ಬೆಂಗಳೂರು: ಈ ಬಾರಿ ಶೈಕ್ಷಣಿಕ ವರ್ಷದಿಂದಲೇ ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವ ಫ್ಯ್ಲಾನ್ ಕೇಳಿ ಬಂದಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶಾಸಕ ಪ್ರಿಯಾಂಕ ಖರ್ಗೆ, ಹೈಕಮಾಂಡ್ ಮನವೊಲಿಸೋದಕ್ಕೆ ಈ ರೀತಿಯಾದ ಕೆಲಸ ಮಾಡಲು ಹೋಗಬೇಡಿ. ಮಕ್ಕಳ ಭವಿಷ್ಯ ಹಾಳು ಮಾಡಬೇಡಿ ಎಂದಿದ್ದಾರೆ.
ಕರ್ನಾಟಕ ಯಾವಾಗಲೂ ಪ್ರಗತಿಪರ ಚಿಂತನೆ ಇರುವ ರಾಜ್ಯ. ಅದಕ್ಕೆ ಮೂಲ ಕಾರಣ ನಮ್ಮ ಶಿಕ್ಷಣದ ವ್ಯವಸ್ಥೆ. ದಯವಿಟ್ಟು ಶಿಕ್ಷಣದ ವ್ಯವಸ್ಥೆ ಬದಲಾಯಿಸಬೇಡಿ. ಕೊರೊನಾದಿಂದ ಅಭಿವೃದ್ಧಿ ಡ್ರಾಪ್ ಔಟ್ ಆಗಿರೋದು, ಶಾಲಾ ಕಟ್ಟಡ ಕುಸಿತವಾಗಿದೆ ಅದರ ಕಡೆ ಗಮನ ಕೊಡಿ. ಈ ಸಮಯದಲ್ಲಿ ಇದು ಸೂಕ್ತ ಅಲ್ಲ. ಹೈಕಮಾಂಡ್ ನಾಯಕರ ಮನವೊಲಿಸಲು ಮಕ್ಕಳ ಭವಿಷ್ಯ ಹಾಳು ಮಾಡಬೇಡಿ ಎಂದಿದ್ದಾರೆ.