ಬೆಂಗಳೂರು: ಕೊರೊನಾ ಮೂರನೇ ಅಲೆ ಆತಂಕ ಸಾಕಷ್ಟು ಜನರಲ್ಲಿತ್ತು. ಆದ್ರೆ ಮೂರನೆ ಅಲೆ ಶುರುವಾಗೋದು ಅನುಮಾನ ಎನ್ನಲಾಗ್ತಿದೆ. ಸೆಪ್ಟೆಂಬರ್ – ಅಕ್ಟೋಬರ್ ವೇಳೆಗೆ ಕೊರೊನಾ ಅಲೆ ಶುರುವಾಗಬೇಕಾಗಿತ್ತು. ಆದ್ರೆ ಯಾವುದೇ ಸಮಸ್ಯೆ ಆಗಲ್ಲ ಎಂದೇ ಹೇಳಲಾಗ್ತಿದೆ.
ಇನ್ನು ಈ ವರ್ಷದ ಡಿಸೆಂಬರ್ ವೇಳೆಗೆ ಕೊರೊನಾ ಎರಡನೇ ಅಲೆ ಸಂಪೂರ್ಣವಾಗಿ ನಾಶವಾಗಲಿದೆ ಎನ್ನಲಾಗ್ತಿದೆ. ಈ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿತ್ತು. ಆದ್ರೀಗ ತಜ್ಞರು ಈ ಬಗ್ಗೆ ನಿರಾಳ ಉತ್ತರ ನೀಡಿದ್ದಾರೆ.
ಕೊರೊನಾ ವಿರುದ್ಧದ ಲಸಿಕೆ ಭಾರತದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಹೀಗಾಗಿ ಮೂರನೆ ಅಲೆಯ ಆತಂಕವಿಲ್ಲ. ಲಸಿಕೆ ಪಡೆದವರಿಲ್ಲಿ ಕೊರೊನಾತಂಕ ಇಲ್ಲ. ಹೀಗಾಗಿ ಎಲ್ಲರು ಲಸಿಕೆ ಪಡೆದಿರೋ ಕಾರಣ ಕೊರೊನಾ ಮೂರನೇ ಅಲೆ ಆತಂಕವಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಆದ್ರೆ ಇಷ್ಟಕ್ಕೆ ಎಚ್ಚರ ತಪ್ಪುವ ಹಾಗಿಲ್ಲ. ಎರಡನೇ ಅಲೆ ದಿಢೀರನೆ ಬಂದಂಗೆ ಮೂರನೇ ಅಲೆಯೂ ಜನವರಿಯಲ್ಲಿ ದಿಢೀರನೇ ಕಾಣಿಸಿಕೊಳ್ಳಬಹುದು. ಆದ್ರೆ ಅಷ್ಟೊಂದು ಅಪಾಯಕಾರಿಯಾಗಿರುವುದಿಲ್ಲ. ಎಲ್ಲರು ವ್ಯಾಕ್ಸಿನ್ ತೆಗೆದುಕೊಂಡ ಪರಿಣಾಮ ತೊಂದರೆಯಾಗಲ್ಲ ಎಂದಿದ್ದಾರೆ.