ರಾಕಿಂಗ್ ಸ್ಟಾರ್ ಯಶ್ ಜೊತೆ ಪ್ರಧಾನಿ ಮೋದಿ ಮಾತಾಡಿದ್ದೇನು ಗೊತ್ತಾ..?

ಬೆಂಗಳೂರು: ಏರ್ ಇಂಡಿಯಾ ಶೋ ಕಾರ್ಯಕ್ರಮದಲ್ಲಿ ಇಂದು ಪ್ರಧಾನಿ ಮೋದಿ ಭಾಗವಹಿಸಿದ್ದರು. ಉದ್ಘಾಟನೆ ಮಾಡಿ, ಏರ್ ಶೋ ವೀಕ್ಷಿಸಿ, ತ್ರಿಪುರಾಕ್ಕೆ ವಾಪಾಸ್ ತೆರಳಿದ್ದಾರೆ. ಆದರೆ ಅದಕ್ಕೂ ಮುನ್ನ ಅಂದ್ರೆ ನಿನ್ನೆ ರಾತ್ರಿ ಸ್ಯಾಂಡಲ್ ವುಡ್ ದಿಗ್ಗಜರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ಮೋದಿ ಜೊತೆಗೆ ನಟ ಯಶ್, ನಟ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್, ಆರ್ ಜೆ ಶ್ರದ್ಧಾ ಔತಣಕೂಟದಲ್ಲಿ ಭಾಗಿಯಾಗಿದ್ದರು.

ಈ ವಿಶೇಷ ಔತಣಕೂಟದ ಫೋಟೋಗಳು ಎಲ್ಲೆಡೆ ವೈರಲ್ ಆಗಿತ್ತು. ಪ್ರಧಾನಿ ಮೋದಿಯವರ ಜೊತೆಗೆ ಇವರೆಲ್ಲ ಏನೆಲ್ಲಾ‌ ಮಾತನಾಡಿರಬಹುದು ಎಂಬ ಕುತೂಹಲವೂ ಎಲ್ಲರನ್ನು ಕಾಡಿತ್ತು. ಅದಕ್ಕೆ ಉತ್ತರ ಇದೀಗ ಸಿಕ್ಕಿದೆ. ಪ್ರಧಾನಿ ಮೋದಿ ಅವರ ಭೇಟಿ ಬಳಿಕ ನಟ ಯಶ್ ಮಾತನಾಡಿದ್ದು, ಅವರನ್ನು ಭೇಟಿಯಾಗಿ ತುಂಬಾನೇ ಖುಷಿಯಾಯ್ತು. ಅವರು ನಮ್ಮ ಬೇಡಿಕೆಗಳನ್ನು ಕೇಳಿದರು ಎಂದಿದ್ದಾರೆ.

ಸರ್ಕಾರದಿಂದ ಏನನ್ನು ಕೇಳಲು ಬಯಸುತ್ತೀರಿ..? ನಾವೂ ಚಿತ್ರೋದ್ಯಮಕ್ಕೆ ಏನೆಲ್ಲಾ ಮಾಡಬಹುದು..? ಎಂದು ಕೇಳಿದರು. ನಾವು ಇದನ್ನೆಲ್ಲಾ ಅವರ ಜೊತೆಗೆ ಚರ್ಚೆ ಮಾಡಲು ಸದಾವಕಾಶ ಸಿಕ್ಕಿತು. ಪ್ರಧಾನಿ ಮೋದಿಯವರ ಅದ್ಭುತ ಜ್ಞಾನಕ್ಕೆ ಸೋತು ಹೋದೆನು. ಅವರು ನಮ್ಮ ಕನ್ನಡ ಇಂಡಸ್ಟ್ರಿ ಬಗ್ಗೆ ಒಳ್ಳೆಯ ಆಸಕ್ತಿ ಇಟ್ಟುಕೊಂಡಿದ್ದಾರೆ. ನಮ್ಮೆಲ್ಲರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *