ಮೈಸೂರು: ನಾಡಹಬ್ಬ ದಸರಾ ಎಲ್ಲರ ಗಮನ ಸೆಳೆಯುತ್ತದೆ. ದಸರಾ ಮುಗಿಯುವ ತನಕ ಮೈಸೂರಿನಲ್ಲಿ ನಡೆಯುವ ಒಂದೊಂದು ಕಾರ್ಯಕ್ರಮದ ಮೇಲೂ ಎಲ್ಲರ ದಿವ್ಯ ದೃಷ್ಟಿ ನೆಟ್ಟಿರುತ್ತದೆ. ಕವಿಗೋಷ್ಠಿಯ ಮೇಲೂ ಎಲ್ಲರ ನಿರೀಕ್ಷೆ ಇರುತ್ತದೆ. ಆದರ ಇದೀಗ ದಸರಾ ಕವಿಗೋಷ್ಠಿಯ ಆಮಂತ್ರಣ ಪತ್ರಿಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಯಾರೆಲ್ಲಾ ಆಹ್ವಾನಿತರು, ಯಾರೆಲ್ಲಾ ಅತಿಥಿಗಳು, ಯಾರೆಲ್ಲಾ ಪಾಲ್ಗೊಳ್ಳಲಿದ್ದಾರೆ ಎಂಬೆಲ್ಲಾ ಮಾಹಿತಿ ಇರುವ ಆಹ್ವಾನ ಪತ್ರಿಕೆ ಇದಾಗಿದೆ. ಆದರೆ ಇದರಲ್ಲಿ ಸಂಸದರ ಕ್ಷೇತ್ರವನ್ನೇ ಬದಲಿಸಿದ್ದು ಅಲ್ಲದೆ, ಬದುಕಿಲ್ಲದೆ ಇರುವ ಕವಿಗಳ ಹೆಸರನ್ನು ಸೇರ್ಪಡೆ ಮಾಡಿದ್ದಾರೆ. ಅಷ್ಟೇ ಯಾಕೆ ಕವಿಯ ಹೆಸರನ್ನು ತಪ್ಪಾಗಿ ಮುದ್ರಿಸಿದ್ದಾರೆ. ಇದು ಉಳಿದ ಕವಿಗಳ ಬೇಸರಕ್ಕೆ ಕಾರಣವಾಗಿದೆ, ಸೋಷಿಯಲ್ ಮೀಡಿಯಾದಲ್ಲಿ ಚರ್ಚಿತ ವಿಷಯವಾಗಿದೆ.
ಈ ಬಗ್ಗೆ ಹಿರಿಯ ಬರಹಗಾರ ಜೋಗಿ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಬೇಸರ ಹೊರ ಹಾಕಿದ್ದಾರೆ. ನಾಡಿದ್ದು ದಸರಾ ಕವಿಗೋಷ್ಠಿಯಲ್ಲಿ ಕವಿತೆ ಓದಲಿರುವ ಕವಿಗಳ ಪಟ್ಟಿಯಲ್ಲಿರುವ ಜಿಕೆ ರವೀಂದ್ರ ಕುಮಾರ್ ಯಾರು? ಕನ್ನಡದ ಅತ್ಯುತ್ತಮ ಕವಿ ಅವರು. ಅವರು ಈಗಿಲ್ಲ. ಕಣ್ಮರೆ ಅದವರನ್ನು ಎಲ್ಲರೂ ಮರೆಯುತ್ತಾರೆ. ಆದರೆ ಸರ್ಕಾರ ಮರೆಯುವುದಿಲ್ಲ. ದತ್ತಿ ಸಂಸ್ಥೆ ಸದಸ್ಯರನ್ನೂ ಮಾಡುತ್ತದೆ. ಕವಿಗೋಷ್ಠಿಗೆ ಕರೆಯುತ್ತದೆ. ಅಯ್ಯೋ ಸುನಿಲ್ ! ಎಂದು ಪೋಸ್ಟ್ ಹಾಕಿದ್ದು, ಆ ಪೋಸ್ಟ್ ಗೆ ಹಲವರು ರಿಯಾಕ್ಟ್ ಮಾಡಿದ್ದಾರೆ.