ಡಾಲಿ ಧನಂಜಯ ನಿನ್ನೆಯಷ್ಟೇ ತಾನಿಷ್ಟ ಪಟ್ಟ ಡಾಕ್ಟರ್ ಧನ್ಯತಾ ಅವರೊಟ್ಟಿಗೆ ಹೊಸ ಬದುಕಿಗೆ ಹೆಜ್ಜೆ ಹಾಕಿದ್ದಾರೆ. ಆದರೆ ಡಾಲಿ ಧನಂಜಯನನ್ನ ಹೊರಗೆ ನೋಡಿದ ರೀತಿಯೇ ಬೇರೆ ಆಗಿದೆ. ಅವರು ಫಾಲೋ ಮಾಡುವ ತತ್ವಗಳು ಬೇರೆಯದ್ದೇ ಆಗಿವೆ. ಸದಾ ಅವರ ಬಾಯಲ್ಲಿ ಬುದ್ದ, ಬಸವ ತತ್ವಗಳೇ ಬರುತ್ತಿದ್ದವು. ಈಗ ನೋಡಿದ್ರೆ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲೆಲ್ಲ ಟೀಕೆಗೆ ಗುರಿಯಾಗಿದ್ದಾರೆ. ಈ ಸಂಬಂಧ ನಟ ಡಾಲಿ ಧನಂಜಯ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂಬಂಧ ಮಾತನಾಡಿರುವ ಡಾಲಿ ಧನಂಜಯ, ಹಿರಿಯರಿಗೆ ಕೆಲವು ನಂಬಿಕೆಗಳಿಂದ ಖುಷಿ ಸಿಗುತ್ತದೆ ಎಂದಾದರೆ ಅದನ್ನು ಪಾಲಿಸುವುದು ತಪ್ಪು ಎಂದು ನನಗೆ ಅನ್ನಿಸೋದಿಲ್ಲ. ಎಲ್ಲದಕ್ಕೂ ಉತ್ತರ ಕೋಡೋದಕ್ಕೆ ಆಗಲ್ಲ. ಆದರೆ ಬಹಳ ಮುಖ್ಯವಾಗಿ ಆಸ್ತಿಕತೆ ಮತ್ತು ನಾಸ್ತಿಕತೆ ಬಗ್ಗೆ ಮಾತನಾಡುತ್ತೇನೆ. ಕಾಯುವಂತಹ ನಂಬಿಕೆಗಳು ಬೇರೆ, ಮೂಢನಂಬಿಕೆಗಳು ಬೇರೆ. ಆಚರಣೆಗಳು ಅಂತ ಬಂದಾಗ ನಮ್ಮ ಸಮಾಜದಲ್ಲಿ ತುಂಬಾ ತರಹದ ಆಚರಣೆಗಳು ಇದಾವೆ.

ಅದಕ್ಕೊಂದು ಉದಾಹರಣೆ ನಮ್ಮ ಚಿಕ್ಕಪ್ಪನ ಮದುವೆ ಸಂದರ್ಭದಲ್ಲಿ ಕೊಂಡ ಹಾಯುವ ಪೂಜೆ ಮಾಡಿದರು.ಕೊಂಡ ಹಾಯುವುದನ್ನು ನಾನು ತುಂಬಾ ಚಿಕ್ಕ ವಯಸ್ಸಿನಿಂದಾನೂ ನೋಡಿಕೊಂಡು ಬಂದಿದ್ದೇನೆ. ಜಾತ್ರೆಯ ಜನಸಾಗರದಲ್ಲಿ ನಿಂತು ಎಂಜಾಯ್ ಮಾಡಿಕೊಂಡು ಬಂದಿದ್ದೇನೆ. ನನಗೆ ಅದು ಜಾನಪದ. ಅಲ್ಲಿ ತಪ್ಪು ಕಂಡಿಲ್ಲ. ನಾನು ವಿಜ್ಞಾನ ನಂಬುತ್ತೇನೆ. ಇಲ್ಲಿ ಎಲ್ಲವನ್ನು ಒಂದೇ ರೀತಿ ನೋಡೋದಕ್ಕೆ ಆಗಲ್ಲ. ನನ್ನ ಬಗ್ಗೆ ಎದ್ದಿರುವ ಪ್ರಶ್ನೆಗಳನ್ನು ಗೌರವಿಸುತ್ತೇನೆ. ನನ್ನನ್ನು ಪ್ರಶ್ನೆ ಮಾಡುತ್ತಿರುವವರನ್ನು ಗೌರವಿಸುತ್ತೇನೆ ಎಂದಿದ್ದಾರೆ.


