ಸ್ರೇಲ್-ಅಮೆರಿಕಾ ದಾಳಿಯಿಂದಾಗಿ ಇರಾನ್ನ ಆರ್ಥಿಕತೆ ಕುಸಿದಿದ್ದು, ಹಣದುಬ್ಬರ ತೀವ್ರಗೊಂಡಿದೆ. ಇದರಿಂದ ಹಾಲು, ಅಕ್ಕಿಯಂತಹ ಅಗತ್ಯ ವಸ್ತುಗಳ ಬೆಲೆ ಲಕ್ಷಗಳನ್ನು ತಲುಪಿದ್ದು, ಇರಾನಿನ ಕರೆನ್ಸಿ ರಿಯಾಲ್ ಮೌಲ್ಯ ಐತಿಹಾಸಿಕ ಕುಸಿತ ಕಂಡಿದೆ. ಇದು ಜನರ ದೈನಂದಿನ ಜೀವನವನ್ನು ಸಂಕಷ್ಟಕ್ಕೆ ದೂಡಿದೆ.
ಅಗತ್ಯವಸ್ತುಗಳ ದರದಲ್ಲಿ ಭಾರಿ ಏರಿಕೆ ಆಗುತ್ತಿದ್ದು, ಅಲ್ಲಿನ ಜನ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಯುದ್ಧಪೀಡಿತ ದೇಶದಲ್ಲಿ ಆಹಾರ ಪದಾರ್ಥಗಳು ಹಾಗೂ ಜನ ದಿನನಿತ್ಯ ಬಳಸುವ ವಸ್ತುಗಳ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ.ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಜೀವನದ ಮೇಲೆ ತೀವ್ರ ಪರಿಣಾಮ ಬೀರಿದ್ದು, ಇರಾನ್ನಲ್ಲಿನ ಕೆಲವು ಪ್ರಮುಖ ಸರಕುಗಳ ಬೆಲೆಗಳ ವಿವರ ಇಲ್ಲಿದೆ. ಹಾಲು: ಇರಾನಿನ ಕರೆನ್ಸಿಯಲ್ಲಿ ಒಂದು ಲೀಟರ್ ಹಾಲಿನ ಬೆಲೆ 8.2 ಲಕ್ಷ ಇರಾನಿನ ರಿಯಾಲ್ ತಲುಪಿದೆ. ಹಾಲಿನ ಬೆಲೆ ಹೀಗೆ ಬಿಸಿಯಾಗಿ ಕುದಿಯಲಾರಂಭಿಸಿದ್ದರೆ ಇತ್ತ ಬೆಣ್ಣೆ ಮತ್ತು ಚೀಸ್ನಂತಹ ಹಾಲಿಗೆ ಸಂಬಂಧಿಸಿದ ಉತ್ಪನ್ನಗಳ ಬೆಲೆಗಳು ಸಹ ಗಗನಕ್ಕೇರಿವೆ.
ಯುದ್ಧ ಆರಂಭವಾಗುವುದಕ್ಕೂ ಮೊದಲಿನಿಂದಲೂ ಇರಾನ್ ಹಣದುಬ್ಬರದ ಸಮಸ್ಯೆ ಎದುರಿಸುತ್ತಿತ್ತು. ಕಳೆದ 10 ತಿಂಗಳುಗಳಲ್ಲಿ ಇಲ್ಲಿ ಸರಕುಗಳ ಬೆಲೆಯಲ್ಲಿ ನಿರಂತರ ಏರಿಕೆಯಾಗಿದೆ.
ಬ್ರೆಡ್: ಇರಾನ್ನಲ್ಲಿ 500 ಗ್ರಾಂ ತಾಜಾ ಬಿಳಿ ಬ್ರೆಡ್ನ ಬೆಲೆ 6.6 ಲಕ್ಷ ಇರಾನಿಯನ್ ರಿಯಾಲ್.
ಅಕ್ಕಿ: 1 ಕೆಜಿ ಬಿಳಿ ಅಕ್ಕಿಯ ಪ್ರಸ್ತುತ ಬೆಲೆ 32 ಲಕ್ಷ ರಿಯಾಲ್.
ಮೊಟ್ಟೆಗಳು: 12 ದೊಡ್ಡ ಗಾತ್ರದ ಮೊಟ್ಟೆಗಳ ಬೆಲೆ 14.54 ಲಕ್ಷ ರಿಯಾಲ್.
ಚೀಸ್: 1 ಕೆಜಿ ಸ್ಥಳೀಯ ಚೀಸ್ ಬೆಲೆ 52 ಲಕ್ಷ ಇರಾನಿನ ರಿಯಾಲ್.






