Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪ್ರಧಾನಿ ಮೋದಿ ಬಳಸುತ್ತಿರುವ ಈ ಕಾರಿನ ವೈಶಿಷ್ಟ್ಯ ಮತ್ತು ಬೆಲೆ ಎಷ್ಟು ಗೊತ್ತಾ?

Facebook
Twitter
Telegram
WhatsApp

 

ಸುದ್ದಿಒನ್ ವೆಬ್ ಡೆಸ್ಕ್

74 ನೇ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಬಣ್ಣದ ರೇಂಜ್ ರೋವರ್ ಎಸ್‌ಯುವಿಯಲ್ಲಿ ಕಾರಿನಲ್ಲಿ ಆಗಮಿಸಿದರು .

ಕರ್ತವ್ಯಪಥದಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಸೇನಾ ಹುತಾತ್ಮರಿಗೆ ಗೌರವ ಸಲ್ಲಿಸಲು ಹೆಚ್ಚಿನ ಭದ್ರತೆಯ ನಡುವೆ,
ಗಣರಾಜ್ಯೋತ್ಸವ ಪರೇಡ್ ಗೆ ಆಗಮಿಸಿದರು. ರೇಂಜ್ ರೋವರ್ ವಾಹನದಲ್ಲಿ ಪ್ರಧಾನಿ ಮೋದಿ ಆ ಸಮಾರಂಭದಲ್ಲಿ ಪಾಲ್ಗೊಂಡಿದ್ದವರಿಗೆ ಶುಭಾಶಯ ಕೋರುತ್ತಿರುವ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಸುಧಾರಿತ ವೈಶಿಷ್ಟ್ಯತೆಗಳು ಮತ್ತು ಹೆಚ್ಚು ಶಸ್ತ್ರಸಜ್ಜಿತ ಭದ್ರತೆ ಹೊಂದಿರುವ ಈ ರೇಂಜ್ ರೋವರ್ ಕಾರಿನ ಬಗ್ಗೆ ತಿಳಿದುಕೊಳ್ಳೋಣ..

ಪ್ರಧಾನಿ ಮೋದಿಯವರ ವಾಹನ ರೇಂಜ್ ರೋವರ್ ಸೆಂಟಿನೆಲ್ ಎಸ್‌ಯುವಿಯು ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆಯಾದ ‘ಲ್ಯಾಂಡ್ ರೋವರ್’ ನ ಉತ್ಪನ್ನವಾಗಿದೆ. ಈ ವಿಶೇಷ ರೀತಿಯ SUV ಮಾದರಿಯ ಕಾರನ್ನು ಬಳಸುವವರಿಗೆ ವಿಶೇಷವಾಗಿ ರಕ್ಷಣೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.

ಈ ವಾಹನದ ವೈಶಿಷ್ಟ್ಯಗಳು:

★ ಇದು ಎಲ್ಲಾ ಭೂಪ್ರದೇಶದಲ್ಲಿ ಚಲಾಯಿಸುವ ವಾಹನವಾಗಿದೆ. ಅಂದರೆ ಇದು ಯಾವುದೇ ರಸ್ತೆಯಲ್ಲಿ ಮತ್ತು ಎಂತಹುದೇ ಹವಾಮಾನ ಪರಿಸ್ಥಿತಿಗಳಲ್ಲಿ ಚಲಿಸುತ್ತದೆ.

★ ಈ ವಾಹನವು ಕೇವಲ 10.4 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿ.ಮೀ ವೇಗವನ್ನು ಪಡೆಯುವುದು ವಿಶಿಷ್ಟವಾಗಿದೆ.  ಇದರ ಗರಿಷ್ಠ ವೇಗ ಗಂಟೆಗೆ 193 ಕಿಮೀ ಆಗಿದೆ.

★ ರೇಂಜ್ ರೋವರ್ ಸೆಂಟಿನೆಲ್ SUV 5.0 ಲೀಟರ್ ಸೂಪರ್ಚಾರ್ಜ್ಡ್ V8 ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಹಿಂದಿನ V6 ಮಾದರಿಗಿಂತ 40 bhp ಹೆಚ್ಚಿನ ಶಕ್ತಿಯನ್ನು ನೀಡುತ್ತದೆ.

★ ಕಾರಿನ ಮೇಲ್ಮೈ ಭಾಗವನ್ನು ಸಧೃಡವಾದ ವಸ್ತುಗಳಿಂದ ಮಾಡಲ್ಪಟ್ಟಿದೆ. ಮತ್ತು ಯಾವುದೇ ರೀತಿಯ ದಾಳಿಯಿಂದ ರಕ್ಷಣೆ ನೀಡಲು ಶಕ್ತವಾಗಿದೆ. ಇದನ್ನು ಅತ್ಯುನ್ನತ ಗುಣಮಟ್ಟದಲ್ಲಿ ನಿರ್ಮಿಸಲಾಗಿದೆ. ಇದು ಬ್ಯಾಲಿಸ್ಟಿಕ್ ಮತ್ತು ಬಾಂಬ್ ದಾಳಿಯ ಸಂದರ್ಭದಲ್ಲಿ ರಕ್ಷಣೆ ನೀಡುತ್ತದೆ.

★ ವಾಹನದ ಮೇಲ್ಮೈ ಭಾಗಗಳನ್ನು ಎಂತಹುದೇ ದಾಳಿಗಳು ನಡೆದರೂ ಏನೂ ಆಗದಂತಹ ಆಧುನಿಕ ಮತ್ತು ಅಸಾಮಾನ್ಯ ತಂತ್ರಜ್ಞಾನದಿಂದ ವಿನ್ಯಾಸಗೊಳಿಸಲಾಗಿದೆ.  ಇದು IED ಸ್ಫೋಟಗಳ ಸಂದರ್ಭಗಳಲ್ಲಿಯೂ ರಕ್ಷಿಸುತ್ತದೆ.

★ ಹೆಚ್ಚಿನ ರಕ್ಷಣೆಗಾಗಿ ಈ ವಾಹನಕ್ಕೆ ಆರ್ಮರ್ಡ್ ಗ್ಲಾಸ್ (armored glass)
ಶಸ್ತ್ರಸಜ್ಜಿತ ಗಾಜಿನಂತಹ ಸುಧಾರಿತ ಸುರಕ್ಷತಾ ಭಾಗಗಳನ್ನು ಬಳಸಲಾಗಿದೆ.

★ ಈ ವಾಹನದ ಹೆಚ್ಚುವರಿ ವೈಶಿಷ್ಟ್ಯವೆಂದರೆ ಸುರಕ್ಷತಾ ಮಾನದಂಡಗಳಿಗೆ ಧಕ್ಕೆಯಾಗದಂತೆ ವಾಹನದ ಹೊರಗಿನ ಜನರೊಂದಿಗೆ ಸಂವಹನ ನಡೆಸಲು ವ್ಯವಸ್ಥೆಯನ್ನು ಸಹ ಹೊಂದಿದೆ. ಸೈರನ್ ಮತ್ತು ತುರ್ತು ಬೆಳಕಿನ ಪ್ಯಾಕ್‌ಗಳು ಹೆಚ್ಚುವರಿ ವೈಶಿಷ್ಟ್ಯಗಳಾಗಿವೆ.

★ ವಾಹನದ ಒಳಭಾಗವನ್ನು ಸಹ ಇತ್ತೀಚಿನ ತಂತ್ರಜ್ಞಾನ ಮತ್ತು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ವಾಹನವು ಇತ್ತೀಚಿನ ‘ಟಚ್ ಪ್ರೊ ಡ್ಯುಯೊ ಇನ್ಫೋಟೈನ್‌ಮೆಂಟ್ ಸಿಸ್ಟಂ’ ಅನ್ನು ಅಳವಡಿಸಲಾಗಿದೆ.

★ ವಾಹನದ ಒಳಗೆ ಎರಡು 10-ಇಂಚಿನ ಹೈ ರೆಸಲ್ಯೂಶನ್ ಟಚ್ ಸ್ಕ್ರೀನ್‌ಗಳನ್ನು ಹೊಂದಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ ಗ್ರಾಹಕ ಸ್ನೇಹಿಯಾಗಿದೆ. ಇದು ವಾಹನ ಸಂಚರಣೆ, ತಾಪಮಾನ ನಿಯಂತ್ರಣದಂತಹ ವಿಷಯಗಳನ್ನು ನಿಯಂತ್ರಿಸುತ್ತದೆ ಮತ್ತು ಮನರಂಜನಾ ವೈಶಿಷ್ಟ್ಯಗಳನ್ನು ಸಹ ನಿರ್ವಹಿಸುತ್ತದೆ.

★ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿರುವ ಈ ವಾಹನವು ಒಂದು ಟನ್ ತೂಕವಿದೆ.

★ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಈ ರೇಂಜ್ ರೋವರ್ SUV ಬೆಲೆ ರೂ. 10 ಕೋಟಿ (ಭಾರತದಲ್ಲಿ ಎಕ್ಸ್ ಶೋ ರೂಂ ಬೆಲೆ). ಪ್ರಧಾನಿ ಮೋದಿಯವರ ಬೆಂಗಾವಲು ಪಡೆಯಲ್ಲಿ ಇಂತಹ 25ಕ್ಕೂ ಹೆಚ್ಚು ವಾಹನಗಳಿರುತ್ತವೆ. ಬೆಂಗಾವಲು ಪಡೆಯಲ್ಲಿ ಸುಮಾರು 30 ರಿಂದ 35 ವಾಹನಗಳನ್ನು ಒಳಗೊಂಡಿರುತ್ತದೆ.

★ ಪ್ರಧಾನಿಯಂತಹ ವಿವಿಐಪಿಗಳಿಗೂ ಹೆಚ್ಚು ಸೂಕ್ತವೆನಿಸುವ ವಾಹನ ಎಂಬುದು ತಜ್ಞರ ಅಭಿಪ್ರಾಯ. ಇದು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಸುರಕ್ಷಿತ ವಾಹನ ಮಾತ್ರವಲ್ಲ, ಭಾರತದ ಎಲ್ಲಾ ಪ್ರದೇಶದಲ್ಲಿ ಚಾಲನೆ ಮಾಡಲು ಸೂಕ್ತವಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಆ ಕುಗ್ರಾಮ ಒಂದರಲ್ಲೇ 100% ಮತದಾನ : ಎಲ್ಲಿ, ಎಷ್ಟೆಷ್ಟು ಮತದಾನವಾಗಿದೆ..?

ಬೆಂಗಳೂರು: ಇಂದು ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆದಿದೆ. ಬೆಳಗ್ಗೆ 7 ಗಂಟೆಗೆ ಶುರುವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ. ಬೇಸರದ ಸಂಗತಿ ಎಂದರೆ ಈ ಬಾರಿಯೂ ಸಂಪೂರ್ಣ ಮತದಾನವಾಗಿಲ್ಲ. ಪ್ರತಿ

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಶೇ.72.74 ಮತದಾನ : ಕ್ಷೇತ್ರವಾರು ಮಾಹಿತಿ…!

  ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 :   ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಇಂದು ಜರುಗಿದ ಮತದಾನದಲ್ಲಿ ಶೇ.72.74 ದಾಖಲಾಗಿದೆ‌. ವಿಧಾನ ಸಭಾ ಕ್ಷೇತ್ರವಾರು ಮತಾದನ ವಿವರ ಚಳ್ಳಕೆರೆ – 72.19%, ಚಿತ್ರದುರ್ಗ-70.42%, ಹಿರಿಯೂರು-71.49% ,

ಕುಡಿಯುವ ನೀರಿನ ಸಮಸ್ಯೆ : ಮತದಾನ ಬಹಿಷ್ಕರಿಸಿದ್ದವರಿಂದ ಸಂಜೆ ವೇಳೆಗೆ ಮತದಾನ..!

ಚಿತ್ರದುರ್ಗ : ಇಂದು ಕರ್ನಾಟಕದಲ್ಲಿ ಮೊದಲ ಲೋಕಸಭಾ ಚುನಾವಣೆಗೆ ನಡೆದಿದೆ. ಎಷ್ಟೇ ಜಾಗೃತಿ ಮೂಡಿಸಿದರು ಸಾಕಷ್ಟು ಮಂದಿ ಮತದಾನ ಮಾಡಿಲ್ಲ. ಪರಿಪೂರ್ಣ ಮತದಾನ ನಡೆದಿಲ್ಲ. ಚುನಾವಣೆ ಬಂದಾಗೆಲ್ಲಾ ಜಾಗೃತಿ ಕಾರ್ಯ ನಡೆದರು ಮತದಾನ ಪೂರ್ಣವಾಗುವುದರಲ್ಲಿ

error: Content is protected !!