ಟರ್ಕಿ ಮತ್ತು ಸಿರಿಯಾದ ಪರಿಸ್ಥಿತಿ ನೋಡುತ್ತಿದ್ದರೆ ಎಂಥವರಿಗೂ ಕರುಳು ಕಿತ್ತು ಬರುತ್ತೆ. ಸಂಪೂರ್ಣ ಸ್ಮಶಾನದ ರೀತಿಯಾಗಿದೆ ಟರ್ಕಿಯ ನೋಟ. ಎತ್ತ ನೋಡಿದರು ಧರೆಗುರುಳಿದ ಕಟ್ಟಡಗಳು ಕಾಣಿಸುತ್ತಿವೆ. ನೋಡ ನೋಡುತ್ತಲೇ ರಸ್ತೆಗಳು ಬಾಯಿ ಬಿಡುತ್ತಿವೆ. ಜೀವ ಉಳಿಸಿಕೊಳ್ಳಲು ಓಡಿದವರೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಮನುಷ್ಯರ ಜೊತೆಗೆ ಪ್ರಾಣಿಗಳು ಅಪಾಯಕ್ಕೆ ಸಿಲುಕಿವೆ. NDRF ತಂಡ ಸತತ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಆರು ದಿನದಿಂದ ಟರ್ಕಿ ಹಾಗೂ ಸಿರಿಯಾ ದೇಶದಲ್ಲಿ ಹೆಣಗಳ ರಾಶಿಯೇ ಬೀಳುತ್ತಿದೆ. ಸುಮಾರು 28 ಸಾವಿರಕ್ಕೂ ಅಧಿಕ ಮಂದಿ ಸಾವಿನ ಕದ ತಟ್ಟಿದ್ದಾರೆ. ಇನ್ನು ದಿನೇ ದಿನೇ ಸಾವು ಹೆಚ್ಚಾಗುತ್ತಲೇ ಇದೆ. ಗಾಯಳುಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಭಾರತದ ಹತ್ತು ಮಂದಿ ಭೂಕಂಪದಲ್ಲಿ ಸಿಲುಕಿದ್ದಾರೆ. ಒಂಭತ್ತು ಜನ ಸೇಫ್ ಆಗಿದ್ದು, ಒಬ್ಬ ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ. ಆತನ ಹುಡುಕಾಟ ಕೂಡ ನಡೆಯುತ್ತಿದೆ.
ಟರ್ಕಿಯಲ್ಲಿ ರಕ್ಷಣಾ ಸಿಬ್ಬಂದಿಯೇ ತಮ್ಮದೇ ಆದ ತುತ್ತು ಚಿಕಿತ್ಸಾ ಕೇಂದ್ರ ತೆರೆದು, ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದೆ. ಆ ಚಿಜಿತ್ಸಾ ಘಟಕದ ಮೇಲೆ ನಮ್ಮ ಭಾರತದ ತ್ರಿವರ್ಣ ಧ್ವಜ ಕೂಡ ಹಾರಾಡುತ್ತಿದೆ. ಭಾರತ ಸೇರಿದಂತೆ ಹಲವು ದೇಶಗಳು ಟರ್ಕಿ ಮತ್ತು ಸಿರಿಯಾ ದೇಶಕ್ಕೆ ಸಹಾಯ ನೀಡುತ್ತಿವೆ.