ಬೆಂಗಳೂರು: ರಾಜ್ಯದಲ್ಲಿ ಇಂದು ಮಳೆಯಾಗಿದೆ. ಎಲ್ಲೆಡೆ ಬೆಳ್ಳಂ ಬೆಳಗ್ಗೆಯೇ ಮಳೆ ಸುರಿದಿದ್ದು, ಕೆಲಸಗಳಿಗೆ ಹೊರಟವರು ಸ್ವಲ್ಪ ಕಸಿವಿಸಿಯಾಗಿದ್ದಾರೆ. ಆದರೆ ಮಳೆ ಬಂದಿದ್ದು ಕಂಡು ರೈತನ ಮನಸ್ಸು ಕೊಂಚ ಹಗುರಾಗಿದೆ. ಯಾಕಂದ್ರೆ ಮುಂಗಾರು ಮಳರ ಆರಂಭದಲ್ಲಿಯೇ ಕೈಕೊಟ್ಟಿತ್ತು. ಹೀಗಾಗಿ ರೈತರು ಆತಂಕಗೊಂಡಿದ್ದರು.
ಇಂದಿನಿಂದ ಮತ್ತೆ ಮುಂಗಾರು ಮಳೆ ಚುರುಕಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಚಾಮರಾಜನಗರ, ಮೈಸೂರು, ಕೊಡಗು, ತುಮಕೂರು, ಚಿತ್ರದುರ್ಗ, ವಿಜಯನಗರ, ಬಳ್ಳಾರಿ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನುಳಿದಂತೆ ಹಲವು ಜಿಲ್ಲೆಗಳಲ್ಲಿ ಉತ್ತಮ ಮತ್ತು ಸಾಧಾರಣ ಮಳೆಯಾಗಲಿದೆ.
ಇನ್ನು ಬಿಪರ್ ಜಾಯ್ ಚಂಡಮಾರುತದ ಪರಿಣಾಮದಿಂದಾಗಿ ರಾಜ್ಯದಲ್ಲಿ ಮುಂಗಾರು ಮಳೆಗೆ ಅಡ್ಡಿಯಾಗಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ ಮೊದಲ ವಾರದಿಂದಾನೇ ಮುಂಗಾರು ಮಳೆ ಜೋರಾಗಬೇಕಿತ್ತು. ಆದರೆ ಮೂರನೃ ವಾರವಾದರೂ ಮಳೆಯ ಸುಳಿವೇ ಇರಲಿಲ್ಲ. ಇಂದಿನಿಂದ ಮುಂಗಾರು ಆರಂಭದ ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ.