ನವದೆಹಲಿ: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆ ರಾಜಕೀಯ ಪಕ್ಷಗಳು ಆಮಿಷವೊಡ್ಡುವುದಕ್ಕೆ ಆರಂಭಿಸಿವೆ. ಭರವಸೆಗಳನ್ನು ನೀಡುತ್ತಿವೆ. ಇದೀಗ ಮೋದಿ ತವರು ರಾಜ್ಯ ಗುಜರಾತ್ ನ ಜನತೆಗೆ ಕಾಂಗ್ರೆಸ್ ಯೋಜನೆಯ ಭರವಸೆಯೊಂದನ್ನು ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಗುತ್ತಿಗೆ ನೌಕರರಿಗೆ ಸ್ಥಿರ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಹಳೆ ಪಿಂಚಣಿಯನ್ನು ವಾಪಾಸ್ ತಂದು, ಸಕಾಲಕ್ಕೆ ಬಡ್ತಿ ಸಿಗುವಂತೆ ಮಾಡುವ ಭರವಸೆಯನ್ನು ನೀಡಿದೆ. ಈ ಯೋಜನೆಗಳು ರಾಜಸ್ಥಾನದಲ್ಲಿ ಅದಾಗಲೇ ಜಾರಿಯಲ್ಲಿವೆ. ಈಗ ಗುಜರಾತ್ ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಆ ಯೋಜನೆಗಳನ್ನು ಇಲ್ಲಿಯೂ ಜಾರಿಗೆ ತರಲು ನಿರ್ಧರಿಸಿದೆ. ಆ ಬಗ್ಗೆ ರಾಹುಲ್ ಗಾಂಧಿ ತಮ್ಮ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.