಾಸಾಹೇರು. ಅವನ್ನ ಪಡೆದರೆ ಯಾವುದೇ ಅವಘಡಗಳಾಗುವುದಿಲ್ಲ ಎಂದು ಹೇಳಿದ್ದಾರೆ ಎಂದರು.

ಎಸ್ ಜೆ ಎಂ ಐಟಿಐ ಕಾಲೇಜಿನ ಸಹ ತರಬೇತುದಾರ ಚಲ್ಮೇಶ್ ಮಾತನಾಡಿ ಬಹುತೇಕ ಜಾಗತಿಕ ಪದವಿ ಪಡೆದ ಪ್ರಪಂಚದ ವ್ಯಕ್ತಿಗಳಲ್ಲಿ ಅಂಬೇಡ್ಕರ್ ಅವರೊಬ್ಬರೇ.ಆ ಕಾರಣಕ್ಕೆ ಸಂವಿಧಾನ ರಚನೆಯ ಮುಖ್ಯಸ್ಥರಾಗಿ ಅವರ ಆಯ್ಕೆಗೆ ಕಾರಣ ಎಂದು ಹೇಳಿದ ಅವರು ಸಾಧಕರ ಸಾಧನೆಯೇ ಮುಖ್ಯವಾಗಬೇಕೆ ಹೊರತು ಹಿನ್ನೆಲೆಯಲ್ಲಿ ಎಂದರು.

ಸಹ ಬೋಧಕರಾದ ಕೆ .ಸುರೇಶ್ ಮಾತನಾಡಿ ಯುವ ಜನಾಂಗ ಇಂದು  ಅಂಬೇಡ್ಕರ್ ಅವರ ವ್ಯಕ್ತಿತ್ವ ಅರಿಯಬೇಕಾದ ಅನಿವಾರ್ಯವಿದೆ ಎಂದರು.ಈ ಸಂದರ್ಭದಲ್ಲಿ ವೈಭವ್ ಮತ್ತಿತರರು ಪಾಲ್ಗೊಂಡಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...