ದಾವಣಗೆರೆ: ಮಾಡಾಳು ಪ್ರಶಾಂತ್ ನೇರವಾಗಿ ಲೋಕಾಯುಕ್ತ ಪೊಲೀಸರಿಗೆ ತಗಲಾಕಿಕೊಂಡು ಜೈಲಿನಲ್ಲಿ ಕೂತಿದ್ದಾರೆ. ಇದರ ಎ1 ಆರೋಪಿಯಾಗಿದ್ದ ಮಾಡಾಳು ವಿರೂಪಾಕ್ಷಪ್ಪ ಹೈಕೋರ್ಟ್ ನಿಂದ ಮಧ್ಯಂತರ ಜಾಮೀನು ಪಡೆದು ಕೊಂಚ ನೆಮ್ಮದಿ ಕಂಡಿದ್ದಾರೆ. ಆದರೆ ಲೋಕಾಯುಕ್ತ ಪೊಲೀಸರು ಕರೆದಾಗೆಲ್ಲಾ ವಿಚಾರಣೆಗೆ ಹಾಜರಾಗಲೇಬೇಕಾಗಿದೆ.
ಜೊತೆಗೆ ಒಂದೊಂದು ಸಲ ಒಂದೊದು ರೀತಿಯ ಹೇಳಿಕೆಯನ್ನು ನೀಡುತ್ತಿದ್ದಾರೆ. ಹೀಗಾಗಿ ತನ್ನ ಗೆಳೆಯನಿಗಾಗಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ. ಹೊನ್ನಾಳಿ ಹಾಗೂ ಚನ್ನಗಿರಿ ಅಕ್ಕಪಕ್ಕದ ಕ್ಷೇತ್ರಗಳು. ಹೀಗಾಗಿ ವಿರೂಪಾಕ್ಷಪ್ಪ ಹಾಗೂ ರೇಣುಕಾಚಾರ್ಯ ಆಪ್ತರಾಗಿದ್ದಾರೆ. ಸದ್ಯ ಲೋಕಾಯುಕ್ತದಲ್ಲಿ ಕೇಸ್ ನಡೆಯುತ್ತಿದ್ದು, ಹೇಗಿರಬೇಕು ಎಂಬುದನ್ನು ಹೇಳಿ ಕೊಟ್ಟಿದ್ದಾರೆ.
ಭಾವೋದ್ವೇಗಕ್ಕೆ ಒಳಗಾಗಬೇಡಿ. ಕಾನೂನು ರೀತಿಯಾಘಿಯೇ ಹೋರಾಟ ನಡೆಸಿ ಗೆದ್ದು ಬನ್ನಿ. ಪಕ್ಷದ ನಾಯಕರ ಮತ್ತು ರಾಜ್ಯ ನಾಯಕರ ವಿರುದ್ಧ ಯಾವುದೇ ರೀತಿಯ ಹೇಳಿಕೆಯನ್ನು ನೀಡಬೇಡಿ. ಭವಿಷ್ಯದಲ್ಲಿ ಅದು ನಿಮಗೇನೆ ಮಾರಕವಾಗಬಹುದು. ಆದಷ್ಟು ತಾಳ್ಮೆಯಿಂದ ಇದ್ದು ಸಮಸ್ಯೆ ಬಗೆಹರಿಸಿಕೊಳ್ಳಿ ಎಂದಿದ್ದಾರೆ ಎನ್ನಲಾಗಿದೆ.