Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕರ್ನಾಟಕ ರಾಜ್ಯಪಾಲ ಗೆಹ್ಲೋಟ್ ಫ್ಯಾಮಿಲಿ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ದಾಖಲು..!

---Advertisement---

ಬೆಂಗಳೂರು: ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮೊಮ್ಮಗನ ವಿರುದ್ಧ ಇದೀಗ ವರದಕ್ಷಿಣೆ ಕಿರುಕುಳ ಕೇಸ್ ದಾಖಲಾಗಿದೆ. ದೇವೇಂದ್ರ ಗೆಹ್ಲೋಟ್ ವಿರುದ್ಧ ಅವರ ಪತ್ನಿ ದಿವ್ಯಾ ಗೆಹ್ಲೋಟ್ ದೂರು ದಾಖಲಿಸಿದ್ದಾರೆ‌‌. ವರದಕ್ಷಿಣೆಯ ಕಿರುಕುಳದ ಸಂಬಂಧ ಲಿಖಿತ ದೂರು ನೀಡಿದ್ದಾರೆ. ಮಧ್ಯಪ್ರದೇಶದ ರತ್ಲಾಂ ಜಿಲ್ಕಾ ಎಸ್ಪು ಅಮಿತ್ ಕುಮಾರ್ ಅವರಿಗೆ ಲಿಖಿತ ದೂರು ಸಲ್ಲಿಕೆ ಮಾಡಿದ್ದಾರೆ.

ದೇವೇಂದ್ರ ಗೆಹ್ಲೋಟ್, ತಂದೆ ಜಿತೇಂದ್ರ ಗೆಹ್ಲೋಟ್, ಮೈದುನ ವಿಶಾಲ್ ಗೆಹ್ಲೋಟ್, ರಾಜ್ಯಪಾಲರ ಪತ್ನಿ ಅನಿತಾ ಗೆಹ್ಲೋಟ್ ಬಗ್ಗೆ ದೂರಿನಲ್ಲಿ ಇವರ ಹೆಸರುಗಳನ್ನ ಉಲ್ಲೇಖ ಮಾಡಲಾಗಿದೆ. ಮದುವೆಗೂ ಮುನ್ನ ಪತಿ ದೇವೇಂದ್ರ ಗೆಹ್ಲೋಟ್ ಗೆ ಆಲ್ಕೋಹಾಲ್, ಡ್ರಗ್ಸ್, ಅಕ್ರಮ ಸಂಬಂಧ ಇತ್ತು. ಇವುಗಳನ್ನು ಮುಚ್ಚಿಟ್ಟು ದೇವೇಂದ್ರ ಗೆಹ್ಲೋಟ್ ಜೊತೆಗೆ ನನ್ನ ಮದುವೆ ಮಾಡಿದ್ದಾರೆ.

2018ರ ಏಪ್ರಿಲ್ 18ರಂದು ದಿವ್ಯಾ – ದೇವೇಂದ್ರ ಗೆಹ್ಲೋಟ್ ಅವರ ವಿವಾಹವಾಗಿತ್ತು. ಗಂಡನ ಮನೆಯಲ್ಲಿ ಊಟ ಕೊಟ್ಟಿಲ್ಲ, ಹಿಡೆದು ಹಿಂಸಡ ನೀಡಿದ್ದಾರೆ. 50 ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದಾರೆ. ತವರು ಮನೆಯಿಂದ ಹಣ ತರದಿದ್ದರೆ ಕೊಲ್ಲುವ ಬೆದರಿಕೆ ಹಾಕಿದ್ದಾರೆ. ಅಲ್ಲದೆ ನಾಲ್ಕು ವರ್ಷದ ಮಗಳನ್ನು ನನ್ನಿಂದ ಕಿತ್ತುಕೊಂಡಿದ್ದು, ಆಕೆಯನ್ನು ಪತಿಯ ವಶದಲ್ಲಿ ಇರಿಸಿಕೊಂಡಿದ್ದಾರೆ. ಈ ಘಟನೆ ಉಜ್ಜೈನಿ ಜಿಲ್ಲೆಯಲ್ಲಿ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈಗ ದೂರು ಉಜ್ಜೈನಿ ಜಿಲ್ಲೆಯ ಪೊಲೀಸರಿಗೆ ರತ್ಲಾಂ ಜಿಲ್ಲಾ ಪೊಲೀಸರಿಂದ ವರ್ಗಾವಣೆ ಮಾಡಲಾಗಿದೆ. ಈ ಎಲ್ಲಾ ವಿಚಾರದಲ್ಲೂ ಸತ್ಯಾಂಶ ಏನಿದೆ ಎಂಬುದನ್ನ ನಾವೇ ಮಾಧ್ಯಮದವರ ಮುಂದೆ ತಿಳಿಸ್ತೀವಿ ಅಂತ ದೇವೇಂದ್ರ ತಂದೆ ಜಿತೇಂದ್ರ ಗೆಹ್ಲೋಟ್ ತಿಳಿಸಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now