ಕೆಲವೊಮ್ಮೆ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತೀವಿ. ತಿನ್ನುವುದರಲ್ಲಿ ಇರಬಹುದು, ಜೀವನ ಕಳೆಯುವುದರಲ್ಲೂ ಇರಬಹುದು. ಅದರಲ್ಲೂ ನಾವೂ ಕುಳಿತುಕೊಳ್ಳುವ ಭಂಗಿ, ಮಲಗುವ ಭಂಗಿಗಳು ನಮ್ಮ ದೇಹದ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಸರಿಯಾದ ರೀತಿಯಲ್ಲಿ ಕುಳಿತುಕೊಳ್ಳದೆ ಹೋದರೆ ಬೆನ್ನು ನೋವು, ಸೊಂಟ ನೋವು ಶುರುವಾಗುತ್ತೆ.
ಇನ್ನು ಸಾಕಷ್ಟು ಜನರಿಗೆ ಮಲಗುವಾಗ ದಿಂಬಿಲ್ಲದೆ ಮಲಗಿ ಅಭ್ಯಾಸವಿರುವುದಿಲ್ಲ. ಆದ್ರೆ ಕೆಲವೇ ಕೆಲವು ಮಂದಿಗೆ ದಿಂಬು ಇಲ್ಲದೆ ಮಲಗುವ ಅಭ್ಯಾಸವಿರುತ್ತದೆ. ದಿಂಬಿಲ್ಲದೆ ಮಲಗಿದರೆ ಎಷ್ಟೆಲ್ಲ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ ಗೊತ್ತಾ.
* ಕುತ್ತಿಗೆ ಮತ್ತು ಬೆನ್ನು ನೋವು ಇರುವುದಿಲ್ಲ.
* ದಿಂಬು ಹಾಕದೆ ಮಲಗುವುದರಿಂದ ಮುಖದಲ್ಲಿ ಮೊಡವೆಗಳು ಮೂಡುವುದಿಲ್ಲ.
* ನಿದ್ರೆಯ ಸಮಸ್ಯೆ ನಿವಾರಣೆಯಾಗುತ್ತದೆ
* ತಲೆಯಲ್ಲಿ ರಕ್ತ ಪರಿಚಲನೆ ಹೆಚ್ಚಿಸಿ, ತಲೆನೋವು ನಿವಾರಣೆಯಾಗುತ್ತದೆ.