ಡಿಸಿಎಂ ಆಗಿರುವ ಡಿಕೆಶಿ ಅವರು ತಂದೆ ಆಸೆಯಂತೆ ಹೋಗಿದ್ದರೆ ಏನಾಗ್ತಾ ಇದ್ರು ಗೊತ್ತಾ..?

suddionenews
1 Min Read

ಬೆಂಗಳೂರು: ಡಿಕೆ ಶಿವಕುಮಾರ್ ಇಂದು ರಾಜಕೀಯದಲ್ಲಿ ಬಹಳ ಗಟ್ಟಿಯಾಗಿ ಬೆಳೆದಿರುವ ವ್ಯಕ್ತಿ. ಪಕ್ಷವನ್ನ ಕಟ್ಟಿ ಬೆಳೆಸುವ ದೊಡ್ಡ ಸಾಮರ್ಥ್ಯವಿರುವ ಶಕ್ತಿ. ಆದರೆ ಡಿಕೆ ಶಿವಕುಮಾರ್ ಅವರು ರಾಜಕೀಯಕ್ಕೆ ಬಾರದೆ ಹೋಗಿದ್ದರೆ ಇಂಜಿನಿಯರ್ ಆಗಿ ಇರ್ತಾ ಇದ್ರು. ಕನಸುಗಳಿದ್ದಾಗ, ಹಠವಿದ್ದಾಗ ದೊಡ್ಡಮಟ್ಟದಲ್ಲಿಯೇ ಸಾಧನೆ ಮಾಡಬಹುದು ಎಂಬುದಕ್ಕೆ ಡಿಕೆ ಶಿವಕುಮಾರ್ ಅವರೇ ಸಾಕ್ಷಿ. ಅವರನ್ನ ಇಂಜಿನಿಯರ್ ಮಾಡಬೇಕೆಂಬುದು ಅವರ ತಂದೆಯವರ ಆಸೆಯಾಗಿತ್ತು. ಆ ಬಗ್ಗೆ ಡಿಕೆ ಶಿವಕುಮಾರ್ ಅವರು ಮನಬಿಚ್ಚಿ ಮಾತನಾಡಿದ್ದಾರೆ.

ಇಂದು ಇಂಜಿನಿಯರ್ಸ್ ದಿನದ ಪ್ರಯುಕ್ತ ಬೆಂಗಳೂತಿನ ಕೆ.ಆರ್.ಸರ್ಕಲ್ ನಲ್ಲಿರುವ ವಿಶ್ವೇಶ್ಚರಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಅವರು, ನಮ್ಮಪ್ಪನಿಗೆ ನಾನು ಇಂಜಿನಿಯರ್ ಆಗಬೇಕು ಅಂತ ಆಸೆಯಿತ್ತು. ಆದರೆ ನನಗೆ ಇಂಜಿನಿಯರ್ ಕೋರ್ಸ್ ಮಾಡುವುದಕ್ಕೆ ಆಗಲಿಲ್ಲ.ಆದರೆ ಇಂಜಿನಿಯರ್ ಗಳನ್ನು ತಯಾರು ಮಾಡುವ ಕಾಲೇಜನ್ನು ಸ್ಥಾಪಿಸಿದ್ದೇನೆ. ನನ್ನ ಇಬ್ಬರು ಮಕ್ಕಳು ಇಂಜಿನಿಯರ್ಸ್. ನಾನು ಜಲಸಂಪನ್ಮೂಲ, ಇಂಧನ ಇಲಾಖೆಯಲ್ಲಿ ಇಂಜಿನಿಯರ್ಸ್ ಜೊತೆಗೆ ಕೆಲಸ ಮಾಡಿದ್ದೇನೆ. ಅವರ ಕೆಲಸ ಕಾರ್ಯಗಳ ಬಗ್ಗೆ ನನಗೆ ಅರಿವು ಇದೆ ಎಂದು ತಮ್ಮ ಮನದಾಳದ ಬಗ್ಗೆ ಹಂಚಿಕೊಂಡಿದ್ದಾರೆ.

ಸದ್ಯ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸ್ತಾ ಇದ್ದಾರೆ. ಇದೇ ಅಧಿಕಾರದ ಅವಧಿಯಲ್ಲಿ ಸಿಎಂ ಕೂಡ ಆಗ್ತಾರೆ ಎಂಬ ಮಾತಿದೆ. ಆ ವಿಚಾರ ಆಗಾಗ ಸದ್ದು‌ ಮಾಡಿ ತಣ್ಣಗಾಗುತ್ತೆ. ಅವರು ಮುಖ್ಯಮಂತ್ರಿ ಆಗ್ತಾರಾ ಹೇಗೆ ಎಂಬುದನ್ನು ಕಾದು ನೋಡಬೇಕಿದೆ. ಆದರೂ ಇಂತಹ ಸಂದರ್ಭದಲ್ಲಿ ಅವರ ಬಾಲ್ಯ, ಓದು, ಆಸೆಗಳ ಬಗ್ಗೆ ಮನಬಿಚ್ಚಿ ಮಾತನಾಡುವುದು ಅವರ ಬೆಂಬಲಿಗರು, ಅಭಿಮಾನಿಗಳಿಗೆ ಖುಷಿಯಾಗಿಸುತ್ತೆ.

Share This Article