ಮತಾಂತರ ನಿಷೇಧ ಕಾಯ್ದೆ ಜಾರಿ ಬಗ್ಗೆ ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದೇನು ಗೊತ್ತಾ..?

ತುಮಕೂರು: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ಯಾಕಂದ್ರೆ ಈಗಾಗಲೇ ಸಾಕಷ್ಟು ಕಡೆ ಮತಾಂತರ ಆಗುತ್ತಿರುವ ಘಟನೆಗಳು ನಡೆಯುತ್ತಿವೆ. ಜೊತೆಗೆ ಆಸೆ, ಆಮಿಷವೊಡ್ಡಿ ಮತಾಂತರ ಮಾಡುತ್ತಿರುವ ಆರೋಪಗಳು ಕೇಳಿ ಬಂದಿವೆ. ಈ ಹಿನ್ನೆಲೆ ಮತಾಂತರ ನಿಷೇಧ ಕಾಯ್ದೆ ಕಾನೂನನ್ನ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ.

ನಾಳೆಯಿಂದ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಲಾಗುವುದು. ಆದರೆ ಜಾರಿಗೆ ತರುವುದಕ್ಕೂ ಮುನ್ನ ಅದರ ರೂಪುರೇಷೆಗಳನ್ನ ತಿಳಿದುಕೊಳ್ಳಲು ಸಮಯ ಕೇಳಿದ್ದೇನೆ. ಯಾಕಂದ್ರೆ ಅದರಿಂದ ಯಾರಿಗೂ ನೋವಾಗಬಾರದು ಆ ರೀತಿ ಕಾಯ್ದೆ ಇರಬೇಕು ಎಂದಿದ್ದಾರೆ.

ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಈಗಾಗಲೇ ಅಸ್ತಿತ್ವದಲ್ಲಿದೆ. ಆದ್ರೆ ಅದಕ್ಕೆ ಇನ್ನಷ್ಟು ಬಲ ಬರಬೇಕು. ಬಲವಂತವಾಗಿ ಮತಾಂತರ ಮಾಡುವುದನ್ನು ನಿಷೇಧಿಸಲಾಗಿದೆ. ಇದಾಗ್ಯೂ ಇಂಥ ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಯಾವ ರೀತಿಯ ಶಿಕ್ಷೆ ವಿಧಿಸಬೇಕು ಎಂದು ಚರ್ಚೆಗಳಾಗುತ್ತವೆ ಎಂದಿದ್ದಾರೆ.

ಸ್ವಯಂಪ್ರೇರಿತ ಮತಾಂತರದ ರೂಪುರೇಷೆ ವಿವರಿಸಲು ಮತ್ತು ಮತಾಂತರ ಆಗುವವರು ಅರ್ಜಿ ಸಲ್ಲಿಸಲು ಅಗತ್ಯ ವ್ಯವಸ್ಥೆಗಳನ್ನು ಜಾರಿ ಮಾಡಲಾಗುವುದು ಎಂದು ಹೇಳಿದರು. ಮತಾಂತರಕ್ಕೆ ಅರ್ಜಿ ಸಲ್ಲಿಸಿದವರು ತಾವು ಬಲವಂತದಿಂದ ಮತಾಂತರ ಆಗುತ್ತಿಲ್ಲ ಎಂಬುದನ್ನೂ ನಿರೂಪಿಸಬೇಕಾಗುತ್ತದೆ. ಇದು ಜಿಲ್ಲಾಧಿಕಾರಿಗೆ ಮನವರಿಕೆಯಾದ ನಂತರ ಅರ್ಜಿಯನ್ನು ಪುರಸ್ಕರಿಸುವ ಅಥವಾ ತಿರಸ್ಕರಿಸುವ ತೀರ್ಮಾನವನ್ನು ಅವರು ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!