ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಎರಡು ದಿನಗಳ ಕಾಲ ಜಿ20 ಶೃಂಗಸಭೆ ನಡೆದಿದೆ. ಹಲವು ದೇಶದ ನಾಯಕರು ಈ ಶೃಂಗಸಭೆಯಲ್ಲಿ ಭಾಗಿಯಾಗಿದ್ದು, ಹಲವು ವಿಚಾರಗಳ ಚರ್ಚೆ ನಡೆಸಿದ್ದಾರೆ. ಸದ್ಯ ಎರಡು ದಿನಗಳ ಶೃಂಗಸಭೆ ಮುಗಿದಿದ್ದು, ಅದಕ್ಕೆ ತಗುಲಿದ ವೆಚ್ಚದ ಬಗ್ಗೆ ಇದೀಗ ಚರ್ಚೆ ನಡೆಯುತ್ತಿದೆ.
ಅದರಲ್ಲೂ ಬೇರೆ ಬೇರೆ ದೇಶದ ಪ್ರಧಾನಿಗಳು, ಅಧ್ಯಕ್ಷರು ಭಾರತಕ್ಕೆ ಬಂದ ಹಿನ್ನೆಲೆ ಯಾವುದರಲ್ಲೂ ಕೊರತೆ ಮಾಡುವಂಗಿಲ್ಲ. ಗೌರವಯುತವಾಗಿ, ಸೌಕರ್ಯಯುತವಾಗಿ ಉಪಚಾರ ಮಾಡುವುದು ಭಾರತೀಯ ಧರ್ಮ. ಅದರಂತೆ ಪ್ರಧಾನಿ ಮೋದಿ ಅವರು ಆತಿಥ್ಯ ನೀಡಿ ಕಳುಹಿಸಿದ್ದಾರೆ. ಸದ್ಯಕ್ಕೆ ಶೃಂಗಸಭೆಯ ಒಟ್ಟು ಬಜೆಟ್ ಎಷ್ಟಾಯ್ತು ಎಂಬ ಮಾಹಿತಿಯನ್ನು ಸರ್ಕಾರ ನೀಡಿದೆ. 4,110,75 ಕೋಟಿ ಹಣವನ್ನು ಜಿ20 ಶೃಂಗಸಭೆಗೆ ಖರ್ಚು ಮಾಡಲಾಗಿದೆ.
ಅದರಲ್ಲಿ ತೋಟಗಾರಿಕೆ ಸುಧಾರಣೆ, ಪ್ರತಿಫಲಕಗಳು ಮತ್ತು ಚಿಹ್ನೆಗಳು, ಬೀದಿ ದೀಪಗಳ ನಿರ್ವಹಣೆ, ಸಾರ್ವಜನಿಕ ಸ್ಥಳದಲ್ಲಿ ಚಿತ್ರಕಲೆ, ಫುಟ್ ಪಾತ್ ನಿರ್ವಹಣೆ, ಬ್ರಿಡ್ಜ್ ಮತ್ತು ಫ್ಲೈ ಓವರ್ ತೊಳೆಯುವುದು, ರಸ್ತೆ ನಿರ್ವಹಣೆ ಹೀಗೆ ಅನೇಕ ಕೆಲಸಗಳಿಗೆ ಸರ್ಕಾರ ಹಣವನ್ನು ಬಳಕೆ ಮಾಡಿಕೊಳ್ಳಲಾಗಿದೆ. ಎರಡು ದಿನಗಳ ಜಿ20 ಶೃಂಗಸಭೆ ಮುಕ್ತಾಯಗೊಂಡಿದ್ದು, ಸಭೆಯಲ್ಲಿ ಮೋದಿ ಜಾಗತಿಕ ಇಂಧನ ಒಕ್ಕೂಟವನ್ನು ಘೋಷಿಸಿದ್ದಾರೆ.