ಬೆಂಗಳೂರು : ರಾಜ್ಯದಲ್ಲಿ ಮೂರು ಕ್ಷೇತ್ರಗಳ ಬೈ ಎಲೆಕ್ಷನ್ ಅಖಾಡ ರಂಗೇರಿದೆ. ಅದರಲ್ಲೂ ಚನ್ನಪಟ್ಟಣ ಅಖಾಡದತ್ತ ಎಲ್ಲರ ಚಿತ್ತ ನೆಟ್ಟಿದೆ. ಜೆಡಿಎಸ್ ಚಿಹ್ನೆ ಹಿಡಿದು ಸ್ಪರ್ಧಿಸುವಂತೆ ಹೇಳಿದರೂ ಸಿಪಿ ಯೋಗೀಶ್ವರ್ ಸಾಧ್ಯವಿಲ್ಲ ಎಂದಿದ್ದಾರೆ. ನಿಂತರೆ ಬಿಜೆಪಿಯಿಂದಾನೇ ಎಂಬ ನಿರ್ಧಾರ ತಳೆದು, ತಮ್ಮ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆಯನ್ನೇ ನೀಡಿದ್ದಾರೆ. ಹೀಗಿರುವಾಗ ದೇವೇಗೌಡ್ರು ತಮ್ಮ ಮೊಮ್ಮಗನಿಗೆ ಬುಲಾವ್ ನೀಡಿದ್ದಾರೆ.
ಆರಂಭದಲ್ಲಿ ನಿಖಿಲ್ ಕುಮಾರಸ್ವಾಮಿ ಹೆಸರು ಓಡಾಡುತ್ತಿತ್ತು. ಆದರೆ ನಿಖಿಲ್ ಕುಮಾರಸ್ವಾಮಿ ನಾನು ನಿಲ್ಲುವುದಿಲ್ಲ ಎಂದೇ ಪಟ್ಟು ಹಿಡಿದಿದ್ದಾರೆ. ಅಷ್ಟಕ್ಕೂ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಿಂದ ಸ್ಪರ್ಧೆ ಮಾಡದೆ ಇರುವುದಕ್ಕೆ ಕಾರಣವೇನು ಗೊತ್ತಾ..?
ಮೂಲಗಳ ಪ್ರಕಾರ ಮತ್ತೆ ಸೋಲು ಎಂಬ ಭಯವೇ ಅವರನ್ನು ಸ್ಪರ್ಧಿಸುವುದಕ್ಕೆ ಹಿಂದೇಟು ಹಾಕುವಂತೆ ಮಾಡುತ್ತಿದೆ. ಈಗಾಗಲೇ ನಿಖಿಲ್ ಕುಮಾರಸ್ವಾಮಿ ಎರಡು ಬಾರಿ ಸೋಲು ಕಂಡಿದ್ದಾರೆ. ರಾಜಕೀಯ ಭವಿಷ್ಯದಲ್ಲಿ ಪುಟಿದೇಳಲು ಒಂದಷ್ಟು ಬ್ರೇಕ್ ತೆಗೆದುಕೊಂಡಿದ್ದಾರೆ. ರಾಜಕೀಯವಾಗಿ ಸಕ್ರೀಯ ಓಡಾಟವಿದ್ದರು ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರಿಗೆ ಆಶೀರ್ವದಿಸಿದರು ಸಹ ಈ ಉಪಚುನಾವಣೆಯಲ್ಲಿ ಗೊಂದಲಮಯವಾಗಿದೆ. ಯಾಕಂದ್ರೆ ಸಿಪಿ ಯೋಗೀಶ್ವರ್ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಜೆಡಿಎಸ್ ನಿಂದ ಸ್ಪರ್ಧೆ ಮಾಡಿ ಎಂದಿದ್ದನ್ನು ಒಪ್ಪದೆ, ರಾಜೀನಾಮೆ ಕೊಟ್ಟು ಪಕ್ಷೇತರ ಅಭ್ಯರ್ಥಿಯಾಗಲು ಹೊರಟಿದ್ದಾರೆ.
ಹೀಗಿರುವಾಗ ಜನರ ಮನಸ್ಸಲ್ಲಿ ಬಿಜೆಪಿಯ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ವೋಟುಗಳು ಅತ್ತ ಸಿಪಿ ಯೋಗೀಶ್ವರ್ ಕಡೆಗೆ ತಿರುಗಬಹುದು. ಮತಗಳ ವಿಭಜನೆಯಿಂದ ಮತ್ತೆ ಸೋಲು ಕಾಣಬಹುದು ಎಂಬ ಭಯದಿಂದಾನೇ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.