ನಮ್ಮ ಅಡುಗೆ ಮನೆಯಲ್ಲಿರುವ ಪದಾರ್ಥಗಳೇ ನಮ್ಮ ಆರೋಗ್ಯವನ್ನ ಕಾಪಾಡುತ್ತವೆ. ಆ ಬಗ್ಗೆ ನಮ್ಮ ಹಿರಿಯರು ಈಗಾಗಲೇ ಸಾಕಷ್ಟು ಸಲ ಹೇಳಿದ್ದಾರೆ. ಅದರಲ್ಲೂ ಈ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು, ಜೀರ್ಣಕ್ರಿಯೆ ಸರಿಯಾಗಿ ಆಗುತ್ತಿಲ್ಲ ಎನ್ನುವವರು ಅಡುಗೆ ಮನೆಯಲ್ಲಿರುವ ಅಡುಗೆಗೆ ಪ್ರತಿನಿತ್ಯ ಬಳಸುವ ಪದಾರ್ಥಗಳಿಂದಾನೇ ಆರೋಗ್ಯ ಸಮಸ್ಯೆಯನ್ನ ಬಗೆಹರಿಸಿಕೊಳ್ಳಬಹುದು. ಅದರಲ್ಲೂ ಧನ್ಯ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಆ ಧನ್ಯದಿಂದ ಏನೆಲ್ಲಾ ಆರೋಗ್ಯಕರ ಲಾಭಗಳು ಇದಾವೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

1. ಜೀರ್ಣಕ್ರಿಯೆ ಸುಧಾರಿಸಲು ಈ ಧನ್ಯವನ್ನು ಮದ್ದಾಗಿ ಬಳಸಬಹುದಾಗಿದೆ. ಇದನ್ನ ಬಳಕೆ ಮಾಡುವುದು ಹೇಗೆ ಗೊತ್ತಾ..? 1 ಚಮಚ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಕುದಿಸಿ. ನಂತರ ತಣ್ಣಗಾಗಲು ಬಿಡಿ. ಆ ನೀರನ್ನ ಕುಡಿಯುತ್ತಾ ಬಂದರೆ ನಿಮಗೆ ಜೀರ್ಣಕ್ರಿಯೆ ಸುಲಲಿತವಾಗುತ್ತದೆ. ಇದರಿಂದ ಹೊಟ್ಟೆ ಉರಿಯೂತ, ಆಮ್ಲತೆ (ಅಸಿಡಿಟಿ), ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುತ್ತದೆ.

ಅಷ್ಟೇ ಅಲ್ಲ ರಕ್ತದೊತ್ತಡ ಬಿ.ಪಿ.ನಿಯಂತ್ರಣಕ್ಕೆ ಬರುತ್ತದೆ. 1 ಚಮಚ ಕೊತ್ತಂಬರಿ ಬೀಜವನ್ನು ರಾತ್ರಿ ನೀರಿನಲ್ಲಿ ನೆನೆಸಿ, ಬೆಳಗ್ಗೆ ಖಾಲಿ ಹೊಟ್ಟೆಗೆ ಆ ತಂಪಾಗಿರುವ ನೀರನ್ನು ಸೋಸಿ ಕುಡಿಯಿರಿ. ಇದರಿಂದ ರಕ್ತ ಒತ್ತಡ ನಿಯಂತ್ರಣಕ್ಕೆ ಬರಲಿದೆ. ರಕ್ತದೊತ್ತಡ ತಗ್ಗಿಸಲು, ದೇಹದ ತಾಪಮಾನವನ್ನು ಸಮತೋಲನದಲ್ಲಿರಿಸಲು ಸಹಾಯ ಮಾಡುತ್ತದೆ. ಹೀಗಾಗಿ ಪ್ರತಿದಿನ ಈ ನೀರನ್ನ ಸೇವಿಸಿ.
ಇನ್ನು ಥೈರಾಯ್ಡ್ ಸಮಸ್ಯೆ ಇರುವವರು ಹೆಚ್ಚಾಗಿದ್ದಾರೆ. ಅಂಥವರು ರಾತ್ರಿ ನೀರಿನಲ್ಲಿ ಮೇಲಿನ ಪ್ರಮಾಣದಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಗೆ ತಂಪಾದ ಕೊತ್ತಂಬರಿ ನೀರನ್ನು ಸೋಸಿ ಕುಡಿಯಿರಿ ದೇಹಕ್ಕೆ ತಂಪು, ಥೈರಾಯ್ಡ್ ನಿಂದ ಮುಕ್ತಿಯನ್ನು ಪಡೆಯಬಹುದಾಗಿದೆ.


