Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮೂಢ ನಂಬಿಕೆ ಬೇಡ ಮೂಲ ನಂಬಿಕೆ ಬೇಕು  : ಹುಲಿಕಲ್ ನಟರಾಜ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ(ಮಾ.04) : ‌ನಮ್ಮ ದೇಶ ಬಹು ಸಂಸ್ಕೃತಿ, ಭಾಷೆ, ಬಣ್ಣ, ಧರ್ಮವನ್ನು ಹೊಂದಿದೆ. ಬಹು ಸಂಸ್ಕೃತಿಯಲ್ಲಿ ಏಕ ಸಂಸ್ಕೃತಿಯಲ್ಲಿ ಮನೋ ವಿಜ್ಞಾನ ಕಾಣಬೇಕಿದೆ. ಮನಸ್ಸುಗಳನ್ನು ಸುಧಾರಿಸುವ ಕೆಲಸವನ್ನು ರಾಜ್ಯ ಮಟ್ಟದ ವೈಜ್ಞಾನಿಕ ಸಂಶೋಧನ ಪರಿಷತ್‍ನ ರಾಜ್ಯಾಧ್ಯಕ್ಷರಾದ ಹುಲಿಕಲ್ ನಟರಾಜ್ ತಿಳಿಸಿದರು.

ನಗರದ ಐಶ್ವರ್ಯ ಫೋರ್ಟ್ ಸಭಾಂಗಣದಲ್ಲಿ ಚಿತ್ರದುರ್ಗ ಜಿಲ್ಲಾ ಘಟಕದ ಪದಾಧಿಕಾರಿಗಳೊಂದಿಗೆ ಪರಿಷತ್‍ನ ಕಾರ್ಯಕಲಾಪಗಳ ಬಗ್ಗೆ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮನುಷ್ಯನಿಗೆ ತೊಂದರೆಯನ್ನು ಕೂಡುವುದು ಮೂಢನಂಬಿಕೆಯಾದರೆ, ಸಕಾರಾತ್ಮಕವಾಗಿ ಚಿಂತನೆಯನ್ನು ಮನಸ್ಸಿಗೆ ನೀಡುವುದು ಮೂಲನಂಬಿಕೆಯಾಗಿದೆ.

ನಮಗೆ ಮೂಢ ನಂಬಿಕೆ ಬೇಡ ಮೂಲ ನಂಬಿಕೆ ಅಗತ್ಯವಾಗಿದೆ. ನೈಜತೆಯಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕಿದೆ. ಆಚರಣೆಗಳು ಅಗತ್ಯವಾಗಿ ಬೇಕಿದೆ. ಆಚರಣೆ ಇರಬೇಕಿದೆ ಆದರೆ ಮೂಢಾಚರಣೆ ಅಗತ್ಯ ಇಲ್ಲ ಎಂದರು.

ಪರಿಷತ್ ವತಿಯಿಂದ ಪ್ರತಿ ಜಿಲ್ಲೆಯಲ್ಲಿಯೂ ಸಹಾ ಆಪ್ತ ಸಮಾಲೋಚನೆ ಘಟಕಗಳನ್ನು ಸ್ಥಾಪನೆ ಮಾಡಲಾಗುವುದು. ಇದರಿಂದ ಅನೇಕರಿಎಗ ಸಹಾಯವಾಗಲಿದೆ. ನೊಂದವರಿಗೆ ನೆರವಾಗುವ ಕಾರ್ಯ ಇದಾಗಿದೆ. ಸಂಸಾರದಲ್ಲಿ ನೊಂದವರು, ಒತ್ತಡಕ್ಕೆ ಒಳಗಾದವರು ಇದರ ಸಹಾಯವನ್ನು ಪಡೆಯುವುದರ ಮೂಲಕ ಒತ್ತಡ ಮುಕ್ತವಾದ ಜೀವನವನ್ನು ಸಾಗಿಸಬಹುದಾಗಿದೆ.ಮನಸ್ಸುಗಳನ್ನು ಘಟ್ಟಿ ಮಾಡುವ ಕಾರ್ಯಕ್ಕೆ ಪರಿಷತ್ ಮುಂದಾಗಿದೆ.

ಪಿಡಿಓಗಳು ಸಹಾ ಒತ್ತಡದಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ ಅವರಿಗೆ ನಾಯಕತ್ವ ಶಿಬಿರವನ್ನು ಮಾಡುವುದರ ಮೂಲಕ ಸಾಮಾನ್ಯ ಸ್ಥಿತಿಗೆ ತರುವ ಕಾರ್ಯವನ್ನು ಮಾಡಲಾಗುವುದು, ಇದರ ಪ್ರಯೋಗಿಕ ಕಾರ್ಯ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಈಗಾಗಲೇ ನಡೆಯುತ್ತಿದೆ ಮುಂದಿನ  ದಿನದಲ್ಲಿ ಶಿಕ್ಷಣ ಇಲಾಖೆಯನ್ನು ಸಹಾ ಸೇರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಇಂದಿನ  ದಿನದಲ್ಲಿ ಜನತೆ ಖಿನ್ನತೆಗೆ ಒಳಗಾಗಿದ್ದಾರೆ ಇದರಿಂದ ಮುಕ್ತ ಮಾಡಬೇಕಿದೆ. ಇದಕ್ಕೆ ಪರ್ಯಾಯವಾಗಿ ಐದು ಐಗಳನ್ನು ಪರಿಷತ್ ವತಿಯಿಂದ ನೀಡಲಾಗುತ್ತಿದೆ. ಐದು ಸಿಗಳನ್ನು ಬಳಕೆ ಮಾಡುವುದರಿಂದ ಮನಸ್ಸುಗಳು ಹಾಳಾಗುತ್ತಿವೆ.

ಧಾರವಾಹಿಗಳಿಂದ ಮನೆಗಳು ಹಾಳಾಗುತ್ತಿವೆ ಇದರ ಬಗ್ಗೆ ಯಾರು ಸಹಾ ಅಲೋಚನೆ ಮಾಡುತ್ತಿಲ್ಲ, ಇದರಿಂದ ವಿಭಕ್ತ ಕುಟುಂಬಗಳು ಅವಿಭಕ್ತ ಕುಟುಂಬಗಳಾಗುತ್ತಿವೆ ಎಂದ ಅವರು, ಮೇ. 1ರಂದು ಪ್ರತಿ ಜಿಲ್ಲೆಯಿಂದ ಉತ್ತಮವಾಗಿ ಕಾರ್ಯವನ್ನು ನಿರ್ವಹಸುವ ವ್ಯಕ್ತಿಯನ್ನು ಗುರುತಿಸಿ ಅವರಿಗೆ ಕಾಯಕ ಯೋಗಿ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಇದರಿಂದ ಪರಿಷತ್‍ನನ ಘನತೆ ಹೆಚ್ಚುತ್ತದೆ. ಈ ವರ್ಷ ಪಿಯು ಮತ್ತು ಪದವಿ ತರಗತಿಗಳಿಗೆ ಯುವ ಸಂಸತ್ ಕಾರ್ಯಕ್ರಮವನ್ನು ಮಾಡಲಾಗುವುದು. ಪರಿಷತ್ ತೆರೆದ ಮನಸ್ಸು ಇದ್ದಂತೆ ಪುಸ್ತಕಕ್ಕಿಂತ ಮಸ್ತಕಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ನಟರಾಜ್ ತಿಳಿಸಿದರು.

ಜಿಲ್ಲಾಧ್ಯಕ್ಷರಾದ ನಾಗರಾಜ್ ಸಂಗಂ ಮಾತನಾಡಿ, ಇಂದಿನ ದಿನದಲ್ಲಿ ಮಕ್ಕಳಲ್ಲಿ ಕಿನ್ನತೆ ಹೆಚ್ಚಿದೆ, ಸಣ್ಣ ಸಣ್ಣ ವಿಷಯಗಳಿಗೂ ಸಹಾ ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಹಂತಕ್ಕೆ ಹೋಗುತ್ತಿದ್ದಾರೆ. ಈ ಬಗ್ಗೆ ಅವರಿಗೆ ಧೈರ್ಯವನ್ನು ತುಂಬುವ ಕೆಲಸವನ್ನು ಪರಿಷತ್ ಮಾಡಬೇಕಿದೆ.

ಮಕ್ಕಳಿಗೆ ಶಾಲಾ-ಕಾಲೇಜಿನಲ್ಲಿ ಸಂಸ್ಕಾರವನ್ನು ಕಲಿಸಬೇಕಿದೆ.ಮೌಢ್ಯತೆಯ ಬಗ್ಗೆ ಹೋರಾಟ ಒಂದು ಕಡೆಯಾದರೆ ಮಕ್ಕಳ ಈ ಸಮಸ್ಯೆಯ ಬಗ್ಗೆ ಮತ್ತೊಂದು ಹೋರಾಟವನ್ನು ಮಾಡಬೇಕಿದೆ ಎಂದ ಅವರು, ಚಿತ್ರದುರ್ಗ ಜಿಲ್ಲೆಯಲ್ಲಿ ಎರಡು ತಾಲ್ಲೂಕಿನಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಉಳಿದ ನಾಲ್ಕು ತಾಲ್ಲೂಕಿನಲ್ಲಿ ಶೀಘ್ರವಾಗಿ ಪದಾಧಿಕಾರಿಗಳನ್ನು ನೇಮಕ ಮಾಡಿ ಪ್ರತಿ ತಾಲ್ಲೂಕಿನಲ್ಲಿ ನೂರು ಸದಸ್ಯರನ್ನು ಮಾಡುವ ಗುರಿಯನ್ನು ಹೊಂದಲಾಗಿದೆ ಎಂದರು.

ಸಂಘಟನಾ ಕಾರ್ಯದರ್ಶಿ ವಿ.ಟಿ.ಸ್ವಾಮಿ ಮಾತನಾಡಿ, ಕಳೆದ ಮೂರು ವರ್ಷದಿಂದ ನಿರಂತರವಾಗಿ ಪರಿಷತ್ ತನ್ನ ಕೆಲಸವನ್ನು ಮಾಡುತ್ತಾ ಬಂದಿದೆ.  ಹೂಸಪೇಟೆಯಲ್ಲಿ ಮೂರನೇ ಕಾರ್ಯಕಾರಿಣಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.

ಸಂಘಟನೆಯಲ್ಲಿ ಸದಸ್ಯತ್ವಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕಿದೆ. ತಮ್ಮಲ್ಲಿನ ಕೀಳಿರಿಮೆಯನ್ನು ಬಿಟ್ಟು ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಿದೆ. ಜನತೆ ಅನ್‍ಲೈನ್ ಮತ್ತು ಆಫ್‍ಲೈನ್‍ನಲ್ಲಿಯೂ ಸಹಾ ಸದಸ್ಯತ್ವವನ್ನು ಪಡೆಯಬಹುದಾಗಿದೆ. ಮುಂದಿನ ದಿನದಲ್ಲಿ ರಾಯಚೂರಿನಲ್ಲಿ ಪರಿಷತ್‍ನ ನಾಲ್ಕನೇ ಸಮ್ಮೇಳನ ನಡೆಯಲಿದೆ. ಐದು ವರ್ಷದಲ್ಲಿ ಪರಿಷತ್‍ನ ಸದಸ್ಯತ್ವವನ್ನು ಒಂದು ಲಕ್ಷಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ ಇದಕ್ಕೆ ಎಲ್ಲರ ಸಹಾಯ ಮತ್ತು ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.

ರಾಜ್ಯ ಕಾರ್ಯದರ್ಶೀ ಚಿಕ್ಕ ಹನುಮಂತೇಗೌಡ ಮಾತನಾಡಿ, ಮೌಢ್ಯ ಮುಕ್ತ ರಾಜ್ಯಚವಾಗುವುದಕ್ಕೆ ನಟರಾಜ್ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಮೊದಲು ಮೌಢ್ಯ ಮುಕ್ತವಾದ ಜಿಲ್ಲೆ, ಗ್ರಾಮ, ಮನೆಯಾಗಬೇಕಿದೆ. ಮನೆಯಿಂದಲೇ ಮೌಢ್ಯ ನಿವಾರಣೆಯಾಗಬೇಕಿದೆ. ಸುಮಾರು 51 ಕೋಟಿ ವೆಚ್ಚದಲ್ಲಿ 10 ಎಕರೆ ಪ್ರದೇಶದಲ್ಲಿ ವಿಜ್ಞಾನ ಗ್ರಾಮವನ್ನು ನಿರ್ಮಾಣ ಮಾಡಲಾಗುತ್ತಿದೆ. ಪರಿಷತ್‍ಗೆ ಸದಸ್ಯರಾಗುವುದರ ಮೂಲಕ ಮುಂದಿನ ಪೀಳಿಗೆ ವಿಜ್ಞಾನವನ್ನು ನೀಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಲೋಕೇಶ್, ಸಂಘಟನಾ ಕಾರ್ಯದರ್ಶೀ ವಿ.ಟಿ.ಸ್ವಾಮಿ, ಉಪಾಧ್ಯಕ್ಷರಾದ ತಿಪ್ಪೇಸ್ವಾಮಿ, ರಾಜ್ಯ ಖಂಜಾಚಿ ಶ್ರೀಮತಿ ಸಿದ್ದಲಿಂಗಮ್ಮ, ಸಹಾ ಕಾರ್ಯದರ್ಶಿ ಪ್ರೇಮ, ಖಂಜಾಚಿ ಬಸವಣ್ಣ, ಹಿರಿಯೂರಿನ ನಾಗೇಶ್, ಸುರೇಶ್, ಡಾ.ಕೃಷ್ಣಪ್ಪ, ಕಿರಣ್ ಶಂಕರ್ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

error: Content is protected !!