Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ದೆಹಲಿಯ ಯಾತ್ರೆಯ ಬಳಿಕ ಅಜ್ಜಯ್ಯನ ಮೊರೆ ಹೋದ ಡಿಕೆಶಿ

ಡಿಕೆ ಶಿವಕುಮಾರ್
---Advertisement---

 

ತುಮಕೂರು: ದೆಹಲಿಗೆ ಹೋಗಿ, ಹೈಕಮಾಂಡ್ ಭೇಟಿಯಾದ ಬಳಿಕವೂ ಡಿಕೆ ಶಿವಕುಮಾರ್ ಅವರಿಗೆ ತಮ್ಮ‌ಮನಸ್ಸಿನ ತಳಮಳ ಇನ್ನು ಕಡಕಮೆಯಾದಂತೆ ಇಲ್ಲ. ಸಮಾಧಾನಕರ ಉತ್ತರ ಅಲ್ಲಿಂದ ಸಿಕ್ಕಿರಬಹುದು. ಆದರೆ ಇಬ್ಬರನ್ನು ಕರೆಸಿ, ಮಾತನಾಡಿ, ಒಂ್ಉ ನಿರ್ಧಾರವನ್ನು ಹೈಕಮಾಂಡ್ ಹೇಳಿದರೆ ಖಂಡಿತ ಡಿಕೆ ಶಿವಕುಮಾರ್ ಸಮಾಧಾನಗೊಳ್ಳುತ್ತಾರೆ. ಇನ್ನು ಉಳಿದಿರುವುದು ಎರಡು ವರ್ಷಗಳ ಸೆಣೆಸಾಟ. ಅಷ್ಟರೊಳಗೆ ಸಿಎಂ ಆಗುವ ಆಸೆ ಫಲ ಕೊಡುತ್ತಾ ಎಂಬ ಆತಂಕ ಸಹಜವಾಗಿಯೇ ಇರುತ್ತದೆ.

ಈ ಎಲ್ಲಾ ಆಲೋಚನೆಗಳ ನಡುವೆ ಡಿಕೆ ಶಿವಕುಮಾರ್ ಅವರು ಅಜ್ಜಯ್ಯನ ಮೊರೆ ಹೋಗ್ತಾರೆ ಎಂಬ ಮಾಹಿತಿ ಇದೆ. ತುಮಕೂರು ಜಿಲ್ಲೆ, ತಿಪಟೂರಿನ ನೊಣವಿನಕೆರೆಯಲ್ಲಿರುವ ಅಜ್ಜಯ್ಯ ಅಂದ್ರೆ ಡಿಕೆ ಶಿವಕುಮಾರ್ ಅವರಿಗೆ ಅತಿಯಾದ ನಂಬಿಕೆ. ಅಜ್ಜಯ್ಯನ ಅಪಗಪಣೆ ಪಡೆದು ಮುಂದಿನ ನಿರ್ಧಾರ ಕೈಗೊಳ್ತಾರೆ ಎನ್ನಲಾಗಿದೆ. ಹೀಗಾಗಿಯೇ ಅಜ್ಜಯ್ಯನ ದೇವಸ್ಥಾನಕ್ಕೆ ಭೇಟಿ ನೀಡುವ ಯೋಜನೆ ಹಾಕಿಕೊಂಡಿದ್ದಾರೆ. ಜಾತ್ರಾ ಮಹೋತ್ಸವ ಕೂಡ ಇರುವ ಕಾರಣ, ಭಾಗಿಯಾಗಿ ಅಜ್ಜಯ್ಯನ ದರ್ಶನ ಪಡೆಯಲಿದ್ದಾರೆ.

ಡಿಕೆ ಶಿವಕುಮಾರ್ ಅವರು ಮೊದಲಿನಿಂದಲೂ ರೂಢಿಸಿಕೊಂಡು ಬಂದಿರುವ ಪದ್ಧತಿ ಅಂದ್ರೆ ಅಜ್ಜಯ್ಯನ ದರ್ಶನ ಮಾಡುವುದು. ಸಂಕಷ್ಟದಲ್ಲಾಗಲಿ, ಸಂತಸದ ಸಂದರ್ಭದಲ್ಲಾಗಲಿ ಅಜ್ಜಯ್ಯನ ಗುಡಿಗೆ ಹೋಗಿ ದರ್ಶನ ಪಡೆದು ಬರ್ತಾರೆ. ಬಹಳಷ್ಟು ತಾಳ್ಮೆಯಿಂದ ಸಿಎಂ ಹುದ್ದೆಗಾಗಿ ಕಾಯ್ತಿದ್ದಾರೆ. ಹೀಗಾಗಿ ಈ ಬಾರಿಯಾದರೂ ಅಜ್ಜಯ್ಯನ ಆಶೀರ್ವಾದ ಇರಲಿ, ಸಿಎಂ ಆಗುವ ಕನಸು ನನಸಾಗಲಿ ಎಂದು ಬೇಡಿಕೊಳ್ಳಲಿದ್ದಾರೆ. ಈ ವಿಚಾರಕ್ಕೆ ದೇವರುಗಳಿಗೆ ವಿಶೇಷ ಪೂಜೆಯನ್ನು ನೆರವೇರಿಸಿದ್ದಾರೆ. ಇನ್ನು ದೇವರು ಫಲ ಕೊಡಲಿ ಅಂತಷ್ಟೇ ಕಾಯ್ತಿದ್ದಾರೆ. ಹೈಕಮಾಂಡ್ ನಾಯಕರು ಕೂಡ ಭರವಸೆಯನ್ನ ಕೊಟ್ಟು ಕಳುಹಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...