ಬೆಂಗಳೂರು: ಇತ್ತಿಚೆಗೆ 2 ಸಾವಿರ ರೂಪಾಯಿ ನೋಟನ್ನು ಬ್ಯಾನ್ ಮಾಡಲಾಗಿತ್ತು. ಯಾರ್ಯಾರು ಸಂಗ್ರಹಿಸಿಟ್ಟಿದ್ದರೋ ಅವರೆಲ್ಲರಿಂದ ಬ್ಯಾಂಕ್ ನವರು ಹಣವನ್ನು ವಾಪಾಸ್ ತೆಗೆದುಕೊಂಡಿದ್ದಾರೆ. ಹೀಗೆ ಬ್ಯಾಂಕ್ ಗೆ ಡೆಪಾಸಿಟ್ ಆದ 2000 ನೋಟ್ ಕೋಟಿ ಲೆಕ್ಕದಲ್ಲಿ ಡೆಪಾಸಿಟ್ ಆಗಿದೆ.
ಈ ಸಂಬಂಧ ಮಾಹಿತಿ ನೀಡಿರುವ ಆರ್ಬಿಐ, ಜೂನ್ ತಿಂಗಳ ಅಂತ್ಯದಲ್ಲಿ ಬ್ಯಾಂಕ್ ಗೆ ಬಂದಿರುವ ಎರಡು ಸಾವಿರ ನೋಟುಗಳು 2.72 ಲಕ್ಷ ಕೋಟಿಯಾಗಿದೆ. ಸಂಬಂಧಪಟ್ಟ ಬ್ಯಾಂಕ್ ಗಳೇ ಈ ಮಾಹಿತಿ ನೀಡಿದ್ದಾರೆ ಎಂದು ಆರ್ಬಿಐ ತಿಳಿಸಿದೆ.
ಇನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಚಲಾವಣೆಯಲ್ಲಿರೋ 2 ಸಾವಿರ ರೂ. ನೋಟುಗಳ ಹಿಂಪಡೆಯುತ್ತೇವೆ ಎಂದು ಘೋಷಿಸಿತ್ತು. ಹಾಗೆಯೇ ಜನರಿಗೆ 2000 ರೂ. ನೋಟುಗಳನ್ನು ತಮ್ಮ ಬ್ಯಾಂಕ್ನಲ್ಲಿ ಠೇವಣಿ ಮಾಡಲು ಸೆಪ್ಟೆಂಬರ್ 30ನೇ ತಾರೀಕಿನವರೆಗೂ ಅವಕಾಶ ನೀಡಿತ್ತು. ಹೀಗಾಗಿ ಜನ ತಮ್ಮಲ್ಲಿರುವ ನೋಟುಗಳನ್ನು ಬ್ಯಾಂಕ್ ಗಳಿಗೆ ಡೆಪಾಸಿಟ್ ಮಾಡಿದ್ದಾರೆ.