ದಲಿತ ಎನ್ನಬೇಡಿ…. ಅಧಿವೇಶನದಲ್ಲಿ ಅಶೋಕ್ ಗೆ ಮಹದೇವಪ್ಪ ಸ್ಪಷ್ಟನೆ…!

1 Min Read

 

 

ಬೆಂಗಳೂರು: ಇಂದು ಅಧಿವೇಶನದಲ್ಲಿ ವಾಲ್ಮೀಕಿ ಸಮುದಾಯದ ಹಗರಣದ ಬಗ್ಗೆ ಚರ್ಚೆಯಾಗಿದೆ. ಮೊದಲಿಗೆ ಮಾತನಾಡಿದ ಆರ್ ಅಶೋಕ್, ಅವರು ದಲಿತರು ಎಂದರು ತಕ್ಷಣ ಎಚ್ಚೆತ್ತು, ನೀವೂ ಪದವನ್ನ ಬಳಸಬಾರದು ಅಂತ ಹೇಳಿದ್ದೀರಲ್ಲ ಎಂದು ಆಡಳಿತ ನಾಯಕರಿಗೆ ಹೇಳುತ್ತಾ, ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಠ ಪಂಗಡ ಎಂದು ಉಚ್ಛಾರಣೆ‌ ಮಾಡಿದ್ದಾರೆ. ಆಗ ಮಧ್ಯದಲ್ಲಿ ಮಾತನಾಡಿದ ಸಚಿವ ಹೆಚ್.ಮಹದೇವಪ್ಪ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಎನ್ನುವುದು ಸರಿಯಾಗಿ ಬಳಕೆಯಾಗುವುದು. ದಲಿತರು ಎಂಬುದು ಅನ್ ಆರ್ಗನೈಸ್, ಡಿವೈಡೆಡ್. ಈ ವರ್ಗಗಳಿಗೆ ಎಸ್ಸಿಸ್ ಅಂದ್ರೆ ಅದೊಂದು ಬಂಚ್. ನೂರೊಂದು ಗ್ರೂಪ್ ಇದ್ದಾರೆ. ಎಸ್ಟಿ ಅಂದ್ರೆ ಮತ್ತೊಂದು ಗುಂಪು ಅದಕ್ಕೆ ಐವತ್ತು ಗ್ರೂಪ್ ಇದ ಎನ್ನುತ್ತಿದ್ದಂತೆ ಆರ್ ಅಶೋಕ್ ಅವರು ಸರಿ ಬಿಡಿ, ಹೇಳಲ್ಲ ಬಿಡಿ ಎಂದಿದ್ದಾರೆ.

ಮಾತು ಮುಂದುವರೆಸಿದ ಮಹದೇವಪ್ಪ ಅವರು ಅದಕ್ಕೆ ಪರಿಶಿಷ್ಟ ಜಾತಿ ಮತ್ತು ಪಂಗಡ ಎಂದು ನಮ್ಮ ಸಂವಿಧಾನದಲ್ಲಿ ಅಳವಡಿಕೆ ಮಾಡಿಕೊಂಡಿರುವುದು. ದಲಿತರು ಎನ್ನುವುದು ಅನ್ ಪಾರ್ಲಿಮೆಂಟ್ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮಹದೇವಪ್ಪ ಅವರು ಹೇಳುತ್ತಿದ್ದಂತೆ ನೀವೆ ಹೇಳಿದ್ದನ್ನು ನಾವೂ ಖಂಡಿತ ಪಾಲನೆ ಮಾಡ್ತೀವಿ. ನೀವೇ ಅಹಿಂದ ಅಂತ ಇಟ್ಟುಕೊಂಡಿದ್ದೀರಾ. ನೀವೇ ಅದರ ಚೇರ್ಮೆನ್ ಎಂದ ಬಳಿಕ ಮಾತು ಮುಂದುವರೆಸಿದ ಆರ್.ಅಶೋಕ್, ವಾಲ್ಮೀಕಿ ಹಗರಣದ ಬಗ್ಗೆ ಮಾತನಾಡಿದ್ದಾರೆ. ಬರೀ ದಲಿತರ ಹಣ ಯಾಕೆ ತೆಗೆಯುತ್ತೀರಾ, ಎಸ್ಸಿ, ಎಸ್ಟಿ ಹಣವನ್ನ ಯಾಕೆ ತೆಗೆಯುತ್ತೀರಾ ಎಂದು ಕೇಳಿದ್ದಾರೆ. ಇದು ಆ ಜನಾಂಗಕ್ಕೆ ಮಾಡುತ್ತಿರುವ ಮೋಸ, ವಂಚನೆ, ದ್ರೋಹ. ಇದನ್ನ ಆ ಜನಾಂಗದವರು ಕ್ಷಮಿಸುವುದಿಲ್ಲ. ಅಭಿವೃದ್ದಿಗೋಸ್ಕರ ಇಟ್ಟಿರುವುದು. ಸುಮ್ಮನೆ 2 ಸಾವಿರ ಕೊಡಿ, 3 ಸಾವಿರ ಕೊಡಿ ಅಂತ ಜೇಬಿಗೆ ಹಾಕುವುದಲ್ಲ. ಅಭಿವೃದ್ದಿಗೆ ಅಂತ ಇಟ್ಟಿರುವುದು. ಯಾವುದೇ ಕಾರಣಕ್ಕೂ ಆ ಹಣ ಬೇರೆ ಕಡೆ ಹೋಗುವಂತೆ ಇಲ್ಲ. ಇವತ್ತು ಕೂಡ ಆ ಬಗ್ಗೆ ಹೋರಾಟ‌ ಮಾಡುತ್ತೀವಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *