ಅಡ್ವಾಣಿಯವರಿಗೆ ಆಹ್ವಾನ ಕೊಟ್ಟು ಬರಬೇಡ ಅಂತಾರೆ.. ಇನ್ನುಳಿದವರ ಗತಿ : ಬಿಜೆಪಿ ವಿರುದ್ಧ ಶೆಟ್ಟರ್ ಆಕ್ರೋಶ

suddionenews
1 Min Read

ಹುಬ್ಬಳ್ಳಿ: ಶಿವಸೇನೆಯನ್ನೆ ಒದ್ದು ಕಳುಹಿಸಿದರು. ಇವರ ಸೀಟು ಜಾಸ್ತಿ ಬಂದ ಕೂಡಲೇ ಅವರನ್ನೇ ಮುಗಿಸಿಬಿಟ್ಟರು. ಜೆಡಿಎಸ್ ಯಾವಾಗ ಮುಗಿಸುತ್ತಾರೆ ಎಂಬುದನ್ನು ಹೇಳುವುದಕ್ಕೆ ಬರುವುದಿಲ್ಲ. ಪರಿಸ್ಥಿತಿ ಅದೇ ಆಗುತ್ತೆ. ಇವತ್ತು ಅವರಿಗೂ ಪರಿಸ್ಥಿತಿ ಇತ್ತು, ಇವರಿಗೂ ಪರಿಸ್ಥಿತಿ ಇದೆ. ಪಂಜಾಬ್ ನಲ್ಲಿ ಅಕಾಳ ದಳದ ಸ್ಥಿತಿ ಏನಾಗಿದೆ. ಅದನ್ನು ಮುಗಿಸಿ ಕಳುಹಿಸಿದ್ರು. ಈ ರೀತಿ ರಾಜಕೀಯ ನಡೆಸಿದರೆ ಪ್ರಜಾಪ್ರಭುತ್ವ ಅಂತಾರ ಹೇಳಿ ಎಂದು ಪ್ರಶ್ನಿಸಿದ್ದಾರೆ.

 

ರಾಮ ಮಂದಿರದ ದೇಣಿಗೆ ಬಗ್ಗೆ ಮಾತನಾಡಿದ್ದು, ಈ ಹಿಂದೆ ಹುಬ್ಬಳ್ಳಿಯಲ್ಲಿ ನಾನೇ ಒಂದು ಸಭೆ ಮಾಡಿದ್ದೆ. ಆ ಸಭೆಯಲ್ಲಿ ಹಲವರು ಸೇರಿದ್ದರು. ಆಗ ಸುಮಾರು ಎರಡು ಕೋಟಿಯಷ್ಟು ಹಣವನ್ನು ನಾನೇ ಸಂಗ್ರಹ ಮಾಡಿಕೊಟ್ಟಿದ್ದೆ. ಆದರೆ ಈಗ ನಾವೂ ರಾಮ ಭಕ್ತರಲ್ಲ ಅಂತಿದ್ದಾರೆ. ರಾಮ ಮಂದಿರಕ್ಕೆ ನನ್ನದು ಎರಡು ಕೋಟಿ ಕಾಂಟ್ರಿಬ್ಯೂಷನ್ ಇದೆ. ದೊಡ್ಡ ದೊಡ್ಡವರನ್ನು ಕರೆಸಿ ಆ ಬಗ್ಗೆ ದೇಣಿಗೆ ಕೊಡಿಸಿದ್ದೀನಿ ಎಂದಿದ್ದಾರೆ.

 

ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ಕುರಿತು ಮಾತನಾಡಿದ್ದು, ಹುಬ್ಬಳ್ಳಿಯಲ್ಲಿ ಅಡ್ವಾಣಿ ಅವರು ಬಂದಾಗ ರಥಯಾತ್ರೆ ನಡೆದಿತ್ತು. ಅವತ್ತಿನ ಕಾರ್ಯಕ್ರಮ ನಾನೇ ನಡೆಸಿದ್ದೆ. ಇದಕ್ಕೆ ಅಡ್ವಾಣಿಯವರ ಕಾಂಟ್ರುಬ್ಯೂಷನ್ ಜಾಸ್ತಿ ಇದೆ. ಅಯೋಧ್ಯೆ ವಿಚಾರವಾಗಿ, ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ಅವರದ್ದು ದೊಡ್ಡ ಕಾಂಟ್ರಿಬ್ಯೂಷನ್ ಇದೆ. ಅವರಿಗೆ ಆಹ್ವಾನವನ್ನೇ ನೀಡಿರಲಿಲ್ಲ. ಮೀಡಿಯಾದಲ್ಲಿ ಸುದ್ದಿ ಬಂದಾಗ ಹೋಗಿ ಆಹ್ವಾನ ನೀಡಿದರು. ಇದು ನನಗಿರುವ ಮಾಹಿತಿ ಏನಂದ್ರೆ, ಆಹ್ವಾನ ಕೊಟ್ಟರು. ಆಮೇಲೆ ನಿಮಗೆ ವಯಸ್ಸಾಗಿದೆ. ನೀವೂ ಮನೆಯಲ್ಲಿದ್ದರು ವೀಕ್ಷಣೆ ಮಾಡಬಹುದು ಎಂಬ ಸಲಹೆಯನ್ನು ಕೊಡುತ್ತಾರೆ ಎಂದರೆ ಕೊಟ್ಟಂಗೂ ಆಗಿರಬೇಕು, ನೀವೂ ಬರಬಾರದು ಅಂತಾನು ಹೇಳಬೇಕು. ಇದರಲ್ಲಿ ಏನು ಅರ್ಥ ಆಗುತ್ತೆ. ಅಂಥ ಅಡ್ವಾಣಿ ಅವರಿಗೆ ಆಹ್ವಾನ ಕೊಟ್ಟು ಬರಬೇಡಿ ಎಂದರೆ ಇನ್ನುಳಿದವರ ಗತಿ ಏನಾಗಬಹುದು ಎಂದು ಪ್ರಶ್ನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *