ಬೀದಿ ಬದಿಯ ತರಕಾರಿಯಂತಾಗಿದೆ ಡಾಕ್ಟರೇಟ್ : ಶಾಂತವೀರ ಮಹಾಸ್ವಾಮೀಜಿ ಬೇಸರ..!

suddionenews
1 Min Read

 

 

ಸುದ್ದಿಒನ್, ಚಿತ್ರದುರ್ಗ, ಆ.28 : ಡಾಕ್ಟರೇಟ್ ಪದವಿ ಈಗ ಮೊದಲಿನಂತೆ ಉಳಿದಿಲ್ಲ. ಹಣ ಕೊಟ್ಟವರಿಗೆ ಸುಲಭವಾಗಿ ಸಿಗುತ್ತಿದೆ ಎಂಬ ಆರೋಪ ಹಲವು ದಿನಗಳಿಂದಾನೂ ಕೇಳಿ ಬರುತ್ತಿದೆ. ಇದೀಗ ಇದೇ ವಿಚಾರಕ್ಕೆ ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶಾಂತವೀರ ಮಹಾಸ್ವಾಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದೆ ನಮ್ಮ ಹೆಸರಿನ ಮುಂದೆ ಗೌರವ ಡಾಕ್ಟರೇಟ್ ಬಳಸಬೇಡಿ ಎಂದು ಪ್ರಕಟಣೆ ಹೊರಡಿಸಿದ್ದಾರೆ.

“ಆತ್ಮೀಯ ಪತ್ರಕರ್ತರು, ಭಕ್ತರು, ಶ್ರೀಮಠದ ಶಿಷ್ಯರು, ಅಭಿಮಾನಿಗಳು, ಸ್ನೇಹಿತರಲ್ಲಿ ಮನವಿ. ಇತ್ತೀಚಿಗೆ ಗೌರವ ಡಾಕ್ಟರೇಟ್ ಎಂಬುದು ವ್ಯಾಪಾರೀಕರಣವಾಗಿರುವುದರಿಂದ ಅಸಮರ್ಥರು ಹಣವಂತರು, ಹಣ ಕೊಟ್ಟು ಡಾ. ಪದವಿ (ಖರೀದಿ) ಪಡೆಯುತ್ತಿರುವುದು ಅತ್ಯಂತ ಖಂಡನೀಯ ಮತ್ತು ಅಸಹ್ಯತಂದಿದೆ. ಬೀದಿ ಬದಿಯ ತರಕಾರಿಯಂತೆ ಹತ್ತು ಇಪ್ಪತ್ತು ಸಾವಿರಕ್ಕೆ ಮಾರುತ್ತಿದ್ದಾರೆ ಹಾಗೂ ಪಡೆಯುತ್ತಿದ್ದಾರೆ.

ಇದು ಮಠಾಧೀಶರನ್ನು ಬಿಟ್ಟಿಲ್ಲ ಇಂತಹ ನಕಲಿಗಳಿಂದ ಅಸಲಿ ಸಮರ್ಥರು, ಅರ್ಹರಿಗೆ, ಆಗೌರವ ತರುವಂತಿದೆ. ಈ ಕಾರಣದಿಂದ ನಮಗೆ ನೀಡಿದ್ದ ಗೌರವ ಡಾಕ್ಟರೇಟ್ ತಿರಸ್ಕರಿಸುತ್ತೇವೆ ಹಾಗೂ ಎರಡು ದೇಶಗಳಿಂದ ಬಂದಿರುವ ಮನವಿಯನ್ನು ಸ್ವೀಕರಿಸುವುದಿಲ್ಲ” ಎಂದು ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠ ಪೀಠಾಧ್ಯಕ್ಷರು ಆದಂತ ಶ್ರೀ ಶಾಂತವೀರ ಮಹಾಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *