Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮನೆಯ ಈ ಜಾಗದಲ್ಲಿ ಬೀಗದ ಕೈ ಇಡಬೇಡಿ; ವಾಸ್ತು ಪ್ರಕಾರ ಅಶುಭವೆಂತೆ!

---Advertisement---

ಮನೆಯಲ್ಲಿರುವ ಪ್ರತಿಯೊಂದು ವಸ್ತುವಿಗೂ ಅದರದ್ದೇ ಆದ ಮಹತ್ವವಿದೆ. ನಾವು ಪ್ರತಿದಿನ ಬಳಸುವ ಬೀಗದ ಕೈಗಳನ್ನು ಮಾತ್ರ ಬಹುತೇಕರು ಎಲ್ಲೆಂದರಲ್ಲಿ ಇಟ್ಟುಬಿಡುತ್ತಾರೆ. ಹೊರಗಿನಿಂದ ಮನೆಗೆ ಬಂದ ತಕ್ಷಣ ಟೇಬಲ್‌, ಸೋಫಾ ಅಥವಾ ಇತರ ಸ್ಥಳಗಳಲ್ಲಿ ಕೀಗಳನ್ನು ಇಡುವ ಅಭ್ಯಾಸ ಅನೇಕರಿಗಿದೆ.ವಾಸ್ತು ಶಾಸ್ತ್ರದ ಪ್ರಕಾರ, ಬೀಗದ ಕೈಗಳು ಮನೆಯ ಆಸ್ತಿ, ಸಂಪತ್ತು ಮತ್ತು ಭದ್ರತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಅವುಗಳನ್ನು ಸರಿಯಾದ ಸ್ಥಳದಲ್ಲಿ ಇಡುವುದು ಮುಖ್ಯ. ತಪ್ಪಾದ ಜಾಗದಲ್ಲಿ ಕೀಗಳನ್ನು ಇಡುವುದರಿಂದ ನಕಾರಾತ್ಮಕತೆ ಹೆಚ್ಚಬಹುದು ಎಂಬ ನಂಬಿಕೆಯಿದೆ.

ಬೀಗದ ಕೈಗಳನ್ನು ಎಲ್ಲಿಡಬಾರದು?
ಮನೆಯ ಹಾಲ್‌ ಅಥವಾ ಪ್ರವೇಶ ದ್ವಾರದ ಬಳಿ ಎಲ್ಲರಿಗೂ ಕಾಣುವಂತೆ ಕೀಗಳನ್ನು ಇಡುವುದನ್ನು ವಾಸ್ತುದಲ್ಲಿ ಸೂಕ್ತವೆಂದು ಪರಿಗಣಿಸುವುದಿಲ್ಲ. ಅದೇ ರೀತಿ ಪೂಜಾ ಕೋಣೆ, ಅಡುಗೆಮನೆ ಮತ್ತು ಊಟದ ಮೇಜಿನ ಮೇಲೂ ಬೀಗದ ಕೈಗಳನ್ನು ಇಡಬಾರದು ಎನ್ನಲಾಗುತ್ತದೆ.ಮಲಗುವ ಕೋಣೆಯಲ್ಲಿ ಕೀಗಳನ್ನು ಇಡುವುದರಿಂದ ದಾಂಪತ್ಯ ಜೀವನದಲ್ಲಿ ಮನಸ್ತಾಪ ಉಂಟಾಗಬಹುದು ಎಂಬ ವಾಸ್ತು ನಂಬಿಕೆಯಿದೆ. ಮುರಿದ, ಬಾಗಿದ ಅಥವಾ ತುಕ್ಕು ಹಿಡಿದ ಕೀಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದನ್ನೂ ತಪ್ಪಿಸುವಂತೆ ಸಲಹೆ ನೀಡಲಾಗುತ್ತದೆ.

ಕೀಗಳನ್ನು ಇಡಲು ಯಾವ ದಿಕ್ಕು ಸೂಕ್ತ?
ವಾಸ್ತು ನಿಯಮಗಳ ಪ್ರಕಾರ ಮನೆಯ ಪಶ್ಚಿಮ ಅಥವಾ ವಾಯವ್ಯ ದಿಕ್ಕು ಬೀಗದ ಕೈಗಳನ್ನು ಇಡಲು ಸೂಕ್ತವೆಂದು ಹೇಳಲಾಗುತ್ತದೆ. ಈ ಭಾಗದಲ್ಲಿ ಮರದ ಕೀ-ಸ್ಟ್ಯಾಂಡ್‌ ಅಳವಡಿಸಿ ಕೀಗಳನ್ನು ವ್ಯವಸ್ಥಿತವಾಗಿ ಇಡಬಹುದು.ಕೀ-ಸ್ಟ್ಯಾಂಡ್‌ನಲ್ಲಿ ದೇವರ ಚಿತ್ರಗಳನ್ನು ಇರಿಸದಿರುವುದು ಉತ್ತಮ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಮನೆಯ ಮುಖ್ಯ ಬಾಗಿಲು, ಬೀರು ಹಾಗೂ ಇತರ ಕೀಗಳನ್ನು ಪ್ರತ್ಯೇಕವಾಗಿ ವ್ಯವಸ್ಥಿತವಾಗಿ ಇಡುವುದು ಒಳಿತು.

ಮನೆಯ ಈಶಾನ್ಯ ದಿಕ್ಕನ್ನು ದೇವರ ಮೂಲೆಯೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ಭಾಗದಲ್ಲಿ ಬೀಗದ ಕೈಗಳನ್ನು ಇಡಬಾರದು ಎಂಬುದು ವಾಸ್ತು ನಂಬಿಕೆ.ಅದೇ ರೀತಿ ವಾಹನದ ಕೀಗಳನ್ನು ಕನ್ನಡಿಯ ಮುಂದೆ ಇಡುವುದನ್ನು ತಪ್ಪಿಸಬೇಕು ಎಂದು ಹೇಳಲಾಗುತ್ತದೆ. ಕೀ-ಸ್ಟ್ಯಾಂಡ್‌ ಅನ್ನು ನಿಯಮಿತವಾಗಿ ಸ್ವಚ್ಛವಾಗಿಟ್ಟುಕೊಳ್ಳುವುದೂ ಮುಖ್ಯ.

ಸೂಚನೆ: ಇವು ವಾಸ್ತು ಶಾಸ್ತ್ರಕ್ಕೆ ಸಂಬಂಧಿಸಿದ ನಂಬಿಕೆಗಳು ಮಾತ್ರ. ಇವುಗಳಿಗೆ ವೈಜ್ಞಾನಿಕವಾಗಿ ದೃಢಪಟ್ಟ ಪುರಾವೆಗಳಿಲ್ಲ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now