ಬೆಂಗಳೂರು: ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದು. ಇಂದು ಮೈಸೂರಿನಲ್ಲಿದ್ದಾರೆ. ಈ ವೇಳೆ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಬೊಮ್ಮಾಯಿ, ಗಾಂಧಿ ಜಯಂತಿ ದಿನ ನಕಲಿ ಗಾಂಧಿಗಳ ಬಗ್ಗೆ ಮಾತನಾಡಲ್ಲ ಎಂದಿದ್ದಾರೆ.
40% ಭ್ರಷ್ಟಾಚಾರದ ಬಗ್ಗೆ ದಾಖಲೆಗಳಿದ್ದರೆ ನೀಡಲಿ. ಆ ಬಗ್ಗೆ ತನಿಖೆ ನಡೆಸುತ್ತೇವೆ. ಈ ಹಿಂದೆ ಹೈಕಮಾಂಡ್ ಗೆ ಕರ್ನಾಟಕ ಎಟಿಎಂ ಆಗಿತ್ತು. ಇಲ್ಲಿ 40% ಇಲ್ಲ ಏನು ಇಲ್ಲ. ಇದೊಂದು ದುರುದ್ದೇಶದ ಅಭಿಯಾನ. ನಾನು ಪದೇ ಪದೇ ಹೇಳಿದ್ದೇನೆ ಎಲ್ಲಿ ಏನಾಗಿದೆ ಅನ್ನೋದನ್ನ ಸಾಕ್ಷಿ ಕೊಟ್ಟರೆ ತನಿಖೆ ಮಾಡಿಸೋಣ ಎಂದು. ದಾಖಲೆ ಕೊಟ್ಟರೆ ತನಿಖೆ ಮಾಡಿಸುತ್ತೇವೆ.
ಇಡೀ ಕಾಂಗ್ರೆಸ್ ಪಕ್ಷ ಬೇಲ್ ನಲ್ಲಿದೆ. ಅವರು ಬೇಲ್ ನಲ್ಲಿದ್ದಾರೆ. ಹಿಂದಿನ ಅಧ್ಯಕ್ಷರು, ಸೋನಿಯಾಗಾಂಧಿಯವರು ಬೇಲ್ ನಲ್ಲಿದ್ದಾರೆ. ಡಿಕೆ ಶಿವಕುಮಾರ್ ಬೇಲ್ ನಲ್ಲಿದ್ದಾರೆ. ಇವರೆಲ್ಲರ ಮೇಲೂ ಭ್ರಷ್ಟಾಚಾರದ ಆರೋಪವಿದೆ. ಪಾದಯಾತ್ರೆ ಮಾಡುತ್ತಿರುವವರ ಮೇಲೂ ಕೇಸ್ ಇದೆ ಎಂದು ತಿರುಗೇಟು ನೀಡಿದ್ದಾರೆ.