ಹಾಸನ: ವರ್ಷಕ್ಕೊಮ್ಮೆ ದರ್ಶನ ಕೊಡುವ ಹಾಸನಾಂಬೆ ದೇಗುಲ ಹದಿನೈದು ದಿನಗಳ ಕಾಲ ತೆಗೆದಿರುತ್ತದೆ. ಈ ಬಾರಿ ಅಕ್ಟೋಬರ್ 13ರಂದು ತೆಗೆದ ಬಾಗಿಲು ಅಕ್ಟೋಬರ್ 27ಕ್ಕೆ ಶಾಸ್ತ್ರೋಕ್ತವಾಗಿ ಮುಚ್ಚಲಾಗಿತ್ತು. ಕಳೆದ ಎರಡು ವರ್ಷದಿಂದ ಕೊರೊನಾ ಸಂಕಷ್ಟದಿಂದ ಜನ ದೇವಸ್ಥಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ದೇವಾಲಯದ ಆದಾಯವೂ ಕುಸಿದಿತ್ತು. ಆದರೆ ಇಂದು ಹುಂಡಿ ಎಣಿಕೆಯಾಗಿದ್ದು, ದಾಖಲೆಮಟ್ಟದಲ್ಲಿ ಕಾಣಿಕೆ ಸಂಗ್ರಹವಾಗಿದೆ.
ನಿನ್ನೆ ದೇವಸ್ಥಾನದಲ್ಲಿ ತಾಯಿ ಹಾಸನಾಂಬೆಯ ಹುಂಡಿ ಎಣಿಕೆ ಕಾರ್ಯ ಆರಂಭವಾಗಿತ್ತು. ಎಣಿಕೆ ಮುಗಿದಿದ್ದು, ಒಟ್ಟು 3 ಕೋಟಿ 69 ಲಕ್ಷದ 51 ಸಾವಿರದ 251 ಸಾವಿರ ಹಣ ಸಂಗ್ರಹವಾಗಿದೆ. ಹದಿನೈದು ದಿನಗಳ ಕಾಲ ತಾಯಿಯ ದರ್ಶನ ಪಡೆದ ಭಕ್ತರು, ಕಾಣಿಕೆಯನ್ನು ಅರ್ಪಿಸಿದ್ದಾರೆ.
ಪ್ರಸಾದ, ವಿಶೇಷ ದರ್ಶನ ಸೇರಿದಂತೆ ಇಷ್ಟು ಕೋಟಿ ಹಣ ಸಂಗ್ರಹವಾಗಿದೆ. ಕಾಣೀಕೆ ರೂಪದಲ್ಲಿ 1 ಕೋಟಿ 88 ಲಕ್ಷದ 40 ಸಾವಿರದ 935 ರೂಪಾಯಿ ಬಂದಿದ್ದು, ವಿಶೇಷ ದರ್ಶನದ ಪಾಸ್ನಿಂದಾಗಿ 1 ಕೋಟಿ 48 ಲಕ್ಷ 27 ಸಾವಿರದ 600 ರೂಪಾಯಿ ಸಂಗ್ರಹವಾಗಿದೆ. ಲಡ್ಡು ಪ್ರಸಾದ ಮಾರಾಟದಿಂದ 32 ಲಕ್ಷದ 82 ಸಾವಿರದ, 716ರೂಪಾಯಿ ಹಣ ಸಂಗ್ರಹವಾಗಿದೆ. ಹೀಗೆ ಭಕ್ತಾಧಿಗಳು ತಾಯಿಗೆ ಕಾಣಿಕೆ ಅರ್ಪಿಸಿದ್ದಾರೆ.