ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಖುರ್ಚಿ ಕದನ ಸೈಲೆಂಟ್ ಆಗಿದ್ದರು ಸಹ ಬೂದಿ ಮುಚ್ಚಿದ ಕೆಂಡದಂತೆ ಇದೆ. ಇದಕ್ಕೆಲ್ಲ ಉತ್ತರ ಕೊಡಬೇಕಾದವರು ಹೈಕಮಾಂಡ್. ಆದರೆ ಸೈಲೆಂಟ್ ಆಗಿರೋದು ಕಾಂಗ್ರೆಸ್ ನಲ್ಲಿರುವ ಶಾಸಕರಿಗೇನೆ ಬೇಸರ ತರಿಸಿದೆ. ನಾಯಕತ್ವದ ಬದಲಾವಣೆಯ ಗೊಂದಲ ನಮ್ಮನ್ನ ಅಡ್ಡ ಕತ್ತರಿಯಲ್ಲಿ ಸಿಲುಕಿಸಿದೆ ಎಂದು ಬೇಸರ ಹೊರ ಹಾಕಿದ್ದಾರೆ.
ಯಾಕಂದ್ರೆ ಸಿಎಂ ಸ್ಥಾನ ಉಳಿಯಬೇಕಾದ್ರೂ, ಸಿಎಂ ಸ್ಥಾನ ಗಳಿಸಬೇಕಾದರೂ ಬಹಳ ಮುಖ್ಯವಾಗಿ ತಮ್ಮ ಪಕ್ಷದ ಸಚುವರು, ಶಾಸಕರ ಬೆಂಬಲ ಎಷ್ಟಿದೆ ಅನ್ನೋದು ಮುಖ್ಯವಾಗುತ್ತೆ. ಹೀಗಾವಿ ಪಕ್ಷದಲ್ಲಿರುವ ಶಾಸಕರು, ಸಚಿವರುಗಳು ಒಬ್ಬರ ಬಳಿ ಹೋದ್ರೆ ಮತ್ತೊಬ್ಬರಿಗೆ ಸಿಟ್ಟು ಬರ್ತಿದೆ ಎಂಬ ಮಾತು ಕೇಳಿ ಬರ್ತಿದೆ ಎನ್ನಲಾಗ್ತಿದೆ.
ಸಿಎಂ ಸಿದ್ದರಾಮಯ್ಯ ಅವರ ಬಳಿ ಅನುದಾನ ಕೇಳಲೆಂದು ಹೋದರೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಬೇಸರವಾಗ್ತಿದೆ ಎನ್ನಲಾಗ್ತಿದೆ. ಹೀಗಿರುವಾಗ ನಾವೂ ಏನು ಮಾಡೋದು ಅಂತ ಅಧಿವೇಶನದ ಸಂದರ್ಭದಲ್ಲಿ ಶಾಸಕರು ಪರಸ್ಪರ ಮಾತನಾಡಿಕೊಂಡಿದ್ದಾರೆ ಎನ್ನಲಾಗಿದೆ. ನಾಯಕತ್ವ ಬದಲಾವಣೆ ವಿಚಾರದಲ್ಲಿ ಏನೇ ತೀರ್ಮಾನವಿದ್ದರೂ ಕರೆದು ಮಾತುಕತೆ ನಡೆಸುವುದು ಸೂಕ್ತ. ಗೊಂದಲ ಹೀಗೆ ಮುಂದುವರೆದರೆ ಅ್ಉ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಕಾರಣ ಆಗಬಹುದು. ಹೀಗಾಗಿ ಎಲ್ಲಾ ಹಿರಿಯ ಸಚಿವರೂ ಗಾಢ ಮೌನ ಮುರಿಯುವಂತೆ ಕಾಂಗ್ರೆಸ್ ಶಾಸಕರು ಆಗ್ರಹಿಸಿದ್ದಾರೆ ಎನ್ನಲಾಗಿದೆ.
ಸಿಎಂ ಆಗಬೇಕೆಂಬ ಆಸೆಯಿದ್ದರು ಡಿಸಿಎಂ ಡಿಕೆ ಶಿವಕುಮಾರ್ ಅವರು ಸಾರ್ವಜನಿಕವಾಗಿ ಆ ಬೇಸರವನ್ನ ತೋರಿಸಿಲ್ಲ. ಹೈಕಮಾಂಡ್ ನಾಯಕರ ಭೇಟಿಗೆ ಪ್ರಯತ್ನ ಪಟ್ಟು ಸುಮ್ಮನಾಗಿದ್ದಾರೆ. ಆದರೂ ಪ್ರಯತ್ನವಂನತು ಬಿಟ್ಟಿಲ್ಲ. ಇಬ್ಬರ ನಡುವೆ ಮಾತುಕತೆ ಆಗಿತ್ತು ಎಂಬೆಲ್ಲಾ ಮಾತುಗಳು ಹರಿದಾಡಿವೆ. ಆದರೆ ಅದಕ್ಕೆ ಸ್ಪಷ್ಟನೆ ಸಿಕ್ಕಿಲ್ಲ. ಸದ್ಯಕ್ಕೆ ಶಾಸಕರೆಲ್ಲಾ ಈ ಸಂಬಂಧ ಬೇಸರ ಹೊರ ಹಾಕಿದ್ದಾರೆ ಎನ್ನಲಾಗಿದೆ.

