16ನೇ ಪ್ರೀಮಿಯರ್ ಲೀಗ್ ಅಂತಿಮಘಟ್ಟ ತಲುಪಲಿದೆ. ಭಾನುವಾರವೇ ಫೈನಲ್ ಮ್ಯಾಚ್ ನಡೆಯಬೇಕಿತ್ತು. ಆದರೆ ಮಳೆ ಬಂದ ಕಾರಣಕ್ಕೆ ಮ್ಯಾಚ್ ನಡೆದಿಲ್ಲ. ಇಂದು ಕೊನೆಯ ಮ್ಯಾಚ್ ನಡೆಯಲಿದ್ದು, ಕಪ್ ಯಾರ ಪಾಲಾಗಲಿದೆ ಎಂಬುದು ತಿಳಿಯಲಿದೆ.
ಐಪಿಎಲ್ ನ ಕೊನೆ ಪಂದ್ಯಕ್ಕೆ ಅಹಮದಾಬಾದ್ ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ತೆರೆ ಬೀಳಲಿದೆ. ಇಂದು ಸಂಜೆ 7.30ಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿವೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ ಎಸ್ ಧೋನಿ ತಂಡ ಐದನೇ ಬಾರಿ ಕಪ್ ಮೇಲೆ ಕಣ್ಣಿಟ್ಟಿದೆ. ಇನ್ನು ಗುಜರಾತ್ ಟೈಟಾನ್ಸ್ ನ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಲು ಪ್ರಯತ್ನ ಪಡುತ್ತಿದೆ.
ಈ ಬಾರಿಯ ಐಪಿಎಲ್ ನಲ್ಲಿ ಗೆಲ್ಲುವ ರನ್ನರ್ ಅಪ್ ಹಾಗೂ ವಿನ್ನರ್ ಗೆ ಬಾರೀ ಮೊತ್ತವೇ ಸಿಗಲಿದೆ. ಒಟ್ಟು ಮೊತ್ತ ಸುಮಾರು 46.5 ಕೋಟಿ ರೂಪಾಯಿ ಆಗಿದೆ. ಫೈನಲ್ ತಂಡಗಳು ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ವಿಜೇತರ ಜೊತೆಗೆ ಅಗ್ರ ನಾಲ್ಕು ತಂಡಗಳು ಹೆಚ್ಚಿನ ನಗದು ಬಹುಮಾನಗಳನ್ನು ಸ್ವೀಕರಿಸಲಿದ್ದಾರೆ.