ನಿಖಿಲ್ ಕುಮಾರಸ್ವಾಮಿ ಈ ಬಾರಿ ಸ್ಪರ್ಧಿಸುವ ಕ್ಷೇತ್ರ ಯಾವುದು ಗೊತ್ತೆ ?

1 Min Read

ಮಂಡ್ಯ, ಬಳಿಕ ರಾಮನಗರದಲ್ಲಿ ಆಘಾತಕಾರಿ ಸೋಲುಂಡರು. ಇದೀಗ 2028ರ ಚುನಾವಣೆಗೆ ಸ್ಪರ್ಧಿಸಲು ನಿಖಿಲ್ ಸಿದ್ಧತೆ ನಡೆಸಿದ್ದಾರೆ.ಈ ಬಾರಿಯೂ ರಾಮನಗರದಿಂದಲೇ ಸ್ಪರ್ಧಿಸೋದಾಗಿ ಘೋಷಣೆ ಮಾಡಿದ್ದಾರೆ.’ನಾನು ರಾಮನಗರಕ್ಕೆ ಫಿಕ್ಸ್ ಆಗಿದ್ದೇನೆ, ಯಾವುದೇ ಅನುಮಾನ ಬೇಡ. ನಾನು ಪಲಾಯನವಾದಿ ರಾಜಕಾರಣ‌ ಮಾಡಲ್ಲ, ನಮ್ಮ ಕಾರ್ಯಕರ್ತರ ಆದೇಶವೇ ಅಂತಿಮ’ ಎಂದು ಹೇಳುವ ಮೂಲಕ ಮುಂದಿನ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ನಿಖಿಲ್ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.

ಮುಂದಿನ ಚುನಾವಣೆಯಲ್ಲಿ ನಾನು ಎಲ್ಲಿಂದ ಸ್ಪರ್ಧಿಸುತ್ತೇನೆ ಎಂಬುದರ ಬಗ್ಗೆ ಪದೇ ಪದೇ ಪ್ರಶ್ನೆ ಕೇಳಬೇಡಿ. ರಾಮನಗರದಲ್ಲಿ ಸ್ಪರ್ಧಿಸುವ ವಿಷಯದಲ್ಲಿ ಅಷ್ಟೊಂದು ಅನುಮಾನ ಬೇಡ. ರಾಮನಗರ ಜನರೇ ನನ್ನ ಸ್ಪರ್ಧೆ ಬಗ್ಗೆ ಯಾರೂ ಅನುಮಾನ ಪಡುವುದು ಬೇಡ.

ರಾಮನಗರ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ನಿಶ್ಚಿತ’ ಎಂದು ನಿಖಿಲ್ ಘೋಷಣೆ ಮಾಡಿದ್ದಾರೆ. ‘ದೇವೇಗೌಡರ ಕುಟುಂಬ ಈ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರಿಗಾಗಿ ದುಡಿದಿದೆ. ಆ ಜನ ನಮ್ಮನ್ನು ಕಾಪಾಡುತ್ತಾರೆ ಎಂಬ ವಿಶ್ವಾಸ ಇದೆ’ ಎಂದು ಹೇಳಿದ್ದಾರೆ.’ನನ್ನನ್ನು ನಂಬಿರುವ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಜನರನ್ನು ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ರಾಮನಗರ ಕ್ಷೇತ್ರದಿಂದ ಸ್ಪರ್ಧೆ ಮಾಡಲು ನಿರ್ಧರಿಸಿದ್ದೇನೆ’ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ರು.

Share This Article
Enable Notifications OK No thanks