ಗಾಯಕಿ ಮಂಗ್ಲಿ ಒಂದು ಹಾಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ ?

 

ಗಾಯಕಿ ಮಂಗ್ಲಿಯವರು ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿಯೂ ಕೂಡ ಮಿಂಚುತ್ತಿದ್ದಾರೆ.

ಸುದ್ದಿ ವಾಹಿನಿಯಲ್ಲಿ ಆ್ಯಂಕರ್ ಆಗಿ ವೃತ್ತಿ ಜೀವನ ಆರಂಭಿಸಿದ ಅವರು ಇದೀಗ ಸ್ಟಾರ್ ಸಿಂಗರ್ ತೆಲುಗು, ಕನ್ನಡ ಸೇರಿದಂತೆ ಇತರೆ ಪ್ರಮುಖ ಭಾಷೆಯ ಹಾಡುಗಳನ್ನು ಹಾಡುವ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದಾರೆ.

ಆರಂಭದಲ್ಲಿ ತೆಲಂಗಾಣ ಆಡುಭಾಷೆಯಲ್ಲಿ ಹಾಡುಗಳನ್ನು ಹಾಡುತ್ತಿದ್ದ ಅವರು ಬತುಕಮ್ಮ ಹಾಡುಗಳಿಂದ ಪ್ರಸಿದ್ಧರಾದರು. ಅದಾದ ನಂತರ ಸಿನಿಮಾಗಳಲ್ಲಿ ಅವಕಾಶಗಳು ಬಂದವು. ಅದರಲ್ಲಿ ಅವರು ಹಾಡಿದ ಹಾಡುಗಳೆಲ್ಲಾ ಸೂಪರ್ ಹಿಟ್ ಆಗುತ್ತಿದ್ದಂತೆ ರಾತ್ರೋರಾತ್ರಿ ಮಂಗ್ಲಿ ಜೀವನವೇ ಬದಲಾಯಿತು.

ಪ್ರಸ್ತುತ, ಅವರು ಟಾಲಿವುಡ್‌ನಲ್ಲಿ ಸ್ಟಾರ್ ಗಾಯಕಿಯಾಗಿ ಪ್ರಖ್ಯಾತಿ ಪಡೆದಿದ್ದಾರೆ.ಅವರು ಹಾಡಿದ ಹಾಡುಗಳು ಯೂಟ್ಯೂಬ್‌ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸುತ್ತಿವೆ.

ಅವರು ಹಾಡಿದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗುತ್ತಿದ್ದಂತೆ, ಮಂಗ್ಲಿ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ.  ಒಂದು ಕಾಲದಲ್ಲಿ ಒಂದು ಹಾಡಿಗೆ 20 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ಮಂಗ್ಲಿ ಈಗ 2-3 ಲಕ್ಷ ರೂಪಾಯಿಗಳವರೆಗೂ ಸಂಭಾವನೆ ಪಡೆಯುತ್ತಿದ್ದಾರೆ. ಚಿತ್ರದ ಯಶಸ್ಸಿನಲ್ಲಿ ಮಂಗ್ಲಿ ಹಾಡುಗಳು ಕೂಡ ನಿರ್ಣಾಯಕವಾಗಿವೆ. ಆದ್ದರಿಂದ ನಿರ್ಮಾಪಕರು ಸಹಾ ಅಷ್ಟು ಮೊತ್ತವನ್ನು ನೀಡಲು ಹಿಂಜರಿಯುತ್ತಿಲ್ಲ.

ಮಾಂಗ್ಲಿ ತನ್ನದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಸಹ ಹೊಂದಿದ್ದಾರೆ. ಅದರಲ್ಲಿ ಅವರು ತಮ್ಮದೇ ಆದ ಸಂಯೋಜನೆಯ ಹಾಡುಗಳನ್ನು ಬಿಡುಗಡೆ ಮಾಡುತ್ತಾರೆ. ಅದರ ಮೂಲಕ ಮಂಗ್ಲಿಗೆ ಉತ್ತಮ ಆದಾಯವೂ ಸಿಗುತ್ತಿದೆ. ಮತ್ತೊಂದೆಡೆ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಮಂಗ್ಲಿ ನಾಲ್ಕೈದು ರೀತಿಯಲ್ಲಿ ಹಣ ಗಳಿಕೆ ಮಾಡುತ್ತಿದ್ದಾರೆ ಎಂಬುದು ಚಿತ್ರರಂಗದ ಮಾತು. ಸತ್ಯವತಿ ರಾಥೋಡ್ (ನಿಜವಾದ ಹೆಸರು ಮಂಗ್ಲಿ) ಚಿತ್ತೂರು ಜಿಲ್ಲೆಯ ದೂರದ ಪ್ರದೇಶದವರು.

Share This Article
Leave a Comment

Leave a Reply

Your email address will not be published. Required fields are marked *