ಮೈಸೂರು: ನಾನು ಕರ್ನಾಟಕದ ಇತ್ತೀಚಿನ ವಿದ್ಯಮಾನಗಳನ್ನು ನೋಡಿದಾಗ ಅದು ಕೋಡಿಹಳ್ಳಿ ಸ್ವಾಮೀಜಿ ಇರಬಹುದು, ಕುಮಾರಸ್ವಾಮಿಜಿ ಇರಬಹುದು, ಸಿದ್ದರಾಮಯ್ಯನವರಿರಬಹುದು. ಇವರ್ಯಾರನ್ನು ಕೂಡ ಜನ ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಇವರ ಮಾತಲ್ಲೂ ನಿಖರತೆ ಇಲ್ಲ. ಇವತ್ತು ಒಂದು ಹೇಳಿಕೆ ಕೊಡುತ್ತಾರೆ, ನಾಳೆ ಮತ್ತೊಂದು ಹೇಳಿಕೆ ಕೊಡುತ್ತಾರೆ. ಅದಕ್ಕೆ ಯಾವುದೇ ಒಂದು ವಿಚಾರ ಮಾತನಾಡಿದಾಗಲೂ ಅದಕ್ಕೆ ಆಧಾರವೇ ಇರಬೇಕೆಂದೇನು ಇಲ್ಲ. ಆಧಾರರಹಿತವಾಗಿಯೂ ಮಾತನಾಡುತ್ತಾರೆ.
ಕರ್ನಾಟಕದ ಮಹಾಜನತೆಯ ಬಳಿ ನಾನು ಕೇಳಿಕೊಳ್್ಳುತ್ತೇನೆ. ಕೋಡಿಹಳ್ಳಿ ಸ್ವಾಮೀಜಿಯವರನ್ನು, ಕುಮಾರಸ್ವಾಮಿ ಅವರನ್ನು ಹಾಗೂ ಸಿದ್ದರಾಮಯ್ಯ ಅವರನ್ನು ಗಂಭೀರವಾಗಿ ಪರಿಗಣಿಸಬೇಡಿ ಎಂದಿದ್ದಾರೆ.
ಬೆಂಕಿ ಹಚ್ಚುವ ಕೆಲಸವನ್ನ ಇವತ್ತು ಶಾಲೆಯ ಸಮವಸ್ತ್ರವನ್ನು ಕಡ್ಡಾಯ ಮಾಡಿದ್ರು ಕೂಡ ಅದಕ್ಕೆ ವಿರುದ್ಧವಾಗಿ ಸಮಾಜದಲ್ಲಿ ಅಶಾಂತಿಯನ್ನು ಕಾನೂನಿಗೆ ವಿರುದ್ದದ ಮನಸ್ಥಿತಿಯನ್ನು ತೋರುವ ಮುಖಾಂತರವಾಗಿ ತಂದವರಿಗೆ ಬುದ್ಧಿ ಹೇಳಬೇಕು. ಅದನ್ನು ಬಿಟ್ಟು ಕಾನೂನನ್ನು ಅನ್ವಯ ಮಾಡಿದವರ ಮೇಲೆ ಕಿಡಿ ಹಚ್ಚುತ್ತೀರಿ, ಬೆಂಕಿ ಹಚ್ಚುತ್ತೀರಿ ಅಂತ ಹೇಳ್ತಿದ್ದೀರಲ್ಲ ಅದು ಎಷ್ಟರಮಟ್ಟಿಗೆ ಸರಿ. ಅವತ್ತು ಉಡುಪಿಯ ಶಾಲೆಯ ಮಕ್ಕಳು ಸಮವಸ್ತ್ರಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕೆಂದು ಹೇಳಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರು ಹೇಳಿದ್ದರೆ ಸಮಸದಯೆ ಅಲ್ಲಿಯೇ ಮುಗಿದು ಹೋಗುತ್ತಿತ್ತು. ಸಮಸ್ಯೆ ಉಲ್ಬಣವಾಗುತ್ತಿರಲಿಲ್ಲ. ಅವರಿಗೆ ಚಿತಾವಣೆ ಕೊಟ್ಟವರು ಯಾರು, ಇಷ್ಟು ದೊಡ್ಡ ಸಮಸಗಯೆಯಾಗಿ ಆಲ್ ಖೈದಾ ಪ್ರತಿಕ್ರಿಯೆ ಕೊಡುವ ಮಟ್ಟಕ್ಕೆ ಪರಿಸ್ಥಿತಿ ಉಲ್ಬಣ ಮಾಡಿದ್ದು ಯಾರು ಇವರೇ ತಾನೆ. ಅವತ್ತು ಬುದ್ಧಿವಾದವನ್ನು ಹೇಳಬೇಕಿತ್ತು. ಸಮವಸ್ತ್ರ ಸಂಹಿತೆಗೆ ಅನುಗುಣವಾಗಿ ನಡೆದುಕೊಳ್ಳಿ ಎಂದು ಹೇಳಿದ್ದರೆ ಮುಗಿದೇ ಹೋಗಿತ್ತು ಎಂದಿದ್ದಾರೆ.