ಬೆಂಗಳೂರು: ನ್ಯೂ ಇಯರ್ ಅಂದ್ರೆ ಎಲ್ಲರೂ ಪಾರ್ಟಿ ಮೂಡಿನಲ್ಲಿಯೇ ಇರ್ತಾರೆ. ಇನ್ನು ಪೊಲೀಸರಿಗೆ ಅವತ್ತು ಕೊಂಚ ಹೆಚ್ಚೆ ಕೆಲಸ ಇರುತ್ತೆ. ಆದ್ರೆ ಕಳೆದ ಎರಡು ವರ್ಷದಿಂದ ಕೊರೊನಾ ಯಾರಿಗೂ ಅದ್ಧೂರಿ ಪಾರ್ಟಿ ಮಾಡೋದಕ್ಕೆ ಬಿಡ್ತಾ ಇಲ್ಲ. ಅದರಂತೆ ಈ ಬಾರಿಯೂ ಪಾರ್ಟಿಗಳೇನು ನಡೆದಿಲ್ಲ. ಹಾಗಂತ ಪೊಲೀಸರಿಗೆ ಕೆಲಸ ಕಡಿಮೆ ಇರಲಿಲ್ಲ.
ಜನರ ರಕ್ಷಣೆ ಜೊತೆಗೆ ಪೊಲೀಸರು ಈ ಬಾರಿ ಜನ ಮೆಚ್ಚುವಂತ ಸೆಲೆಬ್ರೇಷನ್ ಮಾಡಿದ್ದಾರೆ. ವಿನೂತನ ರೀತಿಯಲ್ಲಿ ಸೆಲೆಬ್ರೇಷನ್ ಹೊಗಳಿಕೆಗೆ ಪಾತ್ರರಾಗಿದ್ದಾರೆ. ರೌಡಿಶೀಟರ್ ಗಳ ಕೈಲಿ ಗಿಡ ನೆಡಿಸಿದ್ದಾರೆ. ಹೊಸ ವರ್ಷವನ್ನ ಈ ರೀತಿಯಾಗಿ ಆಚರಿಸಿದ್ದಾರೆ.
ನಗರದ ಬಂಡೆ ಪಾಳ್ಯ ಪೊಲೀಸರು ಈ ರೀತಿ ಕೆಲಸ ಮಾಡಿದ್ದು, ಇನ್ನು ಮುಂದೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಲ್ಲ ಎಂದು ಪ್ರಮಾಣ ಮಾಡಿಸಿಕೊಂಡಿದ್ದಾರೆ. ಬಾದಾಮಿ, ಹೊಂಗೆ ಸೇರಿದಂತೆ ಹಲವು ರೀತಿಯ 25 ಕ್ಕೂ ಹೆಚ್ಚು ಸಸಿಗಳನ್ನ ರೌಡಿಶೀಟರ್ ಹೆಸರಿಗೆ ದತ್ತು ನೀಡಲಾಗಿದೆ. ಈ ಗಿಡಗಳ ನೆಟ್ಟು ಸೆಲೆಬ್ರೇಷನ್ ಮಾಡಿದ್ದಾರೆ. ಅಷ್ಟೇ ಅಲ್ಲ ಆ ಗಿಡಗಳ ಪೋಷಣೆಯ ಹೊಣೆಯೂ ರೌಡಿಶೀಟರ್ ಗಳದ್ದೇ ಆಗಿದೆ.