ಮುಂದಿನ ಟೀಂ ಇಂಡಿಯಾ ನಾಯಕ ಯಾರು ಗೊತ್ತಾ..? ನೀವು ಗೆಸ್ ಮಾಡಿದ್ದು.. ಕೊಹ್ಲಿ ಹೇಳಿದ್ದು ಒಂದೇನಾ..?

1 Min Read

ಟೀಂ ಇಂಡಿಯಾಗೆ ಮುಂದಿನ ನಾಯಕ ಯಾರು ಎಂಬ ಪ್ರಶ್ನೆ ಸಹಸ್ರಾರು ಮಂದಿಯದ್ದು. ಹಾಗೇ ಇವರೇ ಆದ್ರೆ ಅದ್ಬುತವಾಗಿ ತಂಡವನ್ನ ನಡೆಸಿಕೊಂಡು ಹೋಗ್ತಾರೆ ಅನ್ನೋದು ಕ್ರಿಕೆಟ್ ಅಭಿಮಾನಿಗಳ ಅಭಿಪ್ರಾಯ. ಇದೀಗ ಟೀಂ ಇಂಡಿಯಾ ನಾಯಕರಾಗಿದ್ದ ಕೊಹ್ಲಿ ಆ ಮುಂದಿನ ನಾಯಕ ಯಾರು ಎಂಬ ಸುಳಿವು ಬಿಟ್ಟು ಕೊಟ್ಟಿದ್ದಾರೆ.

ರೋಹಿತ್ ಶರ್ಮಾ ಮೇಲೆ ಕ್ರಿಕೆಟ್ ಪ್ರೇಮಿಗಳಿಗೆ ಅತಿಯಾದ ನಂಬಿಕೆ. ಇವರ ಸಾರಥ್ಯದಲ್ಲಿ ನಾವೂ ಪಂದ್ಯಗಳನ್ನ ಗೆಲ್ಲಲೇಬಹುದು ಎಂಬ ಅಪಾರ ನಂಬಿಕೆ. ಹೀಗಾಗಿನೇ ಈ ಮುಂಚೆಯೇ ನಮ್ಮ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾನೆ ಅಂತ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲೆಲ್ಲಾ ಹಬ್ಬ ಮಾಡಿದ್ರು. ಇದೀಗ ಕೊಹ್ಲಿ ಕೂಡ ಅದೇ ಸುಳಿವನ್ನ ನೀಡಿದ್ದಾರೆ.

ವಿರಾಟ್​ ಕೊಹ್ಲಿ ಟಿ20 ಕ್ರಿಕೆಟ್​​ ನಾಯಕನಾಗಿ ನಿನ್ನೆಯೇ ಕೊನೆ ಪಂದ್ಯವನ್ನಾಡಿದ್ದು, ಮುಂದಿನ ನಾಯಕ ಯಾರು ಚರ್ಚೆ ನಡೀತಿದೆ. ಇದರ ನಡುವೆ ವಿರಾಟ್​ ನೀಡಿದ ಹೇಳಿಕೆ, ರೋಹಿತ್​ ಶರ್ಮಾನೇ ಮುಂದಿನ ನಾಯಕ ಅನ್ನೋದನ್ನ ಸೂಚಿಸಿದೆ. ಇದಕ್ಕೂ ಮೊದಲು ರೋಹಿತ್​ ಶರ್ಮಾ ವೈಟ್​ಬಾಲ್​ ಕ್ರಿಕೆಟ್​ನ ನಾಯಕರಾಗಲಿದ್ದಾರೆ ಎಂದು ಬಿಸಿಸಿಐ ಮೂಲಗಳಿಂದ ಮಾಹಿತಿ ಬಂದಿತ್ತು.

Share This Article
Leave a Comment

Leave a Reply

Your email address will not be published. Required fields are marked *