ನ್ಯಾಶನಲಿಸ್ಟ್ ಕಾಂಗ್ರೆಸ್ ಅಧ್ಯಕ್ಷ ಶರದ್ ಪವಾರ್ ಅವರು ರಾಜ್ಯದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಅವರ ನಾಯಕತ್ವದಲ್ಲಿ ಅಧಿಕಾರದಲ್ಲಿರುವ ಶಿಂಧೆ ಗುಂಪನ್ನು ಮತ್ತು ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ. ಪುಣೆಯಲ್ಲಿ ಸುದ್ದಿಗೋಷ್ಟಿ ನಡೆಸಿದ, ಶರದ್ ಪವಾರ್ ಅವರಿಗೆ ಶಿಂಧೆ ಸರ್ಕಾರದ ವ್ಯವಹಾರಗಳ ಬಗ್ಗೆ ಪ್ರಶ್ನೆ ಕೇಳಲಾಗಿದೆ. ರಾಜ್ಯದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಎರಡು ತಿಂಗಳು ಪೂರೈಸಿದೆ. ಈ ಸರ್ಕಾರದ ಒಟ್ಟಾರೆ ಸಾಧನೆಯನ್ನು ಹೇಗೆ ನೋಡುತ್ತೀರಿ? ಎಂಬ ಪ್ರಶ್ನೆಯನ್ನು ಶರದ್ ಪವಾರ್ ಅವರಿಗೆ ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಶರದ್ ಪವಾರ್ “ನಾನು ಯಾವುದೇ ಆಡಳಿತವನ್ನು ನೋಡಿಲ್ಲ” ಎಂದು ಉತ್ತರಿಸಿದ್ದಾರೆ.
ವೇದಾಂತ್ ಮತ್ತು ಫಾಕ್ಸ್‌ಕಾನ್‌ನ ಜಂಟಿ ಯೋಜನೆಯು ಮಹಾರಾಷ್ಟ್ರದ ಬದಲಿಗೆ ಗುಜರಾತ್‌ಗೆ ಸ್ಥಳಾಂತರಗೊಳ್ಳುತ್ತಿದ್ದಂತೆ ಮಹಾರಾಷ್ಟ್ರ ರಾಜಕೀಯ ತೀವ್ರ ಸ್ವರೂಪ ಪಡೆಯುತ್ತಲೇ ಇದೆ. ಇದೀಗ ಈ ವಿಚಾರದಲ್ಲಿ ಮಹಾರಾಷ್ಟ್ರದ ಹಿರಿಯ ನಾಯಕ ಶರದ್ ಪವಾರ್ ಹೇಳಿಕೆ ಕೂಡ ಹೊರಬಿದ್ದಿದೆ. ಈ ಕುರಿತು ಏಕನಾಥ್ ಶಿಂಧೆ ನೀಡಿರುವ ಹೇಳಿಕೆಗೆ ವ್ಯಂಗ್ಯವಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೊಡ್ಡ ಯೋಜನೆಯ ಭರವಸೆ ನೀಡಿದ್ದಾರೆ. ಫಾಕ್ಸ್‌ಕಾನ್‌ಗಿಂತ ದೊಡ್ಡ ಯೋಜನೆ ನೀಡುವುದಾಗಿ ಹೇಳುವುದು ಮಗುವಿನ ಮನವೊಲಿಸಿದಂತೆ. ಮಹಾರಾಷ್ಟ್ರದಲ್ಲಿ ಮೊದಲಿನಿಂದಲೂ ಬೃಹತ್ ಕೈಗಾರಿಕಾ ಯೋಜನೆಗಳು ಬರುತ್ತಿದ್ದು, ಈಗ ಅವುಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದರು.
ಏಕನಾಥ್ ಶಿಂಧೆ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಸಂಭಾಷಣೆಯ ಕುರಿತು ಉತ್ತರಿಸಿದ ಶರದ್ ಪವಾರ್ ಅವರು, “ಕುಟುಂಬದಲ್ಲಿ ಇಬ್ಬರು ಚಿಕ್ಕ ಮಕ್ಕಳಿದ್ದಾರೆ, ಒಬ್ಬರಿಗೆ ಬಲೂನ್ ನೀಡಲಾಗುತ್ತದೆ, ಇನ್ನೊಬ್ಬರು ಅಳಲು ಪ್ರಾರಂಭಿಸುತ್ತಾರೆ, ಇದರಲ್ಲಿ ಪೋಷಕರು ಇನ್ನೊಂದು ಮಗುವಿಗೆ ಸಾಂತ್ವನ ಹೇಳುತ್ತಾರೆ, ಅಳು ಬೇಡ, ಅದಕ್ಕಿಂತ ದೊಡ್ಡ ಬಲೂನ್ ಕೊಡ್ತೀನಿ. ಎಂಬ ಸಮಾಧಾನ ಕೇಳಿ ಬರುವಂತೆ ಆಗ್ತಿದೆ.” ಎಂದಿದ್ದಾರೆ.