CBSC 12ನೇ ತರಗತಿಯಲ್ಲಿ ಬೆಂಗಳೂರಿನ ಟ್ಯಾಂಕರ್ ಚಾಲಕನ ಮಗಳ ಸಾಧನೆ ಹೇಗಿದೆ ಗೊತ್ತಾ..?

1 Min Read

ಬೆಂಗಳೂರು: ಸಿಬಿಎಸ್ಸಿ ಸಿಲಬಸ್ ನ ಸೆಕೆಂಡ್ ಪಿಯುಸಿ ರಿಸಲ್ಟ್ ನಿನ್ನೆ ಘೋಷಣೆಯಾಗಿದೆ. ಆದರೆ ಕಳೆದ ಬಾರಿಗಿಂತ ಈ ಬಾರಿ ಬೆಂಗಳೂರಿನಲ್ಲೂ ಫಲಿತಾಂಶ ಕಡಿಮೆ ಬಂದಿದೆ. ಅದರಲ್ಲಿ ಟ್ಯಾಂಕರ್ ಚಾಲಕನ ಮಗಳು ಅತ್ಯುತ್ತಮ ಅಂಕ ಪಡೆದಿರುವುದು ಸಂತಸದ ವಿಚಾರವೇ ಸರಿ. ಮೋನಿಕಾ ಎಂ ಎನ್ನುವವರು ಸಾಧನೆ ಎಲ್ಲರ ಗಮನ ಸೆಳೆದಿದ್ದಾರೆ.

ಮೋನಿಕಾ ರಾಮಮೂರ್ತಿ ನಗರದ ಶ್ರೀಚೈತನ್ಯ ಟೆಕ್ನೋ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ವಿಜ್ಞಾನ ವಿಭಾಗದಲ್ಲಿ 500ಕ್ಕೆ 494 ಅಂಕಗಳನ್ನು ಗಳಿಸಿದ್ದಾರೆ. ಈ ಮೂಲಕ ಸಾಧನೆ ಮಾಡಿದ್ದಾರೆ. ಮೋನಿಕಾ ಬಡತನದ ಹಿನ್ನೆಲೆಯಿಂದ ಬಂದರೂ ಸಹ ಓದಿನಲ್ಲಿ ಮುಂದೆ ಇದ್ದಾರೆ. ಅಪ್ಪ ಅಮ್ಮನ ಕನಸ್ಸನ್ನು ನನಸಾಗಿಸಿದ್ದಾರೆ.

ಮೋನಿಕಾ ತಂದೆ ಮಂಜುನಾಥ್ ಟ್ಯಾಂಕರ್ ಓಡಿಸುತ್ತಾರೆ. ನಗರದಾದ್ಯಂತ ನೀರು ಸರಬರಾಜು ಮಾಡುತ್ತಾರೆ. ಮಂಜುನಾಥ್ ಗೆ ಓದುವುದಕ್ಕೆ ಯಾವುದೇ ಸೌಲಭ್ಯ ಇಲ್ಲದೆ ಇದ್ದ ಕಾರಣ ಎಸ್ಎಸ್ಎಲ್ಸಿ ತನಕ ಮಾತ್ರ ಓದಿದ್ದರು. ಆದರೆ ಮಗಳ ಬಗ್ಗೆ ದೊಡ್ಡ ಕನಸ್ಸನ್ನೇ ಕಂಡಿದ್ದಾರೆ. ಟ್ಯಾಂಕರ್ ಓಡಿಸಿದರು, ಮಗಳನ್ನು ಒಳ್ಳೆ ಕಾಲೇಜಿನಲ್ಲಿ ಓದಿಸಿ, ಇಂದು ಮಗಳಿಂದ ಹೆಸರು ಬರುವಂತೆ ಆಗಿದೆ.

ಈ ಸಂಭ್ರಮದ ಕ್ಷಣದಲ್ಲಿ ಮೋನಿಕಾ ಕೂಡ ಅಪ್ಪ ಅಮ್ಮನಿಗೆ ಥ್ಯಾಂಕ್ಸ್ ಹೇಳಿದ್ದಾರೆ. ‘ನನ್ನ ಸಂಪೂರ್ಣ ಶೈಕ್ಷಣಿಕ ಜೀವನಕ್ಕೆ ನನ್ನ ಪೋಷಕರು ಬೆಂಬಲ‌ ನೀಡಿದ್ದಾರೆ. ನನ್ನ ತಂದೆ ಕಡು ಬಡತನವಿದ್ದರು, ನನಗೆ ನೀಡುವ ಯಾವ ಸೌಲಭ್ಯದಲ್ಲೂ ಕೊರತೆ ಮಾಡಲಿಲ್ಲ’ ಎಂದಿದ್ದಾರೆ.

 

ತಂದೆ ಮಂಜುನಾಥ್ ಮಾತನಾಡಿ, ‘ನಾವು ಪಟ್ಟ ಕಷ್ಟವನ್ನು ನಮ್ಮ ಮಗಳು ಪಡಬಾರದು. ಅವಳನ್ನು ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಪ್ರೋತ್ಸಾಹಿಸುತ್ತೇನೆ. ಅಷ್ಟೇ ಅಲ್ಲ ಜೀವನದಲ್ಲಿ ಅವಳು ಏನನ್ನೇ ಆಯ್ಕೆ ಮಾಡಿದರು ಅದನ್ನು ಪ್ರೋತ್ಸಾಹಿಸುತ್ತೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *