ಎಲ್ಲರಿಗೂ ಶಿಕ್ಷಣ ಅನ್ನೋದು ಬಹಳ ಮುಖ್ಯವಾಗುತ್ತೆ. ಶಿಕ್ಷಣದಲ್ಲಿ ವಂಚಿತರಾದರೆ ಕೆಲಸಗಳನ್ನು ಹುಡುಕುವುದು ಬಹಳ ಕಷ್ಟಕರವಾಗುತ್ತದೆ. ಅದರಲ್ಲೂ ಎಸ್ಎಸ್ಎಲ್ಸಿ ಓದಿದವರು ಕೆಲಸ ಹುಡುಕುವುದು ಬಹಳ ಕಷ್ಟ. ಸದ್ಯ ಎಸ್ಎಸ್ಎಲ್ಸಿ ಮಾಡಿದವರು ಯಾವೆಲ್ಲಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬಹುದು ಎಂಬ ವಿವರ ಇಲ್ಲಿದೆ.
10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಮುಖ ಘಟ್ಟವಾಗಿರುತ್ತದೆ. ಎಸ್ಎಸ್ಎಲ್ಸಿ ಆದ ಬಳಿಕ ಹಲವು ಆಯ್ಕೆಗಳು ತೆರೆದುಕೊಳ್ಳುತ್ತವೆ, ಬೇಕಾದ ಆಯ್ಕೆಯನ್ನು ಮಾಡಿಕೊಳ್ಳಬಹುದು. 10ನೇ ತರಗತಿ ಮುಗಿಸಿದವರು ರಕ್ಷಣಾ, ಪೊಲೀಸ್, ಇಂಡಿಯಾ ಪೋಸ್ಟ್ ಇತ್ಯಾದಿಗಳಲ್ಲಿ ಕೆಲಸಗಳಿಗೆ ಅಪ್ಲೈ ಮಾಡಬಹುದು.
ಹತ್ತನೇ ತರಗತಿ ಪಾಸ್ ಆದವರಿಗೆ ರೈಲ್ವೇ ಡಿಪಾರ್ಟ್ಮೆಂಟ್ ನಲ್ಲಿ ಗ್ರೂಪ್ ಸಿ ಮತ್ತ ಡಿ ಹುದ್ದೆಗಳಿಗೆ ಆಹ್ವಾನ ಮಾಡಲಾಗುತ್ತೆ. ಹತ್ತನೇ ತರಗತಿಯನ್ನು ಸ್ಟಾಪ್ ಮಾಡಿದವರು ಈ ಕೆಲಸಗಳಿಗೆ ಅರ್ಜಿ ಹಾಕಬಹುದು. ರಕ್ಷಣಾ ಮತ್ತು ಅರಸೇನಾ ಕ್ಷೇತ್ರಗಳಲ್ಲೂ ಉದ್ಯೋಗಗಳನ್ನು ಪಡೆಯಬಹುದು. ಹೀಗೆ ಹಲವು ಇದ್ಯೋಗಗಳಿಗೆ ಹತ್ತನೇ ತರಗತಿ ಪಾಸಾದವರಿಗೂ ಅವಕಾಶಗಳು ಇರುತ್ತವೆ. ಅದರ ಗಮನ ಹರಿಸಿ, ಹುದ್ದೆಗಳಿಗೆ ಅರ್ಜಿ ಹಾಕಬೇಕಾಗುತ್ತದೆ.