ಬೆಂಗಳೂರು; ಆರ್ಸಿಬಿ.. ಆರ್ಸಿಬಿ.. ಆರ್ಸಿಬಿ.. ಎಲ್ಲಿಯೇ ಕೂತರು.. ಎಲ್ಲಿಯೇ ಹೋದರು.. ಮೊಬೈಲ್ ಓಪನ್ ಮಾಡಿದ್ರೆ ಸಾಕು ನಿಮಗೂ ಇದೇ ಸೌಂಡ್ ಕೇಳಿಸ್ತಾ ಇರ್ಬೇಕು ಅಲ್ವಾ. ಅಷ್ಟು ಕ್ರೇಜ್ ನಿನ್ನೆ ಮಧ್ಯರಾತ್ರಿಯಿಂದಾನೂ ರಾಜ್ಯದಲ್ಲಿ ಶುರುವಾಗಿದೆ. ಸುಮ್ನೇನಾ ಹದಿನೆಂಟು ವರ್ಷದ ತಪಸ್ಸು. ರಾಮನಿಗಾಗಿ ಶಬರಿ ಕಾದಳಲ್ಲ ಆ ರೀತಿ ಕಾದದ್ದು ನಮ್ಮ ಆರ್ಸಿಬಿ ಅಭಿಮಾನಿಗಳು. ಈಗ ಆ ಕಾಯುವಿಕೆ ಕೊನೆಗೊಂಡಿದೆ. ಇನ್ನೇನಿದ್ರು ಇನ್ಮುಂದೆ ಈ ಸಲಾನು ಕಪ್ ನಮ್ದೆ ಅನ್ನೋದಷ್ಟೇ ಗ್ಯಾರಂಟಿ.
ರಾಜ್ಯದ ಜನತೆ ಒಂದು ರೀತಿಯ ಕ್ರೇಜ್ ನಲ್ಲಿದ್ರೆ ಸಿಎಂ ಸಿದ್ದರಾಮಯ್ಯ ಅವರು ಕೂಡ ಹ್ಯಾಪಿ ಮೂಡಲ್ಲಿದ್ದಾರೆ. ಆರ್ಸಿಬಿ ತಂಡವನ್ನು ವಿಧಾನಸೌಧಕ್ಕೆ ಆಹ್ವಾನಿಸಿದ್ದು, ಸನ್ಮಾನ ಮಾಡುವ ಕಾತುರದಲ್ಲಿದ್ದಾರೆ. ಅಷ್ಟೇ ಅಲ್ಲ ಸಿದ್ದರಾಮಯ್ಯ ಅವರು ತಂಡಕ್ಕೆ ಏನು ಗಿಫ್ಟ್ ಕೊಡುತ್ತೇವೆ ಎಂಬುದನ್ನು ರಿವೀಲ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಆರ್ಸಿಬಿ ಕಪ್ ಗೆದ್ದಿದೆ. ನಾನು ಎಲ್ಲಾ ಆರ್ಸಿಬಿ ತಂಡದ ಆಟಗಾರರಿಗೆ ಅಭಿನಂದನೆಯನ್ನು ಸಲ್ಲಿಸುತ್ತಾ ಇದ್ದೇನೆ. ಅವರ ಅಭಿಮಾನಿಗಳಿಗಳಿಗು ಅಭಿನಂದನೆಯನ್ನು ಸಲ್ಲಿಸ್ತಾ ಇದ್ದೇನೆ. ಇಡೀ ದೇಶ ಇವತ್ತು ಇಷ್ಟಪಡುವಂತ, ರಾಜ್ಯ ಹೆಮ್ಮೆ ಪಡುವಂತ ಸಾಧನೆ ಮಾಡಿದ್ದಾರೆ. ಆರ್ಸಿಬಿ ಯಾವತ್ತು ಗೆದ್ದಿರಲಿಲ್ಲ. ಹದಿನೆಂಟು ವರ್ಷದ ಆವೃತ್ತಿಯನ್ನ ಗೆದ್ದಿದ್ದಾರೆ.
ಇಂದು ಸಂಜೆ 4 ಗಂಟೆಗೆ ವಿಧಾನಸೌಧದ ಮೆಟ್ಟಿಲ ಮೇಲೆ ಅವರಿಗೆ ಸನ್ಮಾನ ಮಾಡಲಾಗುತ್ತದೆ. ನಾನು ಅವರಿಗೆ ಬಹುಮಾನ ನೀಡ್ತಾ ಇದ್ದೇನೆ. ಅವರು ಗೆದ್ದಿರುವುದನ್ನೇ ನಾವೂ ಉಡುಗೊರೆಯಾಗಿ ನೀಡುತ್ತೇವೆ ಎಂದು ನಗುತ್ತಾ ಸಿಎಂ ಸಿದ್ದರಾಮಯ್ಯ ಮುಂದೆ ಸಾಗಿದ್ದಾರೆ.






