ಅನೇಕ ಮಂದಿ ಪುಸ್ತಕವನ್ನು ತೆಗೆದುಕೊಂಡು ಓದಲು ಪ್ರಾರಂಭಿಸಿದ ತಕ್ಷಣ ಕೆಲವೇ ನಿಮಿಷಗಳಲ್ಲಿಯೇ ಕೆಲವರು ಆಕಳಿಸಲು ಪ್ರಾರಂಭಿಸುತ್ತಾರೆ. ಕಣ್ಣುಗಳನ್ನು ಮುಚ್ಚುತ್ತಾರೆ. ಅದು ಏಕೆ ಗೊತ್ತೆ ? ಪುಸ್ತಕ ಓದುವಾಗ ನಿದ್ರೆ ಬರುವುದರ ಹಿಂದೆ ಕೆಲವು ಆಸಕ್ತಿದಾಯಕ ವೈಜ್ಞಾನಿಕ ಕಾರಣಗಳಿವೆ.
ನೀವು ಓದುತ್ತಿರುವ ವಿಷಯವು ತುಂಬಾ ಕಷ್ಟಕರವಾಗಿದ್ದರೆ ಅಥವಾ ನಿಮಗೆ ಅರ್ಥವಾಗದಿದ್ದರೆ, ಮೆದುಳಿನ ಮೇಲಿನ ಒತ್ತಡ ಹೆಚ್ಚಾಗುತ್ತದೆ. ಇಂತಹ ಸಮಯದಲ್ಲಿ ಈ ಒತ್ತಡದಿಂದ ತಪ್ಪಿಸಿಕೊಳ್ಳಲು ಮೆದುಳು ದೇಹಕ್ಕೆ ವಿಶ್ರಾಂತಿ ಸಂಕೇತಗಳನ್ನು ಕಳುಹಿಸುತ್ತದೆ.

ಪುಸ್ತಕ ಓದುವಾಗ, ನಮ್ಮ ಕಣ್ಣುಗಳು ನಿರಂತರವಾಗಿ ಒಂದು ಸ್ಥಳದಲ್ಲಿ ಮತ್ತು ಸೂಕ್ಷ್ಮ ಅಕ್ಷರಗಳ ಮೇಲೆ ಕೇಂದ್ರೀಕರಿಸುತ್ತವೆ. ಇದು ಕಣ್ಣಿನ ಸ್ನಾಯುಗಳ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತದೆ. ಕಣ್ಣುಗಳು ದಣಿದಾಗ, ಅವು ಮೆದುಳಿಗೆ ವಿಶ್ರಾಂತಿ ಪಡೆಯಬೇಕೆಂಬ ಸಂಕೇತವನ್ನು ಕಳುಹಿಸುತ್ತವೆ.
ನೀವು ದಿನಕ್ಕೆ 7-8 ಗಂಟೆಗಳ ಕಾಲ ಸಾಕಷ್ಟು ನಿದ್ರೆ ಮಾಡದಿದ್ದರೆ, ನಿಮ್ಮ ದೇಹವು ದಣಿದ ಅನುಭವವಾಗುತ್ತದೆ. ನೀವು ಶಾಂತವಾದ ಸ್ಥಳದಲ್ಲಿ ಅಧ್ಯಯನ ಮಾಡಲು ಕುಳಿತಾಗ, ನಿಮ್ಮ ದೇಹವು ವಿಶ್ರಾಂತಿ ಪಡೆಯುವ ಸಮಯ ಎಂದು ಭಾವಿಸುತ್ತದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









