ಬಾಗಲಕೋಟೆ: ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷವನ್ನು ಸೋಲಿಸಲೇಬೇಕೆಂದು ಹೋರಾಡುತ್ತಿರುವ ಬಿಜೆಪಿ ನಾಯಕರು ಅದ್ಯಾಕೋ ಎರಡು ದಿನದಿಂದ ದೊಡ್ಡಗೌಡರ ಸೊಸೆಗೆ ನಾವೇ ಟಿಕೆಟ್ ಕೊಡುತ್ತೀವಿ ಅಂತ ಹಿಂದೆ ಬಿದ್ದಿದ್ದಾರೆ. ಇದು ವ್ಯಂಗ್ಯವೋ.. ಸತ್ಯವೋ ತಿಳಿಯುತ್ತಿಲ್ಲ.
ಭವಾನಿ ರೇವಣ್ಣ ಅವರು ಈ ಬಾರಿಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅಷ್ಟೇ ಅಲ್ಲ ಕ್ಷೇತ್ರವನ್ನು ಅವರೇ ಘೋಷಣೆ ಮಾಡಿಕೊಂಡಿದ್ದಾರೆ. ಹಾಸನದಲ್ಲಿ ಈ ಬಾರಿ ಬಿಜೆಪಿಗೆ ವಿರುದ್ಧವಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಆದರೆ ಕುಮಾರಸ್ವಾಮಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಸನದಲ್ಲಿ ಅವರೇ ನಿಲ್ಲಬೇಕು ಎಂದಿಲ್ಲ ಎಂದು ತಮ್ಮ ತೀರ್ಮಾನ ಹೇಳಿದ್ದಾರೆ. ಈಗ ದೊಡ್ಡಗೌಡರ ಅಂಗಳದಲ್ಲಿ ಬಾಲ್ ಇದೆ. ಇದೆ. ತೀರ್ಮಾನ ಅವರೇ ಮಾಡಬೇಕಿದೆ.
ಆದರೆ ಅದಕ್ಕೂ ಮುನ್ನ ಜೆಡಿಎಸ್ ಕುಟುಂಬದ ಒಳಗಿನ ವಿಚಾರಕ್ಕೆ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅದರಲ್ಲೂ ನಾವೇ ಟಿಕೆಟ್ ನೀಡುತ್ತೀವಿ ಎನ್ನುತ್ತಿದ್ದಾರೆ. ನಿನ್ನೆಯಷ್ಟೇ ಸಿಟಿ ರವಿ ಟಿಕೆಟ್ ನೀಡುವುದಾಗಿ ತಿಳಿಸಿದ್ದರು. ಈಗ ಅದೇ ವಿಚಾರಕ್ಕೆ ಮಾಜಿ ಸಚಿವ ಈಶ್ವರಪ್ಪ ಮಾತನಾಎಇದ್ದಾರೆ.
ಬಾಗಲಕೋಟೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, “ರಾಜಕೀಯ ಸ್ಥಾನಮಾನಕ್ಕಾಗಿ ಇಂದು ಯಾರು..? ಎಲ್ಲಿ ಬೇಕಾದರೂ ನಿಲ್ಲಬಹುದು. ಈ ಮಧ್ಯೆ ಭವಾನಿ ರೇವಣ್ಣ ನಾನೇ ಕ್ಯಾಂಡಿಡೇಟ್ ಅಂತಿದ್ದಾರೆ ಅಷ್ಟೆ. ಹಾಗಾದರೆ ಅವರಿಗೆ ಪಕ್ಷ ಇಲ್ಲವಾ..? ಹೇಳೋರು ಕೇಳೋರು ಯಾರು ಇಲ್ಲವಾ..? ಅನಿತಾ ಕುಮಾರಸ್ವಾಮಿ ಅವರು ಅವರ ಮಗನಿಗೆ ಕ್ಷೇತ್ರ ನಿಗದಿ ಮಾಡ್ತಾರೆ. ಅವರವರೇ ತಮ್ಮನ್ನ, ತಮ್ಮ ಮಕ್ಕಳನ್ನು ಚುನಾವಣಾ ಅಭ್ಯರ್ಥಿಗಳೆಂದು ಘೋಷಣೆ ಮಾಡಿದರೆ ಹೇಗೆ..? ಹೀಗಾದ್ರೆ ಒಂದು ಪಕ್ಷ ಅಂತ ಯಾಕಿರಬೇಕು..? ಒಂದು ಚುನಾವಣಾ ಸಮಿತಿ ಅಂತ ಯಾಕಿರಬೇಕು..? ಇದು ಒಳ್ಳೆಯ ಬೆಳವಣಿಗೆಯಲ್ಲ” ಎಂದಿದ್ದಾರೆ.