BPL ಕಾರ್ಡ್ ಪಡೆಯಬೇಕು ಅಂದ್ರೆ ವಾರ್ಷಿಕ ಆದಾಯ ಎಷ್ಟಿರಬೇಕು ಗೊತ್ತಾ..? ಹೊಸ ಸರ್ವೇ ನಡೆಸುತ್ತಿರುವ ಸರ್ಕಾರ ವಿಧಿಸಿದ ಮಾನದಂಡಗಳೇನು..?

1 Min Read

 

ಬಡತನ ರೇಖೆಗಿಂತ ಕೆಳಗೆ ಇರುವವರಿಗೆ ಬಿಪಿಎಲ್ ಕಾರ್ಡ್ ನೀಡಲಾಗುತ್ತದೆ. ಆ ಬಿಪಿಎಲ್ ಕಾರ್ಡ್ ಇದ್ದರೆ ತಿಂಗಳ ರೇಷನ್, ಆಸ್ಪತ್ರೆಯಲ್ಲಿ ಒಂದಿಷ್ಟು ಉಚಿತ ಸೌಲಭ್ಯವೂ ಇರಲಿದೆ. ಆದ್ರೆ ಬಿಪಿಎಲ್ ಕಾರ್ಡ್ ಅನ್ನು ಫಲಾನುಭವಿಗಳಿಗಿಂತ ಅನುಕೂಲವಾಗುವಂತರೂ ಕೂಡ ಬಳಕೆ ಮಾಡುವುದೇ ಹೆಚ್ಚಾಗಿದೆ. ಹೀಗಾಗಿ ಸರ್ಕಾರ ಈ ಬಾರಿ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಹೊಸದಾಗಿ ಸರ್ವೇ ಮಾಡಿಸಲು ಹೊರಟಿದೆ.

ರಾಜ್ಯ ಸರ್ಕಾರಕ್ಕೆ ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, 1 ಕೋಟಿ 28 ಲಕ್ಷ ಮಂದಿ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಆದರೆ ಇಷ್ಟು ಮಂದಿ ಬಿಪಿಎಲ್ ಕಾರ್ಡ್ ಪಡೆಯುವ ಫಲಾನುಭವಿಗಳಲ್ಲ. ಒಂದು ವೇಳೆ ಸರ್ವೇ ನಡೆದರೆ ಅದರಲ್ಲಿ 35 ಲಕ್ಷಕ್ಕೂ ಅಧಿಕ ಮಂದಿಯ ಬಿಪಿಎಲ್ ಕಾರ್ಡ್ ಗಳು ರದ್ದಾಗುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯ ಸರ್ಕಾರ ಆರು ಮಾನದಂಡಗಳ ಆಧಾರದ ಮೇಲೆ ಸರ್ವೇ ಮಾಡಲು ಹೊರಟಿದೆ. ಸರ್ವೇ ಪ್ರಕಾರ ಆ ನಿಯಮಗಳನ್ನು ಪಾಲನೇ ಮಾಡಿಲ್ಲವಾದರೆ ಆಗ ಬಿಪಿಎಲ್ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ.

ಹಾಗಾದ್ರೆ ರಾಜ್ಯ ಸರ್ಕಾರ ಸುಳ್ಳು ಬಿಪಿಎಲ್ ಕಾರ್ಡ್ ಮಾಲೀಕರನ್ನು ಕಂಡು ಹಿಡಿಯಲು ಯಾವ ಮಾನದಂಡಗಳನ್ನು ಅನುಸರಿಸಿದೆ ಎಂಬ ವಿವರ ಇಲ್ಲಿದೆ. ವಾರ್ಷಿಕ ಆದಾಯ 1.2 ಲಕ್ಷ ಮೀರಬಾರದು

3 ಹೆಕ್ಟರ್‌ಗಿಂತ ಹೆಚ್ಚಿನ ಒಣಭೂಮಿ ಹೊಂದಿರಬಾರದು

ವೈಟ್ ಬೋರ್ಡ್ ನಾಲ್ಕು ಚಕ್ರದ ವಾಹನ ಇರಬಾರದು

ಯಾವುದೇ ಸರ್ಕಾರಿ ನೌಕರರಾಗಿರಬಾರದು

ನಗರದ ಭಾಗದಲ್ಲಿ ಮನೆಯ ವಿಸ್ತೀರ್ಣ 1000 ಅಡಿ ಇರಬಾರದು

ವಾಣಿಜ್ಯ, ಆದಾಯ ತೆರಿಗೆ, ITR ಪಾವತಿದಾರಾಗಿರಬಾರದು ಇಷ್ಟು ಮಾನದಂಡ ಅನುಸರಿಸಿ, ಕಾರ್ಡ್ ಗಳನ್ನು ಕ್ಯಾನ್ಸಲ್ ಮಾಡಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *