ಬೆಂಗಳೂರು: ದೇಶದ ಸಮಸ್ಯೆಗಳ ಬಗ್ಗೆ ಯಾಕೆ ಆರ್ ಎಸ್ ಎಸ್ ಮಾತನಾಡ್ತಿಲ್ಲ ಎಂಬ ಪ್ರಶ್ನೆಗೆ ರೇಣುಕಾಚಾರ್ಯ ತಬ್ಬಿಬ್ಬಾದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ ಎಸ್ ಎಸ್ ಸಮಾಜಸೇವೆ ಮಾತ್ರ ಮಾಡುತ್ತೆ.
ಸಂಘ ಪರಿವಾರದವರು ಪ್ರಚಾರಕ್ಕಾಗಿ ಕೆಲಸ ಮಾಡಿಲ್ಲ ಎಂದರು.
ಪ್ರವಾಹ,ಭೂಕಂಪ ಎಲ್ಲಾ ಸಮಯದಲೂ ಕೆಲಸ ಮಾಡಿದೆ.
ಪೆಟ್ರೋಲ್ ,ಡಿಸೇಲ್ ಬೆಲೆ ಸಹಜವಾಗಿ ಜಾಸ್ತಿಯಾಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಾಗಿದೆ, ಸಹಜವಾಗಿ ಮಾರುಕಟ್ಟೆ ತರ ಹೆಚ್ಚಾಗುತ್ತದೆ. ಪ್ರಧಾನಿಗಳು ದರ ಹೆಚ್ಚಾಗಿ ಮನೆಗೆ ತೆಗೆದುಕೊಂಡು ಹೋಗ್ತಾರಾ, ಮೋದಿಗೆನೂ ಹೆಂಡತಿ ಮಕ್ಕಳಿದ್ದಾರಾ..? ದೇಶದ ಅಭಿವೃದ್ಧಿ ಆಗ್ಬೇಕು, ಹಳ್ಳಿಗಳು ಅಭಿವೃದ್ಧಿ ಆಗ್ಬೇಕು, ರಸ್ತೆಗಳು ಅಭಿವೃದ್ಧಿ ಆಗ್ಬೇಕು.ಪೆಟ್ರೋಲ್,ಡಿಸೇಲ್ ಬೆಲೆ ಹೇಗೆ ಕಡಿಮೆ ಮಾಡೋಕೆ ಆಗುತ್ತೆ ಎಂದರು
ಉತ್ತರ ಪ್ರದೇಶದ ಲಖೀಂಪುರ್ ಹಿಂಸಾಚಾರ ವಿಚಾರದಲ್ಲಿ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು,
ಅಪಘಾತ ಮಾಡುವ ಸಂಸ್ಕೃತಿ ಅವರದ್ದು,ಅವರಿಗೆ ಚಿಕಿತ್ಸೆ ಕೊಡಿಸುವ ಕೆಲಸ ನಮ್ಮದು.
ಇದು ಜೆಡಿಎಸ್ ಕಾಂಗ್ರೆಸ್ ಸಂಸ್ಕೃತಿ,
ಒಂದು ರೀತಿ ತಾಲಿಬಾನ್ ಸಂಸ್ಕೃತಿ ಅವರದ್ದು ಅಲ್ಲಿ ಏನ್ ಆಗಿದೆಯೋ ಸತ್ಯವಾಗಿಯೂ ನನಗೆ ಗೊತ್ತಿಲ್ಲ.
ಕಾಂಗ್ರೆಸ್ ನವರು ಅನಗತ್ಯವಾಗಿ ಹೇಳಿಕೆ ನೀಡುತ್ತಿದ್ದಾರೆ.ಡಿಕೆಶಿ ಅನಗ್ಯವಾಗಿ ಹೇಳಿಕೆ ಕೊಡೋದು ಸರಿಯಲ್ಲ ಕಾಂಗ್ರೆಸ್, ಜೆಡಿಎಸ್ ನವ್ರ ಹೇಳಿಕೆ ಸರಿಯಲ್ಲ ಅಂಥ ಹೇಳಿಕೆಗಳಿಂದಾಗಿ ಜನ ಇವರನ್ನು ದೂರ ಇಟ್ಟಿರೋದು ಎಂದು ಕಿಡಿಕಾರೀದ್ರು.