Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಧ್ರುವ ಸರ್ಜಾ ಮಗಳು ಹೇಗಿದ್ದಾಳೆ ಗೊತ್ತಾ..?

---Advertisement---

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯಕ್ಕೆ ಮಾರ್ಟಿನ್ ಹಾಗೂ ಕೆಡಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಫ್ಯಾಮಿಲಿ ಜೊತೆಗೂ ಉತ್ತಮ ಸಮಯ ಕಳೆಯುತ್ತಾರೆ. ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿಗೆ ಮುದ್ದಾದ ಮಗಳಿದ್ದು, ಆ ಪುಟ್ಟ ರಾಜಕುಮಾರಿಯ ದರ್ಶಕ್ಕಾಗಿಯೇ ಎಲ್ಲರೂ ಕಾಯುತ್ತಿದ್ದಾರೆ.

ಆದ್ರೆ ಇತ್ತಿಚೆಗೆ ಧ್ರುವ ಸರ್ಜಾ ಮಗಳ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದರು. ಅದು ದೂರದಿಂದ ಮುಖ ತೋರಿಸಿದ ಫೋಟೋವಾಗಿತ್ತು. ಆಕ್ಷನ್ ಪ್ರಿನ್ಸ್ ನ ಮಗಳು ಹೇಗಿದ್ದಾಳೆ ಎಂಬ ಕುತೂಹಲ ಅಭಿಮಾನಿಗಳು ಸೇರಿದಂತೆ ಎಲ್ಲರಲ್ಲೂ ಸಹಜವಾಗಿಯೇ ಇತ್ತು. ಇವತ್ತು ಆ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ.

ಧ್ರುವ ಸರ್ಜಾ ಸದ್ಯಕ್ಕೆ ತನ್ನ ಮಗಳ ಫೋಟೋಗಳನ್ನು ರಿವಿಲ್ ಮಾಡಿದ್ದಾರೆ. ಪ್ರೇರಣಾ ಜೊತೆಗಿರುವ, ತನ್ನ ಜೊತೆಗಿರುವ ಫೋಟೋಗಳ ಜೊತೆಗೆ ಹೊಸದಾಗಿ ಮಗಳಿಗಾಗಿಯೇ ಫೋಟೋಶೂಟ್ ಮಾಡಿಸಿರುವ ಫೋಟೋಗಳನ್ನು ಹಾಕಲಾಗಿದೆ. ರವಿಚಂದ್ರನ್ ಅವರ ದಯಮಾಡಿ‌ಮುಗಿಲಾಚೆ ಸ್ವಲ್ಪ ನೋಡಿ ಎಲ್ಲರು ಹಾಡಿಗೆ ಬ್ಯೂಟಿಫುಲ್ ಎನಿಸುವ ಫೋಟೋಗಳನ್ನು ಹಾಕಿ ಎಡಿಟ್ ಮಾಡಲಾಗಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಸರ್ಜಾ ಕುಟುಂಬದ ಪುಟ್ಟ ರಾಜಕುಮಾರಿ ಎಂದೇ ಕೊಂಡಾಡುತ್ತಿದ್ದಾರೆ.

Join WhatsApp

Join Now

Join Telegram

Join Now

Leave a Comment