ಪ್ರೇಮಿಗಳ ದಿನದ ವಿಶೇಷತೆ ಎಷ್ಟೋ ಪ್ರೇಮಿಗಳು ಅಂದು ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಪ್ರೇಮಿಗಳ ದಿನದಂತೆ ಮದುವೆ ಆಗುತ್ತಾತೆ. ಎಂಗೆಜ್ಮೆಂಟ್ ಮಾಡಿಕೊಳ್ಳುತ್ತಾರೆ ಇದು ವಿಶೇಷ. ಆದರೆ ಪ್ರೇಮಿಗಳ ದಿನದಂದು ಕತ್ತೆಯ ವಿವಾಹ ಮಾಡಿದ್ದಾರೆ ವಾಟಾಳ್ ನಾಗರಾಜ್!
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಪ್ರತಿ ವರ್ಷದಂತೆ ಈ ಬಾರಿಯೂ ಪ್ರೇಮಿಗಳ ದಿನಾಚರಣೆಯನ್ನು ಕತ್ತೆಗಳಿಗೆ ಮದುವೆ ಮಾಡಿಸುವ ಮೂಲಕ ವಿಶಿಷ್ಟವಾಗಿ ಆಚರಿಸಿದ್ದಾರೆ. ಬೆಂಗಳೂರು ನಗರದ ಸೆಂಟ್ರಲ್ ರೈಲ್ವೆ ನಿಲ್ದಾಣದ ಬಳಿ ಕತ್ತೆಗಳ ಮೆರವಣಿಗೆ ನಡೆಸಿ, ಎರಡು ಕತ್ತೆಗಳಿಗೆ ಪೂಜೆ ಸಲ್ಲಿಸಿ, ಸಾಂಪ್ರದಾಯಿಕವಾಗಿ ಹೂವಿನ ಹಾರ ಹಾಕಿ ತಾಳಿ ಕಟ್ಟಿದ್ದಾರೆ.
ಮದುವೆಯ ಶಾಸ್ತ್ರಗಳು ನಡೆಯುತ್ತಿದ್ದಾಗಲೇ ಗಂಡು ಕತ್ತೆ ಅಲ್ಲಿಂದ ಓಡಿಹೋಗಿದೆ. ಇದನ್ನು ಕಂಡು ನೆರೆದಿದ್ದ ಸಾರ್ವಜನಿಕರು ನಕ್ಮಿದ್ದಾರೆ. ನಂತರ ಕತ್ತೆಯನ್ನು ಹಿಡಿದು ತಂದು ಮದುವೆ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. “ಪ್ರೇಮ ಎನ್ನುವುದು ಕೇವಲ ಮನುಷ್ಯರಿಗಷ್ಟೇ ಸೀಮಿತವಲ್ಲ, ಅದು ಪ್ರಾಣಿ-ಪಕ್ಷಿಗಳಿಗೂ ಇದೆ. ಕತ್ತೆ ಬಹಳ ಪವಿತ್ರವಾದ ಪ್ರಾಣಿ, ಪುರಾಣಗಳಲ್ಲೂ ಕತ್ತೆ ಮದುವೆಯ ಉಲ್ಲೇಖಗಳಿವೆ ಎಂದು ವಾಟ್ ನಾಗರಾಜ್ ಹೇಳಿದ್ದಾರೆ.
ಪ್ರೇಮ ವಿವಾಹವಾಗುವವರಿಗೆ ಸರ್ಕಾರ 3 ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡಬೇಕು ಮತ್ತು ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು,” ಎಂದು ವಾಟ್ ನಾಗರಾಜ್ ಒತ್ತಾಯಿಸಿದರು.


