ಹೆಂಡತಿ: ಅವರಿಬ್ಬರು ಡಾಕ್ಟರ್.. ವಿಕ್ಟೋರಿಯಾದಲ್ಲಿಯೇ ಕೆಲಸ.. ಆಕೆ ಡರ್ಮಾಲಾಜಿಸ್ಟ್.. ಆತ ಜನರಲ್ ಸರ್ಜನ್.. ಮನೆಯಲ್ಲಿ ಒಪ್ಪಿಯೇ ಮದುವೆ ಮಾಡಿಕೊಟ್ಟರು. 2024ರ ಮೇ ತಿಂಗಳಲ್ಲಿ ಇಬ್ಬರ ಮದುವೆಯಾಗಿತ್ತು. ಆದ್ರೆ ಆಕೆಗೆ ಅಜೀರ್ಣ ಸಮಸ್ಯೆ,ಲೋ ಶುಗರ್, ಗ್ಯಾಸ್ಟ್ರಿಕ್ ಇತ್ತು. ಗಂಡನ ಮನೆಗೆ ಬಂದ ಮೇಲೆ ಆ ಸಮಸ್ಯೆಯಿಂದ ಆರೋಗ್ಯ ತಪ್ಪುತ್ತಿದ್ದರು. ಯಾವಾಗಲು ವಾಂತಿ ಮಾಡಿಕೊಳ್ಳುತ್ತಿದ್ದರು. ಕೃತಿಕಾ ಆರೋಗ್ಯ ಸಮಸ್ಯೆಯಿಂದ ಕೊಲ್ಲುವ ಹಂತಕ್ಕೆ ತಲುಪಿದ ವೈದ್ಯ ಮಹೇಂದ್ರ. ಕಳೆದ ಆರು ತಿಂಗಳ ಹಿಂದೆ ತನ್ನ ಹೆಂಡತಿಯನ್ನು ಕೊಂದು, ಸಹಜ ಸಾವು ಎಂದು ಬಿಂಬಿಸಿದ್ದ ಮಹಾನುಭಾವ ವೈದ್ಯನನ್ನ ಪೊಲೀಸರು ಬಂಧಿಸಿದ್ದಾರೆ.
ಕೃತಿಕಾ ಸಾವಿಗೂ ಮುನ್ನ ಪೋಷಕರ ಮನೆಗೆ ಹೋಗಿದ್ದರು. ಹುಷಾರಿಲ್ಲದೆ ಮಲಗಿದ್ದಾಗ ಈತನೇ ಒಂದಷ್ಟು ಮೆಡಿಸನ್ ಕೊಟ್ಟಿದ್ದ. ಎರಡು ದಿನಗಳ ಕಾಲ ನಿರಂತರವಾಗಿ ಮೆಡಿಸನ್ ನೀಡಿದ್ದ ಕಾರಣ, ಪ್ರಜ್ಞೆ ತಪ್ಪಿದ್ದರು. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಷ್ಟರಲ್ಲಿ ಸಾವನ್ನಪ್ಪಿರುವ ಬಗ್ಗೆ ವೈದ್ಯರು ತಿಳಿಸಿದರು.
ಆಸ್ಪತ್ರೆಯಿಂದ ಡೆತ್ ಬಗ್ಗೆ ಪೊಲೀಸರಿಗೆ ಮಾಹಿತಿ ಹೋಗಿದ್ದ ಕಾರಣ, ಆಸ್ಪತ್ರೆಗೆ ಬಂದು ಪೋಷಕರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿತ್ತು. ಹಾಗೇ ಮರಣೋತ್ತರ ಪರೀಕ್ಷೆ, ದೇಹದ ಕೆಲವು ಅಂಶಗಳನ್ನು ಎಫ್ಎಸ್ಎಲ್ ಗೆ ಕಳುಹಿಸಲಾಗಿತ್ತು. ಆರು ತಿಂಗಳ ನಂತರ ಆಕೆಯೇ ಗಂಡನೇ ಕೊಂದಿರುವ ಸತ್ಯ ತಿಳಿದು ಬಂದಿದೆ. ಅಷ್ಟರಲ್ಲಿ ಆತ ಮಣಿಪಾಲ್ ಗೆ ಎಸ್ಕೇಪ್ ಆಗಿದ್ದ. ಪೊಲೀಸರು ಮಣಿಪಾಲ್ ಗೆ ಹೋಗಿ ವೈದ್ಯ ಮಹೇಂದ್ರನನ್ನು ಬಂಧಿಸಿ, ಕರೆದುಕೊಂಡು ಬಂದಿದ್ದಾರೆ. ಒಬ್ಬ ವೈದ್ಯನಾಗಿ ಕೃತಿಕಾಳಿಗಿದ್ದ ಆರೋಗ್ಯ ಸಮಸ್ಯೆಯನ್ನೇ ನೆಪವಾಗಿಟ್ಟುಕೊಂಡು ಕೊಂದು ಬಿಟ್ಟನಲ್ಲ ಎಂಬ ಆಕ್ರೋಶ ಹೊರ ಹಾಕಿದ್ದಾರೆ.




