ವರದಿ ಮತ್ತು ಫೋಟೋ : ಸುರೇಶ್ ಬೆಳೆಗೆರೆ, ಮೊ. 97398 75729
ಸುದ್ದಿಒನ್, ಚಳ್ಳಕೆರೆ : ತಾಲೂಕಿನ ತಳಕು ಹೋಬಳಿಯ ಗೌರಸಮುದ್ರ ಶ್ರೀ ಮಾರಮ್ಮ ದೇವಿ ಜಾತ್ರೆ ಸೆ.18ರಿಂದ ಪ್ರಾರಂಭವಾಗಲಿದ್ದು, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ತಹಸೀಲ್ದಾರ್ ನೇತೃತ್ವದಲ್ಲಿ ದೇವಸ್ಥಾನದ ಹುಂಡಿ ಹಣ ಏಣಿಕೆ ಕಾರ್ಯ ನಡೆಯಿತು.
8,91,680 ನೋಟು, 61,215 ಚಿಲ್ಲರೆ ಸೇರಿದಂತೆ ಒಟ್ಟು 9,52,895 ರೂಪಾಯಿ ಸಂಗ್ರಹವಾಗಿದೆ. ಮುಜರಾಯಿ ಮತ್ತು ತಾಲೂಕು ದಂಡಾಧಿಕಾರಿ ತಹಶೀಲ್ದಾರ್ ರೇಹಾನ್ ಪಾಷ, ಗ್ರಾಮ ಪಂಚಾಯಿತಿ ಅಧ್ಯಕ್ಷ ಓಬಣ್ಣ, ಸದಸ್ಯರಾದ ಶಶಿಕುಮಾರ್, ಮಲ್ಲಯ್ಯ, ತಿಮ್ಮಾರೆಡ್ಡಿ, ಸಂಜಯ್‌ಗೌಡ, ಗುರುಸ್ವಾಮಿ, ಜಯಮ್ಮ, ತುಳಸಿ, ಸುಭಾಷಿಣಿ, ಆರ್ಚಕ ಪಿ.ಆರ್.ನಿಂಗಣ್ಣ, ರುದ್ರಣ್ಣ, ಪಿಡಿಒ ಹನುಮಂತರಾಜು, ಕಂದಾಯಾಧಿಕಾರಿ ತಿಪ್ಪೇಸ್ವಾಮಿ, ಗ್ರಾಮ ಲೆಕಾಧಿಕಾರಿ ನರೇಂದ್ರ ಬಾಬು ಉಪಸ್ಥಿತರಿದ್ದರು.