ಮನಮೋಹನ್ ಸಿಂಗ್ ಅವರು ರೈತರ ಸಾಲ ಮನ್ನಾ ಮಾಡಿದ್ದನ್ನ ನೆನೆದು ಭಾವುಕರಾದ ಡಿಕೆಶಿ..!

ವಯೋಸಹಜ ಅನಾರೋಗ್ಯದಿಂದ 92ನೇ ವಯಸ್ಸಿಗೆ ನಿಧನರಾಗಿದ್ದಾರೆ. ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಇಂದು ದೆಹಲಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಅಂತ್ಯಕ್ರಿಯೆ ನಡೆಯಲಿದೆ. ಡಿಸಿಎಮನ ಡಿಕೆ ಶಿವಕುಮಾರ್ ಅವರು ಕೂಡ ದೆಹಲಿಗೆ ಹೋಗಿ ಅಂತಿಮ ದರ್ಶನ ಪಡೆದಿದ್ದಾರೆ. ಈ ವೇಳೆ ಮನಮೋಹಸಿಂಗ್ ಅವರು ಮಾಡಿದ ಸೇವೆಯನ್ನು ನೆನೆದಿದ್ದಾರೆ‌.

ಅನೇಕ ಬಾರಿ ಕೇವಲ ದೊಡ್ಡ ದೊಡ್ಡ ಉದ್ದಿಮೆದಾರರ ಸಾಲವನ್ನು ಮನ್ನಾ ಮಾಡಲಾಗುತ್ತಿತ್ತು. ಮನಮೋಹನ್ ಸಿಂಗ್ ಅವರು ಮೊಟ್ಟ ಮೊದಲ ಬಾರಿಗೆ 70 ಸಾವಿರ ಕೋಟಿ ರೂಪಾಯಿ ರೈತರ ಸಾಲವನ್ನು ಮನ್ನಾ ಮಾಡಿದವರು. ಮನಮೋಹನ್ ಸಿಂಗ್ ಅವರು ನಮ್ಮನ್ನು ಬಿಟ್ಟು ಹೋಗಿರಬಹುದು. ಆದರೆ ಅವರ ಕಾರ್ಯಗಳ ಮೂಲಕ ನಮ್ಮ ಜೊತೆಗೆ ಜೀವಂತವಾಗಿದ್ದಾರೆ. ನಾವೆಲ್ಲರೂ ಅವರ ಆದರ್ಶಗಳನ್ನು ಉಳಿಸುವ ಕೆಲಸ ಮಾಡಬೇಕಿದೆ. ನಾವೆಲ್ಲರೂ ಇವರ ಹಾದಿಯಲ್ಲಿ ನಡೆಯೋಣ ಎಂದು ಆಶಿಸುತ್ತೇನೆ. ಅತ್ಯಂತ ಗೌರವ ಪೂರ್ವಕವಾಗಿ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಮನಮೋಹನ್ ಸಿಂಗ್ ಅವರು ಈ ದೇಶದ ಶ್ರೇಷ್ಠ ಪ್ರಧಾನ ಮಂತ್ರಿ.

ದೇಶದ ಎಲ್ಲಾ ವರ್ಗದ ಜನರನ್ನು ಕಾಪಾಡಿದ ನಿಜವಾದ ಆರ್ಥಿಕ ತಜ್ಞ ಹಾಗೂ ಕ್ರಾಂತಿಕಾರಿ. ಬೆಂಗಳೂರು ವಿಶ್ವವಿದ್ಯಾಲಯದ ಮನಮೋಹನ್ ಸಿಂಗ್ ಅವರ ಹೆಸರಿನಲ್ಲಿ ಆರ್ಥಿಕ ಸಂಶೋಧನಾ ಹಾಗೂ ಅಧ್ಯಯನ ಕೇಂದ್ರವನ್ನು ಸ್ಥಾಪನೆ ಮಾಡಬೇಕೆಂದು ಶಿಕ್ಷಣ ಸಚಿವರಲ್ಲಿ ಮನವಿ ಮಾಡುತ್ತೇನೆ. ಮುಂದಿನ ಪೀಳಿಗೆಗೆ ಇವರ ಆರ್ಥಿಕ ಕ್ರಾಂತಿ ಸೇರಿದಂತೆ ದೇಶಕ್ಕೆ ನೀಡಿದ ಕೊಡುಗೆಗಳನ್ನು ತಲುಪಿಸುವುದೇ ನಿಜವಾದ ಶ್ರದ್ಧಾಂಜಲಿ. ವಿದ್ಯಾರ್ಥಿಗಳು ಇವರ ಆರ್ಥಿಕ ನೀತಿಯನ್ನು ಅಧ್ಯಯನ ಮಾಡುವ ಮೂಲಕ ಮನಮೋಹನ್ ಸಿಂಗ್ ಅವರ ಜ್ಞಾನವನ್ನು ಪಸರಿಸುವ ಹಾಗೂ ಉಳಿಸುವ ಕೆಲಸವಾಗುತ್ತದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *